ನವದೆಹಲಿ: 100 ಮಿಲಿಯನ್ ಡೋಸ್ ಸಿಂಗಲ್ ಶಾಟ್ ಜಾನ್ಸನ್ ಮತ್ತು ಜಾನ್ಸನ್ ಕೊರೊನಾ ಲಸಿಕೆಯನ್ನು ಯೂರೋಪಿಯನ್ ಒಕ್ಕೂಟದಿಂದ ಭಾರತಕ್ಕೆ ತರಲು ಅಸೋಸಿಯೇಷನ್ ಆಫ್ ಹೆಲ್ತ್ಕೇರ್ ಪ್ರೊವೈಡರ್ಸ್ ಎನ್ಜಿಒ ನಿರ್ಧರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎನ್ಜಿಓ ಮಹಾನಿರ್ದೇಶಕ ಡಾ.ಗಿರ್ಧರ್ ಜ್ಞಾನಿ, ಎನ್ಜಿಒ ಮೂಲಕ ದೇಶದ ಬಹುಪಾಲು ಆಸ್ಪತ್ರೆಗಳ ಪ್ರತಿನಿಧಿಸಿದ್ದೇವೆ. ಅಲ್ಲದೇ ಭಾರತಕ್ಕೆ 100 ಮಿಲಿಯನ್ (10 ಕೋಟಿ) ಡೋಸ್ಗಳ ಅಗತ್ಯತೆ ಕುರಿತು ಪತ್ರದ ಮೂಲಕ ಯುರೋಪಿಯನ್ ಯೂನಿಯನ್ಗೆ ತಿಳಿಸಿದ್ದೇವೆ. ಈ ಪ್ರಕ್ರಿಯೆ ಇನ್ನು ಪ್ರಗತಿ ಹಂತದಲ್ಲಿದೆ ಎಂದಿದ್ದಾರೆ. ಅಲ್ಲದೇ ನೇರವಾಗಿ ಲಸಿಕೆ ತಯಾರಿಕಾ ಸಂಸ್ಥೆಯನ್ನೇ ಸಂಪರ್ಕಿಸಲಾಗಿದೆ. ಇದು ಸಿಂಗಲ್ ಡೋಸ್ ಲಸಿಕೆಯಾಗಿದ್ದು, ಭಾರತದಲ್ಲಿ ಬಳಕೆಯಾಗುತ್ತಿರುವ ಲಸಿಕೆಗಳೆಲ್ಲವೂ ಎರಡು ಡೋಸ್ಗಳಾಗಿವೆ ಎಂದಿದ್ದಾರೆ.