ಕರ್ನಾಟಕ

karnataka

ಮೈತುಂಬಾ ಹಚ್ಚೆ.. ಖಾಸಗಿ ಭಾಗದಲ್ಲೂ ಟ್ಯಾಟೂ ಹಾಕಿಸಿಕೊಂಡು ಮಹಿಳೆ ದಾಖಲೆ!

By

Published : Aug 6, 2022, 9:14 PM IST

'Britain's most tattooed woman' Becky Holt sets new record, got her labia tattooed

ಖಾಸಗಿ ಭಾಗದಲ್ಲೂ ಟ್ಯಾಟೂ ಹಾಕಿಸಿಕೊಂಡು ಮಹಿಳೆಯೊಬ್ಬಳು ದಾಖಲೆ ಬರೆದಿದ್ದಾರೆ. ವಿಶ್ವದ ಕೆಲವೇ ಕೆಲವು ಮಹಿಳೆಯರಲ್ಲಿ ಇವರು ಒಬ್ಬರಂತೆ. ಅಲ್ಲದೇ ಈ ಸುದ್ದಿ ತಿಳಿದ ಅಭಿಮಾನಿಗಳು ಅವರ ಸಾಹಸ ಮತ್ತು ಧೈರ್ಯವನ್ನು ಹೊಗಳಲಾಂಭಿಸಿದ್ದಾರಂತೆ.

ನವದೆಹಲಿ:ಬ್ರಿಟಿಷ್ ಮಹಿಳೆ ಬೆಕಿ ಹಾಲ್ಟ್ ತನ್ನ ಯೋನಿಯ (ಖಾಸಗಿ ಭಾಗ) ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಬ್ರಿಟನ್‌ನ ಅತಿ ಹೆಚ್ಚು ಹಚ್ಚೆ ಹಾಕಿಸಿಕೊಂಡ ತಾರೆ ಎಂದು ಪ್ರಸಿದ್ಧಿ ಪಡೆದಿರುವ ಹಾಲ್ಟ್, ಅಡಿಯಿಂದ ಮುಡಿಯವರೆಗೆ ದೇಹದಲ್ಲಿನ ಸ್ವಲ್ಪವೂ ಜಾಗ ಉಳಿಯದಂತೆ ಟ್ಯಾಟೂ ಹಾಕಿಸಿಕೊಂಡಿದ್ದಾರಂತೆ.

ಕೇವಲ ಹಚ್ಚೆ ಹಾಕಿಸಿಕೊಳ್ಳುವುದಕ್ಕಾಗಿಯೇ ಅವರು ಒಂದು ವರ್ಷದಲ್ಲಿ ಬರೋಬ್ಬರಿ USD 42,000 ಖರ್ಚು ಮಾಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್‌ ವರದಿ ಮಾಡಿದೆ. ಸೂಕ್ಷ್ಮ ಮತ್ತು ಖಾಸಗಿ ಪ್ರದೇಶವಾದ ಯೋನಿಯ ಒಳ ಮತ್ತು ಹೊರ ಮಡಿಕೆಗಳು ಹಾಗೂ ಯೋನಿಯ ಎರಡೂ ಬದಿಗಳಲ್ಲಿ ಹಚ್ಚೆ ಹಾಕಿಸಿಕೊಂಡಿರುವುದು ಇವರ ದಾಖಲೆಯಾಗಿದೆ.

ಬ್ರಿಟಿಷ್ ಮಹಿಳೆ ಬೆಕಿ ಹಾಲ್ಟ್

ತಾರೆ ಹಾಲ್ಟ್ ಅವರ ಸೂಕ್ಷ್ಮ ಮತ್ತು ಖಾಸಗಿ ಭಾಗದಲ್ಲಿ ಹಚ್ಚೆ ಹಾಕಿದ ಕಲಾವಿದ ಕೆಲಸದ ಅವಧಿಯಲ್ಲಿಯೇ ಐದು ಬಾರಿ ವಿಶ್ರಾಂತಿ ತೆಗೆದುಕೊಂಡರಂತೆ. ಶ್ರಮಪಟ್ಟು ಅಂತು-ಇಂತು ಯಶಸ್ವಿಯಾಗಿ ಪೂರ್ಣಗೊಳಿಸಲು ಅವರು ಇನ್ನಿಲ್ಲದ ತಾಳ್ಮೆ ವಹಿಸಬೇಕಾಯಿತಂತೆ. ಯಾವುದೇ ಸಮಸ್ಯೆಯಾಗದಂತೆ ಹಾಲ್ಟ್ ಅವರಿಗೆ ಹಚ್ಚೆ ಹಾಕಿ ಕೊನೆಗೆ ನಿಟ್ಟಿಸಿರು ಬಿಟ್ಟಿದ್ದಾರಂತೆ.

ಬೆಕಿ ಅವರು ಟ್ಯಾಟೂ ಪಾರ್ಲರ್‌ಗೆ ಭೇಟಿ ನೀಡಿದ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಅವರು ತಮ್ಮ ಯೋನಿಯ ಮೇಲೆ ಯಾವ ವಿನ್ಯಾಸವನ್ನು ಚಿತ್ರೀಕರಿಸಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ, ಈ ಬಗ್ಗೆ ಅನುಭವ ಹಂಚಿಕೊಂಡಿರುವ ಅವರು, ನಾನು ನಂಬಲಾಗದಷ್ಟು ನೋವಿನಲ್ಲಿದ್ದೆ. ಖಾಸಗಿ ಭಾಗದಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಿರುವುದರಿಂದ ಮುಜುಗರವೂ ಆಯಿತು. ಆದರೆ, ನನ್ನ ದೇಹ ಸಂಪೂರ್ಣ ಹಚ್ಚೆಮಯವಾಗಬೇಕು ಎಂಬ ಬಯಕೆ ಇದ್ದುದರಿಂದ ಇದು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.

ಯೋನಿ ಮಡಿಕೆಗಳಲ್ಲಿ ಹಚ್ಚೆ ಹಾಕಿಸಿಕೊಂಡ ವಿಶ್ವದ ಕೆಲವೇ ಕೆಲವೇ ಮಹಿಳೆಯರಲ್ಲಿ ಇವರು ಒಬ್ಬರಂತೆ. ಅಲ್ಲದೇ ಈ ಸುದ್ದಿ ತಿಳಿದ ಅಭಿಮಾನಿಗಳು ಅವರ ಸಾಹಸ ಮತ್ತು ಧೈರ್ಯವನ್ನು ಹೊಗಳಲಾಂಭಿಸಿದ್ದಾರಂತೆ. ನಾನು ನನ್ನ ಯೋನಿಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಕ್ಕೆ ನನ್ನ ಧೈರ್ಯದ ಬಗ್ಗೆ ಜನರು ನಂಬದೇ ಇರಬಹುದು. ಪ್ರಪಂಚದಲ್ಲಿ ಎಷ್ಟು ಜನರು ಈ ಹಚ್ಚೆ ಹೊಂದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ನಾನು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬಳಾಗಿದ್ದೇನೆ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ ಎಂದಿದ್ದಾರೆ ಬೆಕಿ.

ಇದನ್ನೂ ಓದಿ: Liver cirrhosis: ಲಿವರ್ ಸಿರೋಸಿಸ್ ಎಂದರೇನು, ಇದರ ಅಪಾಯದ ಬಗ್ಗೆ ನಿಮಗೆ ಅರಿವಿದೇಯಾ?

ABOUT THE AUTHOR

...view details