ಕರ್ನಾಟಕ

karnataka

ಗಾಲ್ವಾನ್ ಕಣಿವೆ ಸಂಘರ್ಷ: ಅಂದು ತನ್ನ 4 ಯೋಧರು ಹುತಾತ್ಮರಾಗಿದ್ದನ್ನ ಒಪ್ಪಿದ ಚೀನಾ

By

Published : Feb 19, 2021, 7:22 AM IST

Updated : Feb 19, 2021, 8:12 AM IST

China
ಚೀನಾ

07:21 February 19

ಚೀನಾದ ಕೇಂದ್ರ ಮಿಲಿಟರಿ ಆಯೋಗವು ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದಿದ್ದ ಸಂಘರ್ಷದಲ್ಲಿ ಬಲಿಯಾಗಿದ್ದ ತನ್ನ ನಾಲ್ವರು ಯೋಧರ ಕುರಿತು ಮಾಹಿತಿ ಬಿಚ್ಚಿಟ್ಟಿದೆ..

ಬೀಜಿಂಗ್​ :ಮೊದಲ ಬಾರಿ ಚೀನಾವು ಪೂರ್ವ ಲಡಾಖ್​ನ ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡ ತನ್ನ ನಾಲ್ವರು ಯೋಧರ ಕುರಿತು ಮಾಹಿತಿ ಬಿಚ್ಚಿಟ್ಟಿದೆ.  

ಚೀನಾದ ಕೇಂದ್ರ ಮಿಲಿಟರಿ ಆಯೋಗವು ಭಾರತ-ಚೀನಾ ಗಡಿ ಸಂಘರ್ಷದಲ್ಲಿ ಬಲಿಯಾದ ನಾಲ್ವರು ಸೈನಿಕರಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಿದೆ ಎಂಬ ಮಾಹಿತಿ ಚೀನಾದ ಮಾಧ್ಯಮಗಳಿಂದ ಲಭ್ಯವಾಗಿದೆ. ಈ ಮೂಲಕ ಚೀನಾ ತನ್ನ ನಾಲ್ವರು ಯೋಧರು ಹುತಾತ್ಮರಾಗಿದ್ದನ್ನ ಒಪ್ಪಿಕೊಂಡಿದೆ.  

ಅಲ್ಲದೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಕರ್ನಲ್​ಗೆ ಗೌರವ ಪ್ರಶಸ್ತಿಯನ್ನು ಚೀನಾದ ಕೇಂದ್ರ ಮಿಲಿಟರಿ ಆಯೋಗ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. 

2020ರ ಜೂನ್​ನಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದಿದ್ದ ಸಂಘರ್ಷದಲ್ಲಿ 20ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆದರೆ, ಈವರೆಗೆ ತನ್ನ ಮೃತ ಯೋಧರ ಸಂಖ್ಯೆ, ಮಾಹಿತಿಯನ್ನ ಚೀನಾ ಬಹಿರಂಗಪಡಿಸಿರಲಿಲ್ಲ.

Last Updated : Feb 19, 2021, 8:12 AM IST

ABOUT THE AUTHOR

...view details