ಕರ್ನಾಟಕ

karnataka

ಸುಡಾನ್​ನಲ್ಲಿ ಶಸ್ತ್ರಸಜ್ಜಿತ ಗುಂಪುಗಳಿಂದ ದಾಳಿ: 800 ಕ್ಕೂ ಹೆಚ್ಚು ಮಂದಿ ಸಾವು, 4.8 ದಶಲಕ್ಷ ಜನ ಸ್ಥಳಾಂತರ

By ETV Bharat Karnataka Team

Published : Nov 12, 2023, 9:25 AM IST

ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್​ಹೆಚ್​ಸಿ ಆರ್) ನೀಡಿದ ಮಾಹಿತಿ ಪ್ರಕಾರ, ಸುಡಾನ್​ನ ಪಶ್ಚಿಮ ಡಾರ್ಫರ್​ನಲ್ಲಿ ಸಶಸ್ತ್ರ ಬಂಡಾಯದಿಂದಾಗಿ ಕಳೆದ ಆರು ತಿಂಗಳಲ್ಲಿ 800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 4.8 ದಶಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.

800 Sudanese reportedly killed in attack
ಸುಡಾನ್​ನಲ್ಲಿ ಶಸ್ತ್ರಸಜ್ಜಿತ ಗುಂಪುಗಳಿಂದ ದಾಳಿ

ಸುಡಾನ್: ಸುಡಾನ್‌ನ ಪಶ್ಚಿಮ ಡಾರ್ಫರ್​ನ ಅರ್ದಮಾಟಾದಲ್ಲಿ ಸಶಸ್ತ್ರ ದಂಗೆಯಿಂದಾಗಿ ಕಳೆದ ಆರು ತಿಂಗಳಲ್ಲಿ 800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 4.8 ದಶಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಕಚೇರಿ ಮಾಹಿತಿ ನೀಡಿದೆ.

"ಸುಡಾನ್‌ನ ಡಾರ್ಫರ್ ಪ್ರದೇಶದಾದ್ಯಂತ ಹೆಚ್ಚುತ್ತಿರುವ ಹಿಂಸಾಚಾರವು ಎರಡು ದಶಕಗಳ ಹಿಂದೆ ಮಾಡಿದ ದುಷ್ಕೃತ್ಯಗಳು ಪುನರಾವರ್ತನೆಯಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ. ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗೆ ಅರ್ದಮಾಟಾ ಶಿಬಿರವನ್ನು ತೆರೆಯಲಾಗಿತ್ತು. ಸುಮಾರು 100 ಶೆಲ್ಟರ್‌ಗಳನ್ನು ನೆಲಸಮಗೊಳಿಸಲಾಗಿದ್ದು, ಯುಎನ್‌ಎಚ್‌ಸಿಆರ್ ಪರಿಹಾರ ವಸ್ತುಗಳು ಸೇರಿದಂತೆ ವ್ಯಾಪಕ ಲೂಟಿ ಕೂಡ ನಡೆದಿದೆ" ಅಂತ ವಿಶ್ವಸಂಸ್ಥೆಯು ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದೆ.

ಈ ಮಧ್ಯೆ, ಎರಡು ದಶಕಗಳ ಹಿಂದೆ ಡಾರ್ಫೂರ್‌ನಾದ್ಯಂತ ಸಾವಿರಾರು ಜನರು ಕೊಲ್ಲಲ್ಪಟ್ಟರು ಮತ್ತು ಜಂಜಾವೀಡ್ ಎಂದು ಕರೆಯಲ್ಪಡುವ ಮಿತ್ರಪಕ್ಷಗಳ ಬೆಂಬಲದೊಂದಿಗೆ ಸುಡಾನ್ ಸರ್ಕಾರಿ ಪಡೆಗಳು ಹಾಗೂ ಪದಚ್ಯುತಗೊಂಡ ಅಧ್ಯಕ್ಷ ಒಮರ್ ಅಲ್-ಬಶೀರ್ ಅವರ ನಿರಂಕುಶ ಆಡಳಿತವನ್ನು ವಿರೋಧಿಸುವ ಬಂಡಾಯ ಗುಂಪುಗಳು 2019ರಲ್ಲಿ ಸ್ಥಳಾಂತರಗೊಂಡವು. ಈ ವೇಳೆ ಲಕ್ಷಾಂತರ ಜನರು ವಲಸೆ ಹೋಗಿದ್ದಾರೆ ಎಂದು ತಿಳಿಸಿದೆ.

ಜನಾಂಗೀಯ ಹತ್ಯೆ ತಡೆಗಟ್ಟುವ ಕುರಿತು ಯುಎನ್​ ವಿಶೇಷ ಸಲಹೆಗಾರರಾದ ಆಲಿಸ್ ವೈರಿಮು ನ್ಡೆರಿಟು ಅವರು ಕಳೆದ ಜೂನ್‌ನಲ್ಲಿಯೇ ಎಚ್ಚರಿಸಿದ್ದಾರೆ. ಜನಾಂಗೀಯತೆಯ ಆಧಾರದ ಮೇಲೆ ದಾಳಿಗಳು ಸೇರಿದಂತೆ ಪಶ್ಚಿಮ ಡಾರ್ಫರ್​ನಲ್ಲಿ ಹೋರಾಟ ಮುಂದುವರಿದರೆ ಯುದ್ಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಕಾರಣವಾಗಬಹುದು. ಪರಿಣಾಮವಾಗಿ, ನಿರಂತರ ಲೈಂಗಿಕ ಹಿಂಸೆ, ಚಿತ್ರಹಿಂಸೆ, ಅನಿಯಂತ್ರಿತ ಹತ್ಯೆಗಳು, ನಾಗರಿಕರ ಸುಲಿಗೆ ಮತ್ತು ನಿರ್ದಿಷ್ಟ ಜನಾಂಗೀಯ ಗುಂಪುಗಳನ್ನು ಗುರಿಯಾಗಿಸಿಕೊಂಡು ನಡೆಯುವ ದಾಳಿ ಹೆಚ್ಚಾಗಬಹುದು ಎಂದು ಯುಎನ್​ ನಿರಾಶ್ರಿತರ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ :ದಿಶಾ ಆ್ಯಪ್​ ಡೌನ್‌ಲೋಡ್ ವಿಚಾರವಾಗಿ ಯೋಧನ ಮೇಲೆ ಆಂಧ್ರ ಪೊಲೀಸರ ದಾಳಿ

ಸೇನೆ ಮತ್ತು ಕ್ಷಿಪ್ರ ಬೆಂಬಲ ಪಡೆಗಳು (RSF) ಎಂದು ಕರೆಯಲ್ಪಡುವ ಅರೆಸೈನಿಕ ಗುಂಪಿನ ನಡುವೆ ಏಪ್ರಿಲ್ ಮಧ್ಯದಲ್ಲಿ ಹೋರಾಟ ಪ್ರಾರಂಭವಾದಾಗಿನಿಂದ ಸುಡಾನ್‌ನಲ್ಲಿ 4.8 ದಶಲಕ್ಷಕ್ಕಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. 1.2 ದಶಲಕ್ಷ ಜನರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. UNHCR ಪ್ರಕಾರ, ಕಳೆದ ವಾರವೊಂದರಲ್ಲೇ 8,000 ಕ್ಕೂ ಹೆಚ್ಚು ಜನರು ಚಾಡ್‌ಗೆ ಪಲಾಯನ ಮಾಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ.

ABOUT THE AUTHOR

...view details