ಕರ್ನಾಟಕ

karnataka

ಅಮೆರಿಕದ ಅಲಾಸ್ಕಾ ದ್ವೀಪದಲ್ಲಿ ಭಾರಿ ಭೂಕಂಪ..6.8 ರಷ್ಟು ತೀವ್ರತೆ ದಾಖಲು

By

Published : Jan 12, 2022, 7:14 AM IST

ಅಲಾಸ್ಕಾ ದ್ವೀಪದ ಕೆಲವೆಡೆ ಮಂಗಳವಾರ ಭಾರಿ ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಲಾಸ್ಕಾ(ಅಮೆರಿಕ):ಅಲಾಸ್ಕಾ ದ್ವೀಪದ ಕೆಲವೆಡೆ ಮಂಗಳವಾರ ಭಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 6.8 ರಷ್ಟು ತೀವ್ರತೆ ದಾಖಲಾಗಿದೆ. ಭಾರಿ ಭೂಕಂಪನಕ್ಕೆ ಉತ್ತರ ಪೆಸಿಫಿಕ್‌ನಲ್ಲಿನಲ್ಲಿ ಅಲೆಗಳು ಎದ್ದಿವೆ. ಅಲಾಸ್ಕಾದ ವಿರಳ ಜನಸಂಖ್ಯೆಯ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು -ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲಾಸ್ಕಾ ಭೂಕಂಪನ ಕೇಂದ್ರದ ಭೂಕಂಪ ಶಾಸ್ತ್ರಜ್ಞೆ ನಟಾಲಿಯಾ ರಪ್ಪರ್ಟ್, ಇದು ಅತ್ಯಂತ ಅಸಾಮಾನ್ಯ ಹಾಗೂ ಅತ್ಯಂತ ಶಕ್ತಿಯುತವಾದ ಭೂಕಂಪ ಎಂದು ಹೇಳಿದ್ದಾರೆ. ಅಲಾಸ್ಕಾದ ಉನ್ಮಾಕ್ ದ್ವೀಪದಲ್ಲಿ 39 ನಿವಾಸಿಗಳ ಸಮುದಾಯವಾದ ನಿಕೋಲ್ಸ್ಕಿಯ ಆಗ್ನೇಯಕ್ಕೆ ಸುಮಾರು 40 ಮೈಲುಗಳು ದೂರದಲ್ಲಿ ಈ ಭೂಕಂಪನ ಕೇಂದ್ರಬಿಂದು ಇತ್ತು ಎನ್ನಲಾಗಿದೆ. ಸುಮಾರು ಒಂದು ಗಂಟೆಯ ನಂತರ, ಅದೇ ಪ್ರದೇಶದಲ್ಲಿ ಮತ್ತೆ 6.6 ತೀವ್ರತೆಯ ಭೂಕಂಪ ಸಂಭವಿಸಿರುವ ವರದಿಯಾಗಿದೆ.

ಭೂಮಿ ಕಂಪಿಸಿದ ನಂತರ, ರಾಷ್ಟ್ರದ ಅತ್ಯಂತ ಜನನಿಬಿಡ ವಾಣಿಜ್ಯ ಮೀನುಗಾರಿಕೆ ಬಂದರುಗಳಲ್ಲಿ ಒಂದಾದ ಡಚ್ ಹಾರ್ಬರ್‌ನ ನೆಲೆಯಾದ ನಿಕೋಲ್ಸ್ಕಿ ಮತ್ತು ಉನಾಲಾಸ್ಕಾದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಯಾವುದೇ ಹಾನಿಯಾಗಿಲ್ಲ. ಆದರೂ ಅಲಾಸ್ಕಾ ಪರ್ಯಾಯ ದ್ವೀಪ ಮತ್ತು ದಕ್ಷಿಣ ಅಲಾಸ್ಕಾ ಸಮುದ್ರ ತಟದಲ್ಲಿ ವಾಸಿಸುತ್ತಿರುವ ಜನರು ಎತ್ತರದ ಪ್ರದೇಶಕ್ಕೆ ಹೋಗಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ:ಉತ್ತರ ಸೈಪ್ರಸ್​ನ ನಿಕೋಸಿಯಾದಲ್ಲಿ 6.4 ತೀವ್ರತೆಯ ಭೂಕಂಪ

ABOUT THE AUTHOR

...view details