ಕರ್ನಾಟಕ

karnataka

20 ವರ್ಷದ ಯುವಕನಿಂದ ಚಾಕು ದಾಳಿ.. 8 ಜನರಿಗೆ ಗಾಯ!

By

Published : Mar 4, 2021, 7:29 AM IST

20 ವರ್ಷದ ಯುವಕನಿಂದ ಚಾಕು ದಾಳಿ ನಡೆದಿದ್ದು, ಈ ಘಟನೆಯಲ್ಲಿ 8 ಜನ ಗಾಯಗೊಂಡಿರುವ ಘಟನೆ ಸ್ವೀಡನ್​ನ ಸ್ಟಾಕ್ಹೋಮ್​ನಲ್ಲಿ ನಡೆದಿದೆ.

8 people injured, 8 people injured in knife attack, 8 people injured in knife attack in Sweden, Sweden crime, Sweden crime news, 8 ಜನರಿಗೆ ಗಾಯ, ಚಾಕು ದಾಳಿಯಲ್ಲಿ 8 ಜನರಿಗೆ ಗಾಯ, ಸ್ವೀಡನ್​ನಲ್ಲಿ  ಚಾಕು ದಾಳಿಯಲ್ಲಿ 8 ಜನರಿಗೆ ಗಾಯ, ಸ್ವೀಡನ್​ ಅಪರಾಧ, ಸ್ವೀಡನ್​ ಅಪರಾಧ ಸುದ್ದಿ,
ಸಂಗ್ರಹ ಚಿತ್ರ

ಸ್ಟಾಕ್ಹೋಮ್(ಸ್ವೀಡನ್​): ದಕ್ಷಿಣ ಸ್ವೀಡನ್‌ನ ಸ್ಟಾಕ್ಹೋಮ್​ನಲ್ಲಿ ಬುಧವಾರದಂದು ಯುವಕನೊಬ್ಬ ಜನರ ಮೇಲೆ ಚಾಕು ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಸುಮಾರು ಎಂಟು ಜನ ಗಾಯಗೊಂಡಿದ್ದಾರೆ.

20 ವರ್ಷ ಯುವಕನಿಂದ ಜನರ ಮೇಲೆ ದಾಳಿ ನಡೆದಿದೆ. ಜೋಂಕೋಪಿಂಗ್ ಕೌಂಟಿ ಪೊಲೀಸ್ ಇಲಾಖೆಯಿಂದ ಬಂದ ಯುವಕನ ಮೇಲೆ ಪೊಲೀಸರು ವೆಟ್ಲ್ಯಾಂಡಾ ಪ್ರದೇಶದಲ್ಲಿ ಗುಂಡಿಕ್ಕಿ ಗಾಯಗೊಳಿಸಿ ವಶಕ್ಕೆ ಪಡೆದಿದ್ದಾರೆ. ಘಟನೆಯ ಬಗ್ಗೆ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ನೀಡದಿದ್ದರೂ, ಭಯೋತ್ಪಾದನೆ ಶಂಕೆಯಲ್ಲಿ ಈ ತನಿಖೆ ಆರಂಭಿಸಲಾಗಿದೆ.

ದಾಳಿಯನ್ನು ಖಂಡಿಸಿದ ಪ್ರಧಾನಿ ಸ್ಟೀಫನ್ ಲೋಫ್ವೆನ್ ಈ ಘಟನೆ ಮತ್ತು ಅದರ ಉದ್ದೇಶವು ಇನ್ನು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.

ABOUT THE AUTHOR

...view details