ಕರ್ನಾಟಕ

karnataka

ಬರದಿಂದ ತತ್ತರಿಸುತ್ತಿದೆ ಯೆಮೆನ್​: ದೇಣಿಗೆ ನೀಡುವಂತೆ ಯುಎನ್​ ಮನವಿ

By

Published : Mar 2, 2021, 9:18 AM IST

ಯೆಮನ್‌ನಲ್ಲಿ ಜನರು ಬರಕ್ಕೆ ತುತ್ತಾಗಿದ್ದು, ಅವರಿಗೆ ಸಹಾಯ ಮಾಡಲು ದಾನಿಗಳು ದೇಣಿಗೆ ನೀಡುವಂತೆ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಮನವಿ ಮಾಡಿದ್ದಾರೆ.

UN chief
ಆಂಟೋನಿಯೊ ಗುಟೆರೆಸ್

ವಿಶ್ವಸಂಸ್ಥೆ: ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಬರಪೀಡಿತ ಯೆಮನ್‌ನಲ್ಲಿ ಮಾನವೀಯ ಕಾರ್ಯಾಚರಣೆಗಾಗಿ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ದುರಂತದ ಅಂಚಿನಲ್ಲಿರುವ ಯೆಮೆನ್​ನ 16 ಮಿಲಿಯನ್ ಜನರಿಗೆ ಸಹಾಯ ಮಾಡಲು ಸುಮಾರು 3.85 ಬಿಲಿಯನ್ ಡಾಲರ್​ ಅಗತ್ಯವಿದೆ ಎಂದು ಅವರು ಸೋಮವಾರ ನಡೆಸಿದ 'ಯೆಮನ್‌ಗಾಗಿ ಉನ್ನತ ಮಟ್ಟದ ವಾಗ್ದಾನ' ಕಾರ್ಯಕ್ರಮದಲ್ಲಿ ತಿಳಿಸಿದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಯೆಮನ್‌ನಿಂದ ಹಿಂದೆ ಸರಿಯುವ ಕ್ಷಣ ಇದಲ್ಲ. ದೇಶದಲ್ಲಿ ಬರಗಾಲವನ್ನು ತಡೆಯಲು ಉದಾರವಾಗಿ ಧನಸಹಾಯ ನೀಡುವಂತೆ ನಾನು ಎಲ್ಲ ದಾನಿಗಳನ್ನು ಕೋರುತ್ತೇನೆ. ಪ್ರತಿ ಡಾಲರ್ ಎಣಿಕೆಯಾಗುತ್ತದೆ. ನೀವು ನೀಡುವ ದೇಣಿಗೆ ಜೀವಗಳನ್ನು ಉಳಿಸುತ್ತದೆ. ಇದು ಶಾಶ್ವತ ಶಾಂತಿಗಾಗಿ ಪರಿಸ್ಥಿತಿಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ" ಎಂದು ಮನವಿ ಮಾಡಿದ್ದಾರೆ.

2020 ರಲ್ಲಿ ಯುಎನ್ ಏಜೆನ್ಸಿಗಳು ಮತ್ತು ಪಾಲುದಾರರು 10 ದಶಲಕ್ಷಕ್ಕೂ ಹೆಚ್ಚು ಜನರಿಗೆ ಸಹಾಯ ಮಾಡಿದ್ದರು.

ABOUT THE AUTHOR

...view details