ಕರ್ನಾಟಕ

karnataka

ಇಸ್ರೇಲ್, ಉಕ್ರೇನ್‌ಗೆ ನೀಡಿರುವ ಬೆಂಬಲವು ಅಮೆರಿಕ ಭದ್ರತೆಗೆ ಪ್ರಮುಖವಾಗಿದೆ: ಜೋ ಬೈಡನ್

By PTI

Published : Oct 20, 2023, 7:43 AM IST

Israel and Ukraine: ಹಮಾಸ್ ಮತ್ತು ಪುಟಿನ್ ವಿಭಿನ್ನ ಬೆದರಿಕೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅವರಿಬ್ಬರೂ ನೆರೆಯ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಬಯಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿಕಾರಿದರು.

Israel and Ukraine
ಇಸ್ರೇಲ್, ಉಕ್ರೇನ್‌ಗೆ ನೀಡಿರುವ ಬೆಂಬಲವು ಯುಎಸ್ ಭದ್ರತೆಗೆ ಪ್ರಮುಖವಾಗಿದೆ: ಜೋ ಬೈಡೆನ್

ವಾಷಿಂಗ್ಟನ್ (ಅಮೆರಿಕ):''ಇಸ್ರೇಲ್ ಮತ್ತು ಉಕ್ರೇನ್ ತಮ್ಮ ಯುದ್ಧಗಳಲ್ಲಿ ಯಶಸ್ವಿಯಾಗುವುದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಪ್ರಮುಖವಾಗಿದೆ'' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಗುರುವಾರ ರಾತ್ರಿ ಓವಲ್ ಆಫೀಸ್​ನಲ್ಲಿ ಮಾತನಾಡಿದ ಅವರು, ''ಎರಡೂ ದೇಶಗಗಳು ಮಿಲಿಟರಿ ಸಹಾಯಕ್ಕಾಗಿ ಶತಕೋಟಿ ಡಾಲರ್‌ಗಳನ್ನು ಕೇಳುವ ಸಾಧ್ಯತೆಯಿದೆ'' ಎಂದ ತಿಳಿಸಿದರು.

ಹಮಾಸ್, ಪುಟಿನ್​ನಿಂದ ವಿಭಿನ್ನ ಬೆದರಿಕೆಗಳು:''ಅಂತಾರಾಷ್ಟ್ರೀಯ ಆಕ್ರಮಣವನ್ನು ಮುಂದುವರಿಸಲು ಅನುಮತಿಸಿದರೆ, ಪ್ರಪಂಚದ ಇತರ ಭಾಗಗಳಲ್ಲಿ ಸಂಘರ್ಷ ಮತ್ತು ಅವ್ಯವಸ್ಥೆ ಹರಡಬಹುದು'' ಎಂದ ಅವರು, ಹಮಾಸ್ ಮತ್ತು ಪುಟಿನ್ ವಿಭಿನ್ನ ಬೆದರಿಕೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅವರಿಬ್ಬರೂ ನೆರೆಯ ಪ್ರಜಾಪ್ರಭುತ್ವವವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಬಯಸಿದ್ದಾರೆ ಎಂದು ಕಿಡಿಕಾರಿದರು.

ಮಾನವೀಯ ಸಹಾಯಕ್ಕೆ ಒತ್ತಾಯ:ಕಾಂಗ್ರೆಸ್‌ಗೆ ತುರ್ತು ನಿಧಿ ಒದಗಿಸುವ ಬಗ್ಗೆ ವಿನಂತಿಯನ್ನು ಕಳುಹಿಸುವುದಾಗಿ ಹೇಳಿದ ಬೈಡನ್​ ಅವರು, ಇದು ಮುಂದಿನ ವರ್ಷದಲ್ಲಿ ಸರಿಸುಮಾರು 100 ಬಿಲಿಯನ್ ಡಾಲರ್​ ಆಗುವ ನಿರೀಕ್ಷೆಯಿದೆ. ಅಮೆರಿಕ ಕಾಂಗ್ರೆಸ್​ ಎದುರು ಇಂದು ಈ ಸಂಬಂಧ ಪ್ರಸ್ತಾವನೆ ಸಲ್ಲಿಕೆ ಆಗಲಿದ್ದು, ಉಕ್ರೇನ್, ಇಸ್ರೇಲ್, ತೈವಾನ್, ಮಾನವೀಯ ನೆರವು ಮತ್ತು ಗಡಿ ನಿರ್ವಹಣೆಗೆ ಈ ಹಣ ಬಳಕೆಯಾಗಲಿದೆ ಎಂದು ಅವರು ತಿಳಿಸಿದರು. ''ಇದು ತಲೆಮಾರುಗಳವರೆಗೆ ಅಮೆರಿಕದ ಭದ್ರತೆ ಒದಗಿಸುವುದಕ್ಕಾಗಿ ಸರ್ಕಾರ ಕೈಗೊಂಡ ಕ್ರಮವಾಗಿದೆ. ಇದನ್ನು ದೇಶದ ಭದ್ರತೆಗಾಗಿ ಮಾಡಿದ ಸ್ಮಾರ್ಟ್ ಹೂಡಿಕೆ ಎಂದು ಅವರು ಬಣ್ಣಿಸಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಅನುಮೋದನೆಗೆ ಪೂರಕವಾದ ರಾಜಕೀಯ ಒಕ್ಕೂಟ ರಚನೆಯಾಗಲಿದೆ ಎಂದು ಬೈಡನ್​ ಆಶಯ ವ್ಯಕ್ತಪಡಿಸಿದರು. ಜೊತೆಗೆ ಗಾಜಾ ಪಟ್ಟಿಯಲ್ಲಿರುವ ಪ್ಯಾಲೆಸ್ಟೀನಿಯರಿಗೆ ಹೆಚ್ಚಿನ ಮಾನವೀಯ ಸಹಾಯಕ್ಕಾಗಿ ಒತ್ತಾಯಿಸಿದರು.

ಬೈಡನ್​ ಅವರು, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದಾರೆ. ''ಕೈವ್ ಅನ್ನು ಬೆಂಬಲಿಸಲು ಅಮೆರಿಕ ಬದ್ಧವಾಗಿದೆ ಎಂದು ಬೈಡನ್​ ಒತ್ತಿ ಹೇಳಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಅಕ್ಟೋಬರ್ 7ರಂದು ಹಮಾಸ್ ದಾಳಿಗೆ ಪ್ರತಿಕ್ರಿಯೆಯಾಗಿ ಗಾಜಾ ಪಟ್ಟಿಯ ಮೇಲೆ ಬಾಂಬ್ ದಾಳಿ ನಡೆಸುತ್ತಿರುವ ಇಸ್ರೇಲ್‌ಗೆ ಮಿಲಿಟರಿ ನೆರವು ಬಂದಾಗ ರಾಜಕೀಯ ವಲಯದ ಇನ್ನೊಂದು ಬದಿಯಲ್ಲಿ ಪ್ರತಿರೋಧವಿದೆ. ವಿಮರ್ಶಕರು, ಇಸ್ರೇಲ್ ನಾಗರಿಕರನ್ನು ವಿವೇಚನಾರಹಿತವಾಗಿ ಕೊಂದು ಯುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬುಧವಾರ ಟೆಲ್ ಅವೀವ್‌ಗೆ ಭೇಟಿ ನೀಡಿದ ವೇಳೆ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಬೈಡನ್​ ಅವರು, ''ಗಾಜಾದಲ್ಲಿ ಸಿಲುಕಿರುವ ನಾಗರಿಕರ ಕಷ್ಟಗಳನ್ನು ಪರಿಹರಿಸುವ ಮಾರ್ಗಗಳನ್ನು ಇಸ್ರೇಲ್ ಕೂಡ ಅನ್ವೇಷಿಸಬೇಕು ಎಂದು ಹೇಳಿದ್ದಾರೆ. ಹಮಾಸ್ ವಿರುದ್ಧ ಹೋರಾಡುತ್ತಿರುವ ಇಸ್ರೇಲ್​ಗೆ ಸಂಪೂರ್ಣ ಬೆಂಬಲ ಘೋಷಿಸಲು ಜೋ ಬೈಡನ್ ಬುಧವಾರ ಟೆಲ್ ಅವೀವ್​ಗೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿದ್ದರು. ''ಇಸ್ರೇಲ್ ತುಂಬಾ ಹಾನಿಗೊಳಗಾಗಿದೆ. ಜೊತೆಗೆ ಗಾಜಾದ ಜನರ ನೋವನ್ನು ನಿವಾರಿಸುವ ಮಾರ್ಗಗಳನ್ನು ಇಸ್ರೇಲ್ ಕೂಡ ಅನ್ವೇಷಿಸಬೇಕು'' ಎಂದು ಅವರು ಸಲಹೆ ಕೊಟ್ಟಿದ್ದರು.

''ಗಾಜಾದಿಂದ ಎಲ್ಲಿಯೂ ಹೋಗಲಾಗದ ಮುಗ್ಧ ಜನರ ಸಮಸ್ಯೆಗಳನ್ನು ನಿವಾರಿಸಲು ಇಸ್ರೆಲ್​ನವರಿಗೆ ಅವಕಾಶವಿದ್ದರೆ, ಆ ದಿಕ್ಕಿನಲ್ಲಿ ಹೆಜ್ಜೆಗಳನ್ನು ಇರಿಸಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಮುಂದೆ ಏನಾಗುತ್ತದೆಯೋ ಅದಕ್ಕೆ ಅವರೇ ನೇರ ಹೊಣೆಯಾಗುತ್ತಾರೆ, ಅದು ಅನ್ಯಾಯವಾಗುತ್ತದೆ. ಇಲ್ಲದಿದ್ದರೆ ಜಗತ್ತಿನ ದೃಷ್ಟಿಯಲ್ಲಿ ಅವರು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾರೆ'' ಎಂದು ಬೈಡನ್​ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಹಿಜ್ಬುಲ್ಲಾದೊಂದಿಗೆ ಈಗಲೇ ಯುದ್ಧ ಬೇಡ; ಇಸ್ರೇಲ್​ಗೆ ಯುಎಸ್​ ಹೇಳುತ್ತಿರುವುದೇಕೆ?

ABOUT THE AUTHOR

...view details