ಕರ್ನಾಟಕ

karnataka

ನ್ಯಾಟೋಗೆ ಸೇರಬಯಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ: ಫಿನ್ಲ್ಯಾಂಡ್​, ಸ್ವೀಡನ್​ಗೆ ರಷ್ಯಾ ಎಚ್ಚರಿಕೆ

By

Published : Feb 26, 2022, 8:09 AM IST

ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ ರಾಷ್ಟ್ರಗಳು ನ್ಯಾಟೋ ಒಕ್ಕೂಟವನ್ನು ಸೇರ ಉದ್ದೇಶಿಸಿದ್ದರೆ ಗಂಭೀರವಾದ ಮಿಲಿಟರಿ ಮತ್ತು ರಾಜಕೀಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾ ಎಚ್ಚರಿಕೆ ನೀಡಿದೆ.

Russia warns Sweden and Finland against joining NATO
ನ್ಯಾಟೋಗೆ ಸೇರಬಯಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ: ಫಿನ್ಲ್ಯಾಂಡ್​, ಸ್ವೀಡನ್​ಗೆ ರಷ್ಯಾ ಎಚ್ಚರಿಕೆ

ಮಾಸ್ಕೋ: ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ ರಾಷ್ಟ್ರಗಳು ನ್ಯಾಟೋಗೆ ಸೇರಲು ಉದ್ದೇಶಿಸಿದ್ದರೆ ರಷ್ಯಾ ಈ ಕುರಿತು 'ಪ್ರತಿಕ್ರಿಯೆ' ನೀಡಲಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರಾದ ಮಾರಿಯಾ ಜಖರೋವಾ ಶುಕ್ರವಾರ ಹೇಳಿದ್ದಾರೆಂದು ನ್ಯೂಸ್‌ವೀಕ್ ವರದಿ ಮಾಡಿದೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಕುರಿತಂತೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಮಾರಿಯಾ ಜಖರೋವಾ ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ನ್ಯಾಟೋ ಸೇರಲು ಬಯಸಿದರೆ, ಗಂಭೀರವಾದ ಮಿಲಿಟರಿ ಮತ್ತು ರಾಜಕೀಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಫಿನ್‌ಲ್ಯಾಂಡ್ ಮತ್ತು ಸ್ವೀಡನ್ ರಾಷ್ಟ್ರಗಳು ತಮ್ಮ ಭದ್ರತೆಗಾಗಿ ಇತರ ದೇಶಗಳ ಭದ್ರತೆಗೆ ಹಾನಿ ತರಬಾರದು ಎಂದು ಮಾರಿಯಾ ಜಖರೋವಾ ಹೇಳಿದ್ದು, ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸ್ವೀಡನ್ ಮತ್ತು ಫಿನ್​ಲ್ಯಾಂಡ್​​ನಿಂದ ಬೆಂಬಲವನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿ ಹೊರಬಂದ ನಂತರ ಮಾರಿಯಾ ಜಖರೋವಾ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ರಷ್ಯಾ ವಿರುದ್ಧದ ಖಂಡನಾ ನಿರ್ಣಯದ ಮತದಾನದಿಂದ ದೂರ ಉಳಿದ ಭಾರತ, ಚೀನಾ

ABOUT THE AUTHOR

...view details