ಕರ್ನಾಟಕ

karnataka

ಚೀನಾದ ವಾಣಿಜ್ಯ ನೀತಿ ನಿಯಂತ್ರಿಸಲಿದೆಯಾ ಅಮೆರಿಕ ​- ಯುರೋಪಿಯನ್ ಒಕ್ಕೂಟ?

By

Published : Sep 30, 2021, 8:59 AM IST

ಪಿಟ್ಸ್‌ಬರ್ಗ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಒಕ್ಕೂಟದ ನಡುವೆ ನಡೆದ ವ್ಯಾಪಾರ ಮತ್ತು ತಂತ್ರಜ್ಞಾನ ಕುರಿತ ಮಾತುಕತೆಯಲ್ಲಿ ದ್ವಿಪಕ್ಷೀಯ ಸಂಬಂಧ, ಚೀನಾದ ವಾಣಿಜ್ಯ ನೀತಿ ನಿಯಂತ್ರಣ ಸೇರಿದಂತೆ ವಿವಿಧ ವಿವಾದಗಳ ಬಗ್ಗೆ ಚರ್ಚೆ ನಡೆದಿದೆ.

ಕ್ಯಾಥರೀನ್ ತಾಯ್
ಕ್ಯಾಥರೀನ್ ತಾಯ್

ಪಿಟ್ಸ್‌ಬರ್ಗ್( ಅಮೆರಿಕ): ವ್ಯಾಪಾರಕ್ಕೆ ಸಂಬಂಧಪಟ್ಟ ವಿವಾದಗಳು ಮತ್ತು ಸವಾಲುಗಳಿಗೆ ಪರಿಹಾರಗಳನ್ನು ಅನ್ವೇಷಿಸಲು ತಜ್ಞರನ್ನೊಳಗೊಂಡ ಉನ್ನತ ಮಟ್ಟದದ 10 ಸಮಿತಿಗಳ ಕಾರ್ಯವನ್ನು ಮುಂದುವರೆಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಒಕ್ಕೂಟ ಒಪ್ಪಿಕೊಂಡಿವೆ.

ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ನಡೆದ ವ್ಯಾಪಾರ ಮತ್ತು ತಂತ್ರಜ್ಞಾನ ಕುರಿತ ಮಾತುಕತೆಯಲ್ಲಿ ಯುಎಸ್​​ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಸಂಬಂಧ ಭದ್ರಪಡಿಸಲು ಬೇಕಾದ ಹವಾಮಾನ, ತಂತ್ರಜ್ಞಾನದ ಮಾನದಂಡಗಳಿಂದ ಹಿಡಿದು ಜಾಗತಿಕ ವ್ಯಾಪಾರದ ವಿಷಯಗಳವರೆಗೆ ಚರ್ಚೆಗಳನ್ನು ಮುಂದುವರಿಸುವಂತೆ ಕಾರ್ಯನಿರತ ಸಮಿತಿಗಳಿಗೆ ಸೂಚಿಸಲಾಗಿದೆ.

ಸಭೆಯಲ್ಲಿ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೊ ಮತ್ತು ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ತಾಯ್ ಅವರು ಅಮೆರಿಕ ನಿಯೋಗದ ನೇತೃತ್ವ ವಹಿಸಿದ್ದರು. ಚರ್ಚೆಗಳ ಬಳಿಕ ಅಮೆರಿಕ​​ ಮತ್ತು ಯುರೋಪಿಯನ್ ಒಕ್ಕೂಟ ಜಂಟಿ ಹೇಳಿಕೆ ಹೊರಡಿಸಿದ್ದು, ಹೂಡಿಕೆ ಸ್ಕ್ರೀನಿಂಗ್ ಮಾಡುವ ರಫ್ತು ನಿಯಂತ್ರಣಗಳನ್ನು ನಿರ್ವಹಿಸುವ ಅಗತ್ಯವನ್ನು ಒಪ್ಪಿಕೊಂಡಿವೆ ಒತ್ತಿ ಹೇಳಿವೆ. ಆದರೆ, ಯಾವುದೇ ರಾಷ್ಟ್ರದ ಹೆಸರು ನೇರವಾಗಿ ಹೇಳಿಲ್ಲವಾದರೂ ಚೀನಾದ ವಾಣಿಜ್ಯ ನೀತಿ ನಿಯಂತ್ರಣವೇ ಈ ಹೇಳಿಕೆಯ ಹಿಂದಿನ ಸಂಗತಿಯಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ದಕ್ಷಿಣ ಕೊರಿಯಾದೊಂದಿಗೆ ಶಾಂತಿ ಮಾತುಕತೆಯಾಡುತ್ತಿದೆ ಕಿಮ್ ರಾಷ್ಟ್ರ: ಪ್ಲಾನ್ ಏನು ಗೊತ್ತಾ?

ರಫ್ತು ನಿಯಂತ್ರಣಗಳ ಮೇಲೆ ಚರ್ಚೆ ನಡೆಸಲು ಕಾರ್ಯನಿರತ ಸಮಿತಿಗಳು ಅಕ್ಟೋಬರ್ 27 ರಂದು ಮತ್ತೆ ಭೇಟಿಯಾಗಲಿದ್ದು, ಯುರೋಪಿಯನ್ ಒಕ್ಕೂಟದ ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಯುಎಸ್ ಸುಂಕಗಳು, ಚೀನಾದ ವಾಣಿಜ್ಯ ನೀತಿ ವಿರುದ್ಧ ಏಕೀಕೃತ ನಿಲುವು ಸೇರಿದಂತೆ ಹಲವು ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details