ಕರ್ನಾಟಕ

karnataka

ಗಾಜಾದ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ ಬೈಡನ್​ ಸಂತಾಪ.. ಅರಬ್ ನಾಯಕರೊಂದಿಗಿನ ಅಮೆರಿಕ ಅಧ್ಯಕ್ಷರ ಶೃಂಗಸಭೆ ರದ್ದು

By ETV Bharat Karnataka Team

Published : Oct 18, 2023, 9:48 AM IST

ಗಾಜಾ ನಗರದ ಆಸ್ಪತ್ರೆಯೊಂದರ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 500 ಮಂದಿ ಸಾವನ್ನಪ್ಪಿರುವುದರಿಂದ ಅರಬ್ ನಾಯಕರೊಂದಿಗಿನ ಜೋ ಬೈಡನ್ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ.

Biden
ಅರಬ್ ನಾಯಕರೊಂದಿಗಿನ ಬೈಡನ್ ಶೃಂಗಸಭೆ ರದ್ದು

ಜೆರುಸಲೆಂ : ಗಾಜಾ ಆಸ್ಪತ್ರೆ ಮೇಲೆ ನಡೆದ ಭೀಕರ ದಾಳಿಯಿಂದಾಗಿ ಅರಬ್ ನಾಯಕರೊಂದಿಗಿನ ಅಮೆರಿಕ ಅಧ್ಯಕ್ಷ ಜೋ ಬೈಡನ್ ಶೃಂಗಸಭೆಯನ್ನು ರದ್ದುಗೊಳಿಸಲಾಗಿದೆ. ಇಸ್ರೇಲ್ ಅನ್ನು ಬೆಂಬಲಿಸಲು ಇಂದು ಬೈಡನ್​ ದೇಶಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಜೋರ್ಡಾನ್‌ನ ಅಮ್ಮನ್‌ನಲ್ಲಿ ಅರಬ್ ನಾಯಕರೊಂದಿಗೆ ಮಾತುಕತೆ ನಡೆಸಬೇಕಾಗಿತ್ತು. ಆದರೆ ಗಾಜಾದ ಅಲ್ ಅಹ್ಲಿ ಆಸ್ಪತ್ರೆ ಮೇಲಿನ ದಾಳಿಯಿಂದಾಗಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಶೃಂಗಸಭೆ ರದ್ದುಗೊಳಿಸಲಾಗಿದೆ.

"ಜೋರ್ಡಾನ್ ರಾಜ ಅಬ್ದುಲ್ಲಾ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್ ಸಿಸಿ ಮತ್ತು ಪ್ಯಾಲೆಸ್ಟೈನ್​ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಅಮ್ಮಾನ್‌ನಲ್ಲಿ ನಡೆಯಲಿರುವ ಯುಎಸ್​ ಅಧ್ಯಕ್ಷ ಜೋ ಬೈಡನ್ ಸಭೆಯನ್ನು ರದ್ದುಗೊಳಿಸಲಾಗಿದೆ" ಎಂದು ಜೋರ್ಡಾನ್ ವಿದೇಶಾಂಗ ಸಚಿವ ಅಯ್ಮಾನ್ ಸಫಾದಿ ಘೋಷಿಸಿದ್ದಾರೆ.

ಜೋರ್ಡಾನ್‌ನಲ್ಲಿ ಬೈಡನ್ ಜೊತೆಗಿನ ಶೃಂಗಸಭೆ ರದ್ದು ಆಗಿರುವ ಬಗ್ಗೆ ಶ್ವೇತಭವನ ಸಹ ದೃಢಪಡಿಸಿದೆ. "ಜೋ ಬೈಡನ್ ಅವರು ಜೋರ್ಡಾನ್, ಈಜಿಪ್ಟ್ ಮತ್ತು ಪ್ಯಾಲೆಸ್ಟೈನ್​ ನಾಯಕರೊಂದಿಗೆ ಅಮ್ಮಾನ್‌ನಲ್ಲಿ ಶೃಂಗಸಭೆ ನಡೆಯಬೇಕಿತ್ತು. ಆದರೆ, ಗಾಜಾದ ಆಸ್ಪತ್ರೆ ಮೇಲೆ ನಡೆದ ಬಾಂಬ್ ಸ್ಫೋಟದ ಬಳಿಕ ಈ ಸಭೆಯನ್ನು ಮುಂದೂಡಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇನ್ನೊಂದೆಡೆ, ಇಸ್ರೇಲ್​ ಸೇನೆಯು ಗಾಜಾ ಆಸ್ಪತ್ರೆಯ ಮೇಲೆ ದಾಳಿ ಮಾಡಿಲ್ಲ, ಇಸ್ಲಾಮಿಕ್ ಜಿಹಾದ್‌ನ ರಾಕೆಟ್‌ನಿಂದ ಸ್ಫೋಟ ಸಂಭವಿಸಿದೆ ಎಂದು ಇಸ್ರೇಲ್​ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.

ಇದನ್ನೂ ಓದಿ :ಮುಂದುವರಿದ ಇಸ್ರೇಲ್ ದಾಳಿ : ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ತೀವ್ರ.. ಇಸ್ರೇಲ್​​ನತ್ತ ಬೈಡನ್​​​

ಅಮೆರಿಕ ಅಧ್ಯಕ್ಷರಿಂದಲೂ ಸಂತಾಪ ಸೂಚನೆ : ಗಾಜಾದ ಅಲ್ ಅಹ್ಲಿ ಆಸ್ಪತ್ರೆಯ ಮೇಲಿನ ದಾಳಿಯ ಬಗ್ಗೆ ಅಧ್ಯಕ್ಷ ಬೈಡನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ ಆ್ಯಪ್​ನಲ್ಲಿ ಪೋಸ್ಟ್​ ಮಾಡಿರುವ ಅವರು, "ಗಾಜಾದ ಅಲ್ ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ಸಂಭವಿಸಿದ ಸ್ಫೋಟ, ಪ್ರಾಣ ಹಾನಿ ಮತ್ತು ಆಸ್ತಿ ನಷ್ಟದಿಂದಾಗಿ ನಾನು ದುಃಖಿತನಾಗಿದ್ದೇನೆ. ಘಟನೆಯ ಬಗ್ಗೆ ಜೋರ್ಡಾನ್ ರಾಜ ಅಬ್ದುಲ್ಲಾ ಮತ್ತು ಇಸ್ರೇಲ್​ ಪ್ರಧಾನಿ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದೇನೆ. ದುರಂತಕ್ಕೆ ಸಂಬಂಧಿಸಿದಂತೆ ಭದ್ರತಾ ತಂಡಕ್ಕೆ ಕಾರಣ ಪತ್ತೆಹಚ್ಚಲು ಸೂಚಿಸಲಾಗಿದೆ" ಎಂದಿದ್ದಾರೆ.

ಇದನ್ನೂ ಓದಿ :Israel Hamas conflict: ಗಾಜಾದ ಅಲ್ - ಅಹ್ಲಿ ಸಿಟಿ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ.. 500 ಜನ ಬಲಿ

ಇಂತಹ ಸಂಘರ್ಷದ ಸಮಯದಲ್ಲಿ ಇಸ್ರೇಲ್ ದೇಶದ ನಾಗರಿಕರ ಜೀವ ರಕ್ಷಿಸಲು ಅಮೆರಿಕ ಬದ್ಧವಾಗಿದೆ. ಈ ದುರಂತದಲ್ಲಿ ಸಾವನ್ನಪ್ಪಿರುವ, ಗಾಯಗೊಂಡ ರೋಗಿಗಳು, ವೈದ್ಯಕೀಯ ಕಾರ್ಯಕರ್ತರು ಮತ್ತು ಇತರೆ ಮುಗ್ಧ ಜನರಿಗೆ ಸಂತಾಪ ಸೂಚಿಸುತ್ತಿದ್ದೇನೆ ಎಂದು ಯುಎಸ್ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ :'ನಮ್ಮನ್ನಿಲ್ಲಿ ಚೆನ್ನಾಗಿ ನೋಡಿಕೊಳ್ತಿದಾರೆ' : ಹಮಾಸ್​ ಉಗ್ರರು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಒತ್ತೆಯಾಳು ಯುವತಿ ಹೇಳಿಕೆ

ABOUT THE AUTHOR

...view details