ಕರ್ನಾಟಕ

karnataka

'ಮನಮೋಹನ್​​​ ಸಿಂಗ್ ಮುಖ್ಯ ಅತಿಥಿ ಅಲ್ಲ': ಕರ್ತಾರ್​ಪುರ ಕಾರಿಡಾರ್​​ ಉದ್ಘಾಟನೆ ಬಗ್ಗೆ ಪಾಕ್​​ ಸ್ಪಷ್ಟನೆ

By

Published : Oct 20, 2019, 8:50 AM IST

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೇವಲ ಓರ್ವ ಪ್ರವಾಸಿಗರಾಗಿ ಮಾತ್ರವೇ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದಿರುವ ಖುರೇಷಿ, ಮನಮೋಹನ್ ಸಿಂಗ್ ಕರ್ತಾರ್​​ಪುರ ಕಾರಿಡಾರ್ ಉದ್ಘಾಟನೆಯ ಮುಖ್ಯ ಅತಿಥಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ತಾರ್ಪುರ ಉದ್ಘಾಟನೆ

ಮುಲ್ತಾನ್(ಪಾಕಿಸ್ತಾನ):ಕರ್ತಾ​ರ್​​ಪುರ ಕಾರಿಡಾರ್​​ಅನ್ನು ಪಾಕಿಸ್ತಾನ ನವೆಂಬರ್ 9ರಂದು ಔಪಚಾರಿಕವಾಗಿ ಉದ್ಘಾಟನೆ ಮಾಡಲಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಹೇಳಿದ್ದಾರೆ.

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೇವಲ ಓರ್ವ ಪ್ರವಾಸಿಗರಾಗಿ ಮಾತ್ರವೇ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದಿರುವ ಖುರೇಷಿ, ಮನಮೋಹನ್ ಸಿಂಗ್ ಕರ್ತಾರ್​​ಪುರ ಕಾರಿಡಾರ್ ಉದ್ಘಾಟನೆಯ ಮುಖ್ಯ ಅತಿಥಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೋದಿ ಅವರಿಂದ್ಲೇ ಕರ್ತಾರ್​​ಪುರ್​ ಯೋಜನೆ ಉದ್ಘಾಟನೆ, ಪಾಕ್​ಗೆ ನಮೋ ಪ್ರಯಾಣಿಸ್ತಾರಾ?

"ಕರ್ತಾರ್​ಪುರ ಕಾರಿಡಾರ್​​ಅನ್ನು ನವೆಂಬರ್ 9ರಂದು ಪಾಕಿಸ್ತಾನ ಪ್ರವಾಸಿಗರಿಗೆ ಮುಕ್ತಗೊಳಿಸಲಿದೆ. ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ನಾನು ಕಾರ್ಯಕ್ರಮಕ್ಕೆ ಸಾಮಾನ್ಯ ವ್ಯಕ್ತಿಯಾಗಿ ಬರುತ್ತೇನೆ. ಆದರೆ ಮುಖ್ಯ ಅತಿಥಿಯಾಗಿ ಬರುವುದಿಲ್ಲ ಎಂದು ಮನಮೋಹನ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ" ಎಂದು ಖುರೇಷಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ದೇರಾ ಬಾಬಾ ನಾನಕ್ ಪುಣ್ಯ ಸ್ಥಳಕ್ಕೆ ಪಂಜಾಬ್​ನ ಗುರುದಾಸ್​ಪುರದಿಂದ ಪಾಕಿಸ್ತಾನದ ದರ್ಬಾರ್ ಸಾಹೀಬ್ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್​ಪುರ ಕಾರಿಡಾರ್​​ಅನ್ನು ನವೆಂಬರ್ 8ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

Intro:Body:

ಮುಲ್ತಾನ್(ಪಾಕಿಸ್ತಾನ): ಕರ್ತಾರ್​ರ್ಪುರ ಕಾರಿಡಾರ್​ ಅನ್ನು ಪಾಕಿಸ್ತಾನ ನವೆಂಬರ್ 9ರಂದು ಔಪಚಾರಿಕವಾಗಿ ಉದ್ಘಾಟನೆ ಮಾಡಲಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಹೇಳಿದ್ದಾರೆ.



ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೇವಲ ಓರ್ವ ಪ್ರವಾಸಿಗನಾಗಿ ಮಾತ್ರವೇ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂದಿರುವ ಖುರೇಷಿ, ಮನಮೋಹನ್ ಸಿಂಗ್ ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಯ ಮುಖ್ಯ ಅತಿಥಿಯಲ್ಲಿ ಎಂದು ಸ್ಪಷ್ಟಪಡಿಸಿದ್ದಾರೆ.



"ಕರ್ತಾರ್ಪುರ ಕಾರಿಡಾರ್​ ಅನ್ನು ನವೆಂಬರ್ 9ರಂದು ಪಾಕಿಸ್ತಾನ ಪ್ರವಾಸಿಗರಿಗೆ ಮುಕ್ತಗೊಳಿಸಲಿದೆ. ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ನಾನು ಕಾರ್ಯಕ್ರಮಕ್ಕೆ ಸಾಮಾನ್ಯ ವ್ಯಕ್ತಿಯಾಗಿ ಬರುತ್ತೇನೆ ಆದರೆ ಮುಖ್ಯ ಅತಿಥಿಯಾಗಿ ಬರುವುದಿಲ್ಲ ಎಂದು ಮನಮೋಹನ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ" ಎಂದು ಖುರೇಷಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.



ದೇರಾ ಬಾಬಾ ನಾನಕ್ ಪುಣ್ಯಸ್ಥಳಕ್ಕೆ ಪಂಜಾಬಿನ ಗುರುದಾಸ್​ಪುರದಿಂದ ಪಾಕಿಸ್ತಾನದ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಕಾರಿಡಾರ್​ ಅನ್ನು ನವೆಂಬರ್ 8ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. 


Conclusion:

ABOUT THE AUTHOR

...view details