ಕರ್ನಾಟಕ

karnataka

ETV Bharat / international

ಫ್ರಾನ್ಸ್​ನಲ್ಲಿ ಒಮಿಕ್ರೋನ್​​​ ಭೀತಿ: 8 ಶಂಕಿತ ಸೋಂಕಿತರು ಪತ್ತೆ

ಫ್ರಾನ್ಸ್​​ನಲ್ಲಿ 8 ಶಂಕಿತ ಒಮಿಕ್ರೋನ್​ ವೈರಸ್​ ಪತ್ತೆಯಾಗಿದ್ದು, ಇದರಲ್ಲಿ ರೂಪಾಂತರಿತ ಆಲ್ಫಾ, ಬೇಟಾ, ಗಮ್ಮಾ ಹಾಗೂ ಡೆಲ್ಟಾ ಪ್ರಭಾವ ಇದೆಯೋ ಇಲ್ಲವೋ ಎಂಬ ಬಗ್ಗೆ ಇನ್ನಷ್ಟೇ ಪರೀಕ್ಷೆ ಮೂಲಕ ದೃಢೀಕರಣ ಮಾಡಿಕೊಳ್ಳಬೇಕಿದೆ ಎಂದು ಫ್ರಾನ್ಸ್​​​ ಆರೋಗ್ಯ ಸಚಿವರು ಹೇಳಿದ್ದಾರೆ.

ಫ್ರಾನ್ಸ್​ನಲ್ಲಿ ಒಮಿಕ್ರೋನ್​​​ ಭೀತಿ: 8 ಶಂಕಿತ ಸೋಂಕಿತರು ಪತ್ತೆ
france-reports-8-suspected-omicron-covid-19-cases

By

Published : Nov 29, 2021, 8:29 AM IST

ಪ್ಯಾರಿಸ್​( ಫ್ರಾನ್ಸ್​): ಕಳೆದ ಹದಿನಾಲ್ಕು ದಿನದಲ್ಲಿ ಆಫ್ರಿಕಾದಿಂದ ಮರಳಿದ ಪ್ರಯಾಣಿಕರಲ್ಲಿ ಕೆಲವರಿಗೆ ಕೋವಿಡ್​ ಪಾಸಿಟಿವ್​ ಇರೋದು ದೃಢಪಟ್ಟಿದೆ ಎಂದು ಫ್ರಾನ್ಸ್​ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

ಇದುವರೆಗೂ 8 ಪ್ರಯಾಣಿಕರಲ್ಲಿ 8 ಜನರಿಗೆ ಕೋವಿಡ್​​ 19 ದೃಢಪಟ್ಟಿದ್ದು, ಇದರಲ್ಲಿ ರೂಪಾಂತರಿತ ಆಲ್ಫಾ, ಬೇಟಾ, ಗಮ್ಮಾ ಹಾಗೂ ಡೆಲ್ಟಾ ಪ್ರಭಾವ ಇದೆಯೋ ಇಲ್ಲವೋ ಎಂಬ ಬಗ್ಗೆ ಇನ್ನಷ್ಟೇ ಪರೀಕ್ಷೆ ಮೂಲಕ ದೃಢೀಕರಣ ಮಾಡಿಕೊಳ್ಳಬೇಕಿದೆ ಎಂದು ಫ್ರಾನ್ಸ್​​​ ಆರೋಗ್ಯ ಸಚಿವರು ಹೇಳಿದ್ದಾರೆ.

ಈಗಾಗಲೇ ಫ್ರಾನ್ಸ್​ನ ನೆರೆಯ ರಾಷ್ಟ್ರಗಳಲ್ಲಿ ಒಮಿಕ್ರೋನ್​ ಪಾಸಿಟಿವ್​ ಕಂಡು ಬಂದಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಫ್ರಾನ್ಸ್​ನ ಆರೋಗ್ಯ ಸಚಿವ ಒಲಿವರ್​​​ ವೆರನ್​​​​​, ಈಗಾಗಲೇ ನಮ್ಮ ಪಕ್ಕದ ದೇಶಗಳಲ್ಲಿ ಒಮಿಕ್ರೋನ್​ ಎಂಟ್ರಿ ಕೊಟ್ಟಿದೆ. ಈ ವೈರಸ್​ ನಮ್ಮಲ್ಲೂ ಹರಡುವ ಎಲ್ಲ ಸಾಧ್ಯತೆಗಳಿವೆ ಎಂದಿದ್ದಾರೆ. ಹೀಗಾಗಿ ನಾವು ವೈರಸ್​ ಹರಡದಂತೆ ತಡೆಗಟ್ಟಲು ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ.

ಇದನ್ನು ಓದಿ:ಹೊಸ ಕೋವಿಡ್​ ರೂಪಾಂತರದ ಬಗ್ಗೆ ನಿಮಗೆಷ್ಟು ಗೊತ್ತು.. ಏನಿದು ಒಮಿಕ್ರೋನ್?​

ಈಗಾಗಲೇ 7 ಆಫ್ರಿಕನ್​ ದೇಶಗಳಿಂದ ವಿಮಾನಯಾನಕ್ಕೆ ನಿಷೇಧ ಹೇರಲಾಗಿದೆ ಎಂದು ಫ್ರಾನ್ಸ್​ ಸಚಿವರು ತಿಳಿಸಿದ್ದಾರೆ. ಈ ನಡುವೆ ಒಮಿಕ್ರೋನ್​ ಹೆಚ್ಚು ಅಪಾಯಕಾರಿಯೇ ಅಥವಾ ವೇಗವಾಗಿ ಹಬ್ಬುತ್ತದೆಯೇ ಎಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ABOUT THE AUTHOR

...view details