ಕರ್ನಾಟಕ

karnataka

ಚೀನಾ ವಿರುದ್ಧ ತಿರುಗಿ ಬಿದ್ದ 40 ರಾಷ್ಟ್ರಗಳು: ಡ್ರ್ಯಾಗನ್​ ಪರ ನಿಂತ ಪಾಕ್​ಗೆ ತೀವ್ರ ಮುಖಭಂಗ

By

Published : Oct 7, 2020, 8:03 PM IST

ಅಮೆರಿಕ ಸೇರಿದಂತೆ ಅನೇಕ ಯುರೋಪಿಯನ್ ರಾಷ್ಟ್ರಗಳು, ಜಪಾನ್ ಮತ್ತು ಇತರ ದೇಶಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಮಿಚೆಲ್ ಬ್ಯಾಚೆಲೆಟ್ ಸೇರಿದಂತೆ ಸ್ವತಂತ್ರ ವೀಕ್ಷಕರಿಗೆ ಕ್ಸಿನ್‌ಜಿಯಾಂಗ್‌ಗೆ ಯಾವುದೇ ಅಡೆತಡೆಯಿಲ್ಲದ ಮುಕ್ತವಾಗಿ ಪ್ರವೇಶಿಸಲು ಅನುಮತಿಸುವಂತೆ ಚೀನಾವನ್ನು ಒತ್ತಾಯಿಸಿದರು. ಉಯಿಘರ್ ಮತ್ತು ಇತರ ಅಲ್ಪಸಂಖ್ಯಾತರನ್ನು ಬಂಧಿಸುವುದನ್ನು ಕೂಡಲೇ ತಡೆಯಬೇಕು ಎಂದು ಚೀನಾಗೆ ಆಗ್ರಹಿಸಿದ್ದಾರೆ.

china
ಚೀನಾ

ನ್ಯೂಯಾರ್ಕ್​: ವಿಶ್ವದಾದ್ಯಂತ ಕೊರೊನಾ ಸೋಂಕು ವ್ಯಾಪಿಸಲು ಕಾರಣವಾದ ಚೀನಾ ವಿರುದ್ಧ ಜಾಗತಿಕ ಸಮುದಾಯ ಕಿಡಿಕಾರುತ್ತಿರುವ ಹೊತ್ತಲ್ಲೇ ಅಮೆರಿಕ ಸೇರಿ 40 ರಾಷ್ಟ್ರಗಳು ಮುಖ್ಯವಾಗಿ ಪಶ್ಚಿಮಾತ್ಯ ದೇಶಗಳು, ಟಿಬೆಟ್‌ ಮತ್ತು ಕ್ಸಿನ್ ‌ಜಿಯಾಂಗ್​ನಲ್ಲಿನ ಅಲ್ಪಸಂಖ್ಯಾತರ ಹಾಗೂ ತನ್ನ ಹೊಸ ರಾಷ್ಟ್ರೀಯ ಭದ್ರತಾ ಕಾನೂನಿನಿಂದ ಹಾಂಕಾಂಗ್​​​ ಮೇಲೆ ಪ್ರಭಾವ ಬೀರುತ್ತಿರುವ ಮಾನವ ಹಕ್ಕುಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿವೆ.

ಅಮೆರಿಕ ಸೇರಿದಂತೆ ಅನೇಕ ಯುರೋಪಿಯನ್ ರಾಷ್ಟ್ರಗಳು, ಜಪಾನ್ ಮತ್ತು ಇತರ ದೇಶಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ಮಿಚೆಲ್ ಬ್ಯಾಚೆಲೆಟ್ ಸೇರಿದಂತೆ ಸ್ವತಂತ್ರ ವೀಕ್ಷಕರಿಗೆ ಕ್ಸಿನ್‌ಜಿಯಾಂಗ್‌ಗೆ ಯಾವುದೇ ಅಡೆತಡೆಯಿಲ್ಲದ ಮುಕ್ತವಾಗಿ ಪ್ರವೇಶಿಸಲು ಅನುಮತಿಸುವಂತೆ ಚೀನಾವನ್ನು ಒತ್ತಾಯಿಸಿದರು. ಉಯಿಘರ್ ಮತ್ತು ಇತರ ಅಲ್ಪಸಂಖ್ಯಾತರನ್ನು ಬಂಧಿಸುವುದನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.

39 ರಾಷ್ಟ್ರಗಳು ಸಾಮಾನ್ಯ ಸಭೆಯ ಮಾನವ ಹಕ್ಕುಗಳ ಸಮಿತಿ ಸಭೆಯಲ್ಲಿ ಓದಿದ ಜಂಟಿ ಹೇಳಿಕೆಯಲ್ಲಿ, "ಹಾಂಕಾಂಗ್​​​​‌ನಲ್ಲಿ ಸ್ವಾಯತ್ತತೆ, ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯಲು ಮತ್ತು ಹಾಂಕಾಂಗ್​ ನ್ಯಾಯಾಂಗದ ಸ್ವಾತಂತ್ರ್ಯ ಗೌರವಿಸಲು" ಒತ್ತಾಯಿಸಿದವು.

ಜರ್ಮನ್ ರಾಯಭಾರಿ ಕ್ರಿಸ್ಟೋಫ್ ಹ್ಯೂಸ್ಜೆನ್ ಅವರು ಓದಿದ ಅವರ ಹೇಳಿಕೆಯನ್ನು ತಕ್ಷಣವೇ ಪಾಕಿಸ್ತಾನ ಸೇರಿದಂತೆ ಇತರ 55 ದೇಶಗಳು ಈ ಹೇಳಿಕೆ ವಿರೋಧಿಸಿದವು. ಹಾಂಕಾಂಗ್​​ ಸಂಬಂಧಿತ ಚೀನಾದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಅವು ಖಂಡಿಸಿದವು. ಈ ಪ್ರದೇಶವು ಚೀನಾದ ಭಾಗವಾಗಿದೆ. ಹಾಂಕಾಂಗ್​‌ನಲ್ಲಿ ಚೀನಾದ “ಒಂದು ದೇಶ, ಎರಡು ವ್ಯವಸ್ಥೆಗಳು ನೀತಿ ನಿರಂತರವಾಗಿದೆ. ರಾಷ್ಟ್ರೀಯ ಭದ್ರತಾ ಕಾನೂನು ಖಚಿತಪಡಿಸುತ್ತದೆ ಎಂದು ವಾದಿಸಿದವು.

ಚೀನಾದ ಭಯೋತ್ಪಾದನೆ ನಿಗ್ರಹ ಮತ್ತು ಕ್ಸಿನ್‌ಜಿಯಾಂಗ್‌ನಲ್ಲಿನ ಅಪನಗದೀಕರಣ ಕ್ರಮಗಳನ್ನು ಬೆಂಬಲಿಸುವ 45 ದೇಶಗಳ ಪರವಾಗಿ ಕ್ಯೂಬಾ ಹೇಳಿಕೆ ನೀಡಿದೆ. ಭಯೋತ್ಪಾದನೆ ಮತ್ತು ಉಗ್ರವಾದದ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಚೀನಾ ಕೈಗೊಂಡ ಕ್ರಮಗಳನ್ನು ಈ ಪ್ರಾಂತ್ಯದ ಎಲ್ಲ ಜನಾಂಗದವರ ಮಾನವ ಹಕ್ಕುಗಳನ್ನು ರಕ್ಷಿಸಲು ಕಾನೂನಿನೊಳಗೆ ಕೈಗೊಳ್ಳಲಾಗಿದೆ ಎಂದು ಹೇಳಿತು.

ಪಾಕಿಸ್ತಾನ ಮತ್ತು ಕ್ಯೂಬನ್ ಎರಡೂ ಹೇಳಿಕೆಗಳಿಗೆ ಸಹಿ ಹಾಕಿದ ದೇಶಗಳಲ್ಲಿ ರಷ್ಯಾ, ಸಿರಿಯಾ, ಉತ್ತರ ಕೊರಿಯಾ, ವೆನಿಜುವೆಲಾ ಕೂಡ ಸೇರಿವೆ.

ಟಿಬೆಟ್‌ ಮತ್ತು ಕ್ಸಿನ್‌ಜಿಯಾಂಗ್​ ಭಾಗದಲ್ಲಿ 'ರಾಜಕೀಯ ಮರು - ಶಿಕ್ಷಣ' ಶಿಬಿರಗಳ ದೊಡ್ಡ ಜಾಲದ ಅಸ್ತಿತ್ವದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿವೆ. ಕ್ಸಿನ್‌ಜಿಯಾಂಗ್‌ನಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಜನರನ್ನು ನಿರಂಕುಶವಾಗಿ ಬಂಧಿಸಲಾಗಿದೆ ಎಂದು ವಿಶ್ವಾಸಾರ್ಹ ವರದಿಗಳು ಸೂಚಿಸುತ್ತವೆ. ಮಾನವ ಹಕ್ಕುಗಳ ಉಲ್ಲಂಘನೆಯ ವರದಿಗಳು ಸಹ ಪ್ರಕಟವಾಗುತ್ತಿವೆ ಎಂದು ಚೀನಾ ಪರ ಹೇಳಿಕೆ ಕೊಟ್ಟ ಪಾಕ್​ಗೆ 39 ರಾಷ್ಟ್ರಗಳು ಪ್ರತ್ಯುತ್ತರ ಕೊಟ್ಟವು.

ABOUT THE AUTHOR

...view details