ಕರ್ನಾಟಕ

karnataka

ಕ್ರೂಸ್ ಹಡಗಿನಿಂದ ಸಿಂಗಾಪುರ ಜಲಸಂಧಿಗೆ ಬಿದ್ದು ಭಾರತೀಯ ಮಹಿಳೆ ಸಾವು

By

Published : Aug 2, 2023, 10:41 AM IST

Singapore Strait: ಈಜು ಬಾರದ ಕಾರಣ, ಸೋಮವಾರ ಐಷಾರಾಮಿ ಕ್ರೂಸ್ ಹಡಗಿನಿಂದ ಸಿಂಗಾಪುರ ಜಲಸಂಧಿಗೆ ಬಿದ್ದ 64 ವರ್ಷದ ಭಾರತೀಯ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಅವರ ಪುತ್ರ ತಿಳಿಸಿದ್ದಾರೆ.

cruise ship
ಕ್ರೂಸ್ ಹಡಗು

ಸಿಂಗಾಪುರ: ಸೋಮವಾರ ಕ್ರೂಸ್ ಹಡಗಿನಿಂದ ಸಿಂಗಾಪುರ ಜಲಸಂಧಿಗೆ ಬಿದ್ದ ಭಾರತೀಯ ಮಹಿಳೆ(64) ಸಾವನ್ನಪ್ಪಿದ್ದಾರೆ ಎಂದು ಅವರ ಪುತ್ರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸ್ಪೆಕ್ಟ್ರಮ್ ಆಫ್ ದಿ ಸೀಸ್, ಐಷಾರಾಮಿ ಕ್ರೂಸ್ ಹಡಗಿನ ಕ್ಲೋಸ್ಡ್ - ಸರ್ಕ್ಯೂಟ್ ದೂರದರ್ಶನದ ವಿಡಿಯೋ ಕ್ಲಿಪ್​ ನೋಡಿದ ನಂತರ ಮಹಿಳೆಯ ಪುತ್ರ ವಿವೇಕ್ ಸಹಾನಿ ಅವರು 'ದುರದೃಷ್ಟವಶಾತ್, ನನ್ನ ತಾಯಿ ನಿಧನರಾಗಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ ಎಂದು ಮಂಗಳವಾರ ಖಚಿತ ಪಡಿಸಿದರು. ಐಷಾರಾಮಿ ಕ್ರೂಸ್ ನೌಕೆಯಲ್ಲಿ ಅವರ ತಾಯಿ ರೀತಾ ಸಹಾನಿ ಮತ್ತು ತಂದೆ ಜಾಕೇಶ್ ಸಹಾನಿ ತೆರಳುತ್ತಿದ್ದರು. ತಾಯಿಗೆ ಈಜು ಬರುತ್ತಿರಲಿಲ್ಲ ಎಂದು ಮೃತ ಮಹಿಳೆ ಮತ್ತೊಬ್ಬ ಮಗ ಅಪೂರ್ವ್ ಸಹಾನಿ ಸೋಮವಾರ ಹೇಳಿದ್ದರು. ಮೃತ ದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ. ತಮಗೆ ಸಹಾಯ ಮಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ಪಿಎಂಒ ಮತ್ತು ಸಿಂಗಾಪುರದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಎಂದು ಅಪೂರ್ವ್ ಟ್ವೀಟ್​ ಮಾಡಿದ್ದಾರೆ.

ಘಟನೆಯ ಬಗ್ಗೆ ತಿಳಿಸಿದಾಗಿನಿಂದ ಮಹಿಳೆಯ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಎಂದು ಸಿಂಗಾಪುರದಲ್ಲಿರುವ ಭಾರತದ ಹೈಕಮಿಷನ್ ಮಂಗಳವಾರ ತಿಳಿಸಿದೆ. 'ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ನಾವು ಸಿಂಗಾಪುರದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಮತ್ತು ಕಾನೂನು ಕಾರ್ಯ ವಿಧಾನಗಳನ್ನು ಸುಗಮಗೊಳಿಸುತ್ತಿದ್ದೇವೆ' ಎಂದು ಹೈ ಕಮಿಷನ್ ಮಂಗಳವಾರ ರಾತ್ರಿ ತಿಳಿಸಿತ್ತು.

ಸಹಕಾರವನ್ನು ನೀಡಲು ಹೈ ಕಮಿಷನ್ ರಾಯಲ್ ಕೆರಿಬಿಯನ್ ಕ್ರೂಸ್ ಕಂಪನಿಯ ಭಾರತದ ಮುಖ್ಯಸ್ಥರನ್ನು ಸಂಪರ್ಕಿಸಿದೆ ಮತ್ತು ಈ ಅವಧಿಯಲ್ಲಿ ಕುಟುಂಬವನ್ನು ಬೆಂಬಲಿಸಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಪುನರುಚ್ಚರಿಸಿದೆ. ಭಾರತೀಯ ದಂಪತಿಗಳು ಸ್ಪೆಕ್ಟ್ರಮ್ ಆಫ್ ದಿ ಸೀಸ್‌ನಲ್ಲಿ ನಾಲ್ಕು ದಿನಗಳ ಕ್ರೂಸ್‌ನಲ್ಲಿ ಸೋಮವಾರ ಬೆಳಗ್ಗೆ ಪೆನಾಂಗ್‌ನಿಂದ ಸಿಂಗಾಪುರಕ್ಕೆ ಹಿಂತಿರುಗುತ್ತಿದ್ದರು. ಮಾರ್ಗ ಮಧ್ಯೆ ಜಾಕೇಶ್ ಸಹಾನಿ ತಮ್ಮ ಕೋಣೆಯಿಂದ ಪತ್ನಿ ನಾಪತ್ತೆಯಾಗಿರುವದನ್ನು ಕಂಡು ಗಾಬರಿಗೊಂಡಿದ್ದರು.

ಮಹಿಳೆ ರೀತಾ ಸಹಾನಿ ಅವರು ತಮ್ಮ ಪತಿ ಜಾಕೇಶ್ ಸಹಾನಿ ಅವರೊಂದಿಗೆ 'ಸ್ಪೆಕ್ಟ್ರಮ್ ಆಫ್ ದಿ ಸೀಸ್' ಕ್ರೂಸ್ ಹಡಗಿನಲ್ಲಿದ್ದರು. ಸ್ಟ್ರೈಟ್ ಟೈಮ್ಸ್ ವರದಿಯ ಪ್ರಕಾರ, ಸಿಂಗಾಪುರಕ್ಕೆ ತೆರಳುತ್ತಿದ್ದಾಗ ಹಡಗಿನಿಂದ ಮಹಿಳೆ ಜಿಗಿದಿದ್ದಾರೆ ಎಂದು ವರದಿಯಾಗಿದೆ. ಈ ಮಧ್ಯೆ ಸಿಂಗಾಪುರ ಪೊಲೀಸ್​ ಕೋಸ್ಟ್ ಗಾರ್ಡ್ ಮತ್ತು ರಿಪಬ್ಲಿಕ್ ಆಫ್ ಸಿಂಗಾಪುರ ನೌಕಾಪಡೆಯು ಸಿಂಗಾಪುರ ಬಂದರು ಮತ್ತು ಸಿಂಗಾಪುರ ಜಲಸಂಧಿಯಲ್ಲಿ ಹುಡುಕಾಟ ನಡೆಸುತ್ತಿದೆ. ಇದು ಚಾನಲ್‌ನ ಉತ್ತರದಲ್ಲಿ ಸಿಂಗಾಪುರದೊಂದಿಗೆ ಮಲಕ್ಕಾ ಜಲಸಂಧಿ ಮತ್ತು ದಕ್ಷಿಣ ಚೀನಾ ಸಮುದ್ರದ ನಡುವೆ 113-ಕಿಮೀ ಉದ್ದ ಮತ್ತು 19-ಕಿಮೀ ಅಗಲದ ಹಡಗು ಮಾರ್ಗವಾಗಿದೆ.

ಇದನ್ನೂ ಓದಿ:ಎರಿ ಚಾನಲ್ ವಾಟರ್ ಟನಲ್ ಗುಹೆಯೊಳಗೆ ಪ್ರವಾಸದ ದೋಣಿ ಮುಳುಗಿ ಒಬ್ಬನ ಸಾವು.. 16 ಜನರ ರಕ್ಷಣೆ

ABOUT THE AUTHOR

...view details