ಸಿಯೋಲ್: ಪೂರ್ವ ಕಡಲು ತೀರದ ಕಡೆಗೆ ಉತ್ತರ ಕೊರಿಯಾ ಹಲವಾರು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾ ತಿಳಿಸಿದೆ. ತನ್ನ ದೇಶದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಭೀತಿಯನ್ನೂ ಲೆಕ್ಕಿಸದೆ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ಮಾಡುತ್ತಿದೆ.
ಕೊರೊನಾ ವಿಪತ್ತಿನ ಮಧ್ಯೆ ಉತ್ತರ ಕೊರಿಯಾದಿಂದ ಕ್ರೂಸ್ ಕ್ಷಿಪಣಿ ಪರೀಕ್ಷೆ
ದೇಶದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಭೀತಿಯನ್ನೂ ಲೆಕ್ಕಿಸದೆ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ಮಾಡುತ್ತಿದೆ. ಮಂಗಳವಾರ ಬೆಳಗ್ಗೆ ಹಾರಿಸಲಾಗಿರುವ ಕ್ಷಿಪಣಿಗಳು ಬಹುತೇಕ ಕ್ರೂಸ್ ಕ್ಷಿಪಣಿಗಳಾಗಿವೆ ಎಂದು ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
N Korea fires suspected cruise missiles
ಉತ್ತರ ಕೊರಿಯಾದ ಈಶಾನ್ಯ ಭಾಗದ ಕಾಂಗ್ವೊನ್ ಪ್ರಾಂತ್ಯದಿಂದ ಮಂಗಳವಾರ ಬೆಳಗ್ಗೆ ಹಾರಿಸಲಾಗಿರುವ ಕ್ಷಿಪಣಿಗಳು ಬಹುತೇಕ ಕ್ರೂಸ್ ಕ್ಷಿಪಣಿಗಳಾಗಿವೆ ಎಂದು ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.