ಕರ್ನಾಟಕ

karnataka

ಕೊಲಂಬಿಯಾದ ಪ್ರಥಮ ಮಹಿಳೆಗೆ ಕೊರೊನಾ ಸೋಂಕು

By

Published : Nov 25, 2020, 3:25 PM IST

ಕೊಲಂಬಿಯಾ ರಾಷ್ಟ್ರದ ಪ್ರಥಮ ಮಹಿಳೆ ಮಾರಿಯಾ ಜೂಲಿಯಾನಾ ರೂಯಿಜ್ ಕೊರೊನಾಗೆ ತುತ್ತಾಗಿದ್ದಾರೆ. ಅವರಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಮತ್ತು ಆರೋಗ್ಯ ಸಚಿವಾಲಯದ ಸೂಚನೆ ಮೇರೆಗೆ ಕ್ವಾರಂಟೈನ್​ಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ಮಾರಿಯಾ ಜೂಲಿಯಾನಾ ರೂಯಿಜ್​ ಅವರಿಗೆ ಕೊರೊನಾ
ಮಾರಿಯಾ ಜೂಲಿಯಾನಾ ರೂಯಿಜ್​ ಅವರಿಗೆ ಕೊರೊನಾ

ಬೊಗೋಟಾ: ಕೊಲಂಬಿಯಾದ ಅಧ್ಯಕ್ಷ ಇವಾನ್​ ಡುಕ್​ ಅವರ ಪತ್ನಿ ಮಾರಿಯಾ ಜೂಲಿಯಾನಾ ರೂಯಿಜ್​ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಅಧ್ಯಕ್ಷರ ಕಚೇರಿ ಮಾಹಿತಿ ನೀಡಿದೆ.

ನವೆಂಬರ್ 24ರಂದು ಅವರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಇದರಿಂದ ರಾಷ್ಟ್ರದ ಪ್ರಥಮ ಮಹಿಳೆ ಕೊರೊನಾಗೆ ತುತ್ತಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಮತ್ತು ಆರೋಗ್ಯ ಸಚಿವಾಲಯದ ಸೂಚನೆ ಮೇರೆಗೆ ಕ್ವಾರಂಟೈನ್​ಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.

ಯುಎಸ್​ನಲ್ಲಿ ಕೊರೊನಾ ಅಬ್ಬರ: 12 ಮಿಲಿಯನ್ ಗಡಿ ದಾಟಿದ ಕೇಸ್​

ಇತ್ತೀಚಿನ ದಿನಗಳಲ್ಲಿ ಡುಕ್ ಅವರ ಪತ್ನಿ ಸ್ಯಾನ್ ಆಂಡ್ರೆಸ್ ಮತ್ತು ಪ್ರಾವಿಡೆನ್ಸಿಯಾ ದ್ವೀಪಗಳಿಗೆ ಹಾಗೂ ಚೋಕೊದ ವಾಯುವ್ಯ ವಿಭಾಗಕ್ಕೆ ಭೇಟಿ ನೀಡಿದ್ದರು. ಇಲ್ಲಿಯವರೆಗೆ ಕೊಲಂಬಿಯಾದಲ್ಲಿ 1,262,494 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 35,677 ಜನ ಮೃತಪಟ್ಟಿದ್ದಾರೆ.

ABOUT THE AUTHOR

...view details