ಕರ್ನಾಟಕ

karnataka

ಉಕ್ರೇನ್​ನಿಂದ ಪಾರಾಗಲು ಹರಸಾಹಸ; 8 ಕಿ.ಮೀ. ನಡೆದುಕೊಂಡೇ ಪೋಲೆಂಡ್​​ ಗಡಿಗೆ ಬಂದ 40 ಭಾರತೀಯ ವಿದ್ಯಾರ್ಥಿಗಳು

By

Published : Feb 25, 2022, 7:15 PM IST

Updated : Feb 25, 2022, 10:57 PM IST

ಮೊದಲ ಬ್ಯಾಚ್​ನಲ್ಲಿ ಭಾರತೀಯ ವಿದ್ಯಾರ್ಥಿಗಳು ಚೆರ್ನಿವ್ಟ್ಸಿಯಿಂದ ಉಕ್ರೇನ್-ರೊಮೇನಿಯಾ ಗಡಿಗೆ ತೆರಳಿದ್ದಾರೆ. ಗಡಿ ಸಮೀಪದವರೆಗೂ ವಿದ್ಯಾರ್ಥಿಗಳಿಗೆ ಡ್ರಾಪ್​ ನೀಡಲಾಗಿತ್ತು. ಅವರೆಲ್ಲ ಈಗ 8 ಕಿಮೀ ನಡೆದು ಪೋಲೆಂಡ್ ಗಡಿ​ ತಲುಪುತ್ತಿದ್ದಾರೆ.

ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ
ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ

ರೊಮೇನಿಯಾ ​(ಉಕ್ರೇನ್​): ಉಕ್ರೇನ್​ನಲ್ಲಿ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದ್ದಂತೆ ಅಲ್ಲಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ತವರನ್ನು ಸೇರಲು ತವಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಮೊದಲ ಬ್ಯಾಚ್​ನಲ್ಲಿ ಭಾರತೀಯ ವಿದ್ಯಾರ್ಥಿಗಳು ಚೆರ್ನಿವ್ಟ್ಸಿಯಿಂದ ಉಕ್ರೇನ್ - ರೊಮೇನಿಯಾ ಗಡಿಗೆ ತೆರಳಿದ್ದಾರೆ. ಈ ಮೂಲಕ ತವರಿಗೆ ಬರಲಿದ್ದಾರೆ.

ಎಂಇಎ ಕ್ಯಾಂಪ್ ಕಚೇರಿಗಳು ಪಶ್ಚಿಮ ಉಕ್ರೇನ್‌ನ ಎಲ್ವಿವ್ ಮತ್ತು ಚೆರ್ನಿವ್ಟ್ಸಿ ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ರಷ್ಯನ್ ಮಾತನಾಡುವ ಅಧಿಕಾರಿಗಳನ್ನು ಈ ಶಿಬಿರದ ಕಚೇರಿಗಳಿಗೆ ಕಳುಹಿಸಲಾಗುತ್ತಿದೆ.

ಮೊದಲ ಬ್ಯಾಚ್​ನಲ್ಲಿ ಭಾರತೀಯ ವಿದ್ಯಾರ್ಥಿಗಳು ಚೆರ್ನಿವ್ಟ್ಸಿಯಿಂದ ಉಕ್ರೇನ್ - ರೊಮೇನಿಯಾ ಗಡಿಗೆ ತೆರಳಿದ್ದಾರೆ

ಇದನ್ನೂ ಓದಿ: ಅಪ್ಪಾ, ಅಮ್ಮಾ 'ಐ ಲವ್​ ಯೂ'... ವೈರಲ್​ ಆಯ್ತು ಉಕ್ರೇನ್​ ಯೋಧನ ಭಾವುಕ ವಿಡಿಯೋ

8 ಕಿ.ಮೀ. ನಡಿಗೆ:ಎಲ್ವಿವ್‌ನ ಡೇನ್‌ಲೋ ಹ್ಯಾಲಿಟ್‌ಸ್ಕಿ ವೈದ್ಯಕೀಯ ವಿಶ್ವವಿದ್ಯಾಲಯದ ಸುಮಾರು 40 ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ - ಪೋಲೆಂಡ್ ಗಡಿಯತ್ತ ಸಾಗುತ್ತಿದ್ದು, ಗಡಿಯಿಂದ 8 ಕಿಲೋ ಮೀಟರ್ ದೂರದಲ್ಲೇ ವಿದ್ಯಾರ್ಥಿಗಳನ್ನು ಡ್ರಾಪ್​ ಮಾಡಲಾಗಿದೆ. ಇವರೆಲ್ಲ ಇಂದು ಪೋಲೆಂಡ್​ ತಲುಪಲಿದ್ದು, ಅಲ್ಲಿಂದ ಹಂಗೇರಿ ರಾಜಧಾನಿ ಬುಡಾಪೆಸ್ಟ್​ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾರತಕ್ಕೆ ಮರಳಲಿದ್ದಾರೆ.

ಬಸ್​ನಲ್ಲಿ ಪ್ರಯಾಣ

ಇಲ್ಲಿಂದ ಆಗಮಿಸುವ ಎಲ್ಲ ವಿದ್ಯಾರ್ಥಿಗಳ ಪ್ರಯಾಣ ವೆಚ್ಚವನ್ನು ಭಾರತ ಸರ್ಕಾರವೇ ಭರಿಸಲಿದೆ. ಈ ಸಂಬಂಧ ಭಾರತೀಯ ರಾಯಭಾರ ಕಚೇರಿ, ಉಕ್ರೇನ್​, ಹಂಗೇರಿ, ಪೋಲೆಂಡ್​ ಹಾಗೂ ರೊಮೆನಿಯಾ ಸರ್ಕಾರಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ವ್ಯವಸ್ಥೆ ಮಾಡಿದೆ.

Last Updated :Feb 25, 2022, 10:57 PM IST

ABOUT THE AUTHOR

...view details