ಕರ್ನಾಟಕ

karnataka

ರಷ್ಯಾ ನೌಕಾಪಡೆಯ ಪ್ರಧಾನ ಕಚೇರಿ ಮೇಲೆ ಡ್ರೋನ್ ದಾಳಿ: ಆರು ಮಂದಿಗೆ ಗಾಯ

By

Published : Aug 1, 2022, 9:03 AM IST

ಉಕ್ರೇನ್ ಮೇಲಿನ ದಾಳಿಯನ್ನ ರಷ್ಯಾ ತೀವ್ರಗೊಳಿಸಿದೆ. ಈ ಬೆನ್ನಲ್ಲೇ ರಷ್ಯಾ ನೌಕಾಪಡೆಯ ಪ್ರಧಾನ ಕಚೇರಿ ಮೇಲೆ ಡ್ರೋನ್ ದಾಳಿ ನಡೆದಿದ್ದು, ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ.

Russia
ರಷ್ಯಾ ನೌಕಾಪಡೆ

ಕೀವ್​: ರಷ್ಯಾದ ಕಪ್ಪು ಸಮುದ್ರದ ನೌಕಾಪಡೆಯ ಪ್ರಧಾನ ಕಚೇರಿ ಮೇಲೆ ಡ್ರೋನ್ ಮೂಲಕ ಹೊತ್ತೊಯ್ಯಲಾದ ಕಡಿಮೆ ಪ್ರಮಾಣದ ಸ್ಫೋಟಕ ಸಾಧನವೊಂದು ಸ್ಫೋಟಗೊಂಡಿದ್ದು, ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ.

ಸೆವಾಸ್ಟೊಪೋಲ್ ನಗರದ ನೌಕಾ ಪ್ರಧಾನ ಕಚೇರಿಯ ಅಂಗಳದಲ್ಲಿ ಭಾನುವಾರ ದಾಳಿ ನಡೆದಿದೆ. ಪರಿಣಾಮ ರಷ್ಯಾ ನೌಕಾಪಡೆಯ ರಜಾದಿನ ರದ್ದುಗೊಳಿಸಲಾಗಿದೆ. ಕಡಿಮೆ ಪ್ರಮಾಣದ ಸ್ಫೋಟಕ ವಸ್ತು ಈ ಡ್ರೋನ್​ನಲ್ಲಿತ್ತು ಎಂದು ತಿಳಿದು ಬಂದಿದೆ. ರಷ್ಯಾದ ಪಡೆಗಳನ್ನು ಓಡಿಸಲು ಪ್ರಯತ್ನಿಸುತ್ತಿರುವ ಉಕ್ರೇನಿಯನ್ ದಂಗೆಕೋರರ ಕೆಲಸವಿದು ಎಂದು ರಷ್ಯಾ ಆರೋಪಿಸಿದೆ.

ಸ್ಥಳೀಯವಾಗಿ ತಯಾರಿಸಿರುವ ಡ್ರೋನ್​ ಇದಾಗಿದ್ದು, ಘಟನೆಯಲ್ಲಿ ಆರು ಜನರು ಗಾಯಗೊಂಡಿದ್ದಾರೆ ಎಂದು ಸೆವಾಸ್ಟೊಪೋಲ್ ಮೇಯರ್ ಮಿಖಾಯಿಲ್ ರಾಜ್ವೊಜೆವ್ ತಿಳಿಸಿದ್ದಾರೆ. ಇನ್ನೊಂದೆಡೆ, ಈ ಡ್ರೋನ್ ದಾಳಿಯು ರಷ್ಯಾದ ವಾಯು ರಕ್ಷಣೆಯ ದೌರ್ಬಲ್ಯವನ್ನು ಒತ್ತಿ ಹೇಳುತ್ತದೆ ಎಂದು ಉಕ್ರೇನ್ ನೌಕಾಪಡೆ ಮತ್ತು ಅಧ್ಯಕ್ಷ ಝೆಲೆನ್ಸ್ಕಿಯ ಸಲಹೆಗಾರ ಹೇಳಿದ್ದಾರೆ.

ಇದನ್ನೂ ಓದಿ:ರಷ್ಯಾ ಪರ ಕೆಲಸ ಮಾಡ್ತಿದ್ದಾರಾ ಪಿತ್ರೋಡಾ, ನಕ್ವಿ, ರಾಘವನ್..?

ABOUT THE AUTHOR

...view details