ಕರ್ನಾಟಕ

karnataka

France quake: ಫ್ರಾನ್ಸ್​ನಲ್ಲಿ 5.8 ತೀವ್ರತೆಯ ಭೂಕಂಪನ: ಮನೆಗಳು ಬಿರುಕು, ವಿದ್ಯುತ್ ಸಂಪರ್ಕ ಕಡಿತ

By

Published : Jun 17, 2023, 10:45 AM IST

ಫ್ರಾನ್ಸ್​ನಲ್ಲಿ 5.8 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದರಿಂದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಲ್ಲಿನ ಸಚಿವರೊಬ್ಬರು ತಿಳಿಸಿದ್ದಾರೆ.

ಫ್ರಾನ್ಸ್​ನಲ್ಲಿ 5.8 ತೀವ್ರತೆಯ ಭೂಕಂಪನ
ಫ್ರಾನ್ಸ್​ನಲ್ಲಿ 5.8 ತೀವ್ರತೆಯ ಭೂಕಂಪನ

ಪ್ಯಾರಿಸ್:ಫ್ರಾನ್ಸ್‌ನಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ಈವರೆಗಿನ ದಾಖಲೆಯ ಅತ್ಯಂತ ಪ್ರಬಲ ಕಂಪನ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ಫ್ರೆಂಚ್ ಸೆಂಟ್ರಲ್ ಸೀಸ್ಮಾಲಾಜಿಕಲ್ ಬ್ಯೂರೋ (ಎಫ್‌ಸಿಎಸ್‌ಬಿ) ಪ್ರಕಾರ, ಶುಕ್ರವಾರ ಸಂಜೆ 6.38 ಗಂಟೆಗೆ ಭೂಮಿ ಕಂಪಿಸಿದೆ. ಭೂಕಂಪದ ಕೇಂದ್ರಬಿಂದು ನಿಯೋರ್ಟ್ ನಗರದ ನೈಋತ್ಯಕ್ಕೆ 28 ಕಿಮೀ ದೂರದಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ.

ಮೆಟ್ರೋಪಾಲಿಟನ್ ನಗರವಾದ ಫ್ರಾನ್ಸ್‌ನಲ್ಲಿ ದಾಖಲಾದ ಪ್ರಬಲ ಭೂಕಂಪಗಳಲ್ಲಿ ಇದು ಒಂದಾಗಿದೆ ಎಂದು ಅಲ್ಲಿನ ಸಚಿವ ಕ್ರಿಸ್ಟೋಫ್ ಬೆಚು ಹೇಳಿದ್ದಾರೆ. ಇದರಿಂದಾದ ಹಾನಿಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚಿನ ಹಾನಿ ಉಂಟಾಗಿಲ್ಲ ಎಂದು ಅವರು ಹೇಳಿದರು.

ಇಲ್ಲಿಯವರೆಗೆ, ವ್ಯಕ್ತಿಯೋರ್ವರಿಗೆ ಸಣ್ಣ ಗಾಯವಾಗಿದೆ. ತುರ್ತು ಸೇವೆಗಳನ್ನು ಒದಗಿಸಲಾಗಿದೆ" ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ಭೂಮಿ ನಡುಗಿದ್ದರಿಂದ ಕಟ್ಟಡಗಳಲ್ಲಿ ಬಿರುಕು ಉಂಟಾಗಿವೆ. ಹಲವಾರು ವಸ್ತುಗಳು ಹಾನಿಗೊಳಗಾಗಿವೆ. ಸದ್ಯಕ್ಕೆ ಯಾವುದೇ ಸಾವುನೋವು ವರದಿಯಾಗಿಲ್ಲ. ಪ್ರಸ್ತುತ 1,100 ಮನೆಗಳು ವಿದ್ಯುತ್ ಸಂಪರ್ಕ ಕಡಿದುಕೊಂಡಿವೆ. ವೋಲ್ಟೇಜ್ ಲೈನ್ ಹಾನಿಗೀಡಾಗಿದೆ. ಹೀಗಾಗಿ ಹಲವು ಮನೆಗಳು ಕಾರ್ಗತ್ತಲಿಗೆ ಒಳಗಾಗಿವೆ ಎಂದು ತಿಳಿಸಿದ್ದಾರೆ.

Deux-Sevres ಇಲಾಖೆಯಲ್ಲಿ ಒಬ್ಬ ವ್ಯಕ್ತಿ ಸ್ವಲ್ಪ ಗಾಯಗೊಂಡು ಸ್ಥಳದಲ್ಲೇ ಚಿಕಿತ್ಸೆ ಪಡೆದಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಫ್ರಾನ್ಸ್​​​​ನಲ್ಲಿರುವ Deux-Sevres ಇಲಾಖೆ ನೈಋತ್ಯ ಭಾಗದಲ್ಲಿ ವಸ್ತು ಹಾನಿ ಆಗಿರುವ ಬಗ್ಗೆ ವರದಿಯಾಗಿದೆ," ಕಟ್ಟಡಗಳ ಮೇಲೆ ಕಲ್ಲು ಬಿದ್ದಿದೆ ಮತ್ತು ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಪ್ರಿಫೆಕ್ಚರ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಭೂಮಿ ನಡುಗಿದ್ದರಿಂದ ನಾವೆಲ್ಲ ಭಯಭೀತರಾಗಿ ಮನೆಗಳಿಂದ ಹೊರ ಬಂದೆವು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿಕೊಂಡಿದ್ದಾರೆ

ಟೂರ್ಸ್ ನಗರದಲ್ಲಿರುವ ಕಾನೂನು ವಿದ್ಯಾರ್ಥಿನಿ ಲಿಯಾ ಫ್ರಾಂಕ್ ಎಂಬುವವರು ಭೂಮಿ ಕಂಪಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ. ರಿಕ್ಟರ್​ ಮಾಪಕದಲ್ಲಿ 5ರಷ್ಟು ತೀವ್ರತೆಯ ಭೂಕಂಪನ ಆಗಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು ಎನ್ನಲಾಗಿದೆ. ಈ ಪ್ರಮಾಣದ ಭೂಕಂಪಗಳು ಫ್ರಾನ್ಸ್‌ನಲ್ಲಿ ಅಪರೂಪವಾಗಿದ್ದು, 2019 ರಲ್ಲಿ ಡ್ರೋಮ್‌ನ ಆಗ್ನೇಯ ವಿಭಾಗದಲ್ಲಿ ಕೊನೆಯದಾಗಿ 5 ರಷ್ಟು ತೀವ್ರತೆಯ ಭೂಕಂಪ ದಾಖಲಾಗಿತ್ತು ಎಂದು ಅಲ್ಲಿನ ಭೂಕಂಪನ ಶಾಸ್ತ್ರ ಇಲಾಖೆ ಮಾಹಿತಿ ನೀಡಿದೆ.

5ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪ ಇದಾಗಿರುವುದರಿಂದ ಹಾನಿಗಳು ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹೊರ ಬೀಳಬೇಕಿದೆ. ಇದುವರೆಗೂ ಸಾವಿನ ವರದಿಯಾಗಿಲ್ಲ.

ಇದನ್ನೂ ಓದಿ:ನಾಲ್ಕು ನಗರಗಳಿಗೆ ’ಮೂರೂ ಮಗ್ಗಲುಗಳ ನೋಟ‘ ಪರಿಚಯಿಸಿದ ಗೂಗಲ್​.. ಈ ಹೊಸ ವೈಶಿಷ್ಯದ ಬಗ್ಗೆ ತಿಳಿದುಕೊಳ್ಳಿ!

ABOUT THE AUTHOR

...view details