ಕರ್ನಾಟಕ

karnataka

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಮಾಲ್ಡೀವ್ಸ್ ವಿದೇಶಾಂಗ ಸಚಿವ

By

Published : Jun 8, 2021, 9:06 AM IST

Updated : Jun 8, 2021, 11:28 AM IST

ಮುಂದಿನ ಸೆಪ್ಟೆಂಬರ್‌ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 76 ನೇ ಅಧಿವೇಶನ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷರ ಆಯ್ಕೆ ನಡೆಸಲಾಗಿದೆ.

Maldives Foreign Minister Elected President Of UN General Assembly
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ

ನ್ಯೂಯಾರ್ಕ್: ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76 ನೇ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರ ಆಯ್ಕೆಗಾಗಿ ಚಲಾವಣೆಯಾದ 191 ಮತಗಳ ಪೈಕಿ 143 ಮತಗಳನ್ನು ಶಾಹಿದ್ ಪಡೆದಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿರುವ 76 ನೇ ಅಧಿವೇಶನದ ಅಧ್ಯಕ್ಷರ ಆಯ್ಕೆಗಾಗಿ 193 ಸದಸ್ಯರ ಸಾಮಾನ್ಯ ಸಭೆಯಲ್ಲಿ ಸೋಮವಾರ ಮತದಾನ ನಡೆಯಿತು. ಚುನಾವಣಾ ಕಣದಲ್ಲಿದ್ದ ಅಬ್ದುಲ್ಲಾ ಶಾಹಿದ್ 143 ಮತಗಳನ್ನು ಪಡೆದರೆ ಅಫ್ಘಾನಿಸ್ತಾನದ ಮಾಜಿ ವಿದೇಶಾಂಗ ಸಚಿವ ಡಾ. ಝಲ್ಮೈ ರಸೂಲ್ 48 ಮತಗಳನ್ನು ಪಡೆದರು.

ವಿಶ್ವಸಂಸ್ಥೆಯ ಪ್ರಾದೇಶಿಕ ಬದಲಾವಣೆಯ ನಿಯಮಗಳ ಪ್ರಕಾರ, ಸಾಮಾನ್ಯ ಸಭೆಯ 76 ನೇ ಅಧಿವೇಶನದ ಅಧ್ಯಕ್ಷರನ್ನು ಏಷ್ಯಾ-ಪೆಸಿಫಿಕ್ ರಾಷ್ಟ್ರಗಳ ಗುಂಪಿನಿಂದ ಆಯ್ಕೆ ಮಾಡಬೇಕಿತ್ತು. ಅದರಂತೆ, ಶಾಹಿದ್ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ವರ್ಷ ಕೋವಿಡ್ ಸಂದಿಗ್ದತೆಯ ನಡುವೆ ನಡೆದ 75 ನೇ ಅಧಿವೇಶನದ ಅಧ್ಯಕ್ಷ ಸ್ಥಾನವನ್ನು ತುರ್ಕಿಯ ರಾಜತಾಂತ್ರಿಕ ವೋಲ್ಕಾನ್ ಬೊಜ್ಕಿರ್ ಅವರು ವಹಿಸಿದ್ದರು. ಸಾಮಾನ್ಯ ಸಭೆಯ ಅಧಿವೇಶನದ ಅಧ್ಯಕ್ಷರನ್ನು ಪ್ರತಿವರ್ಷ ರಹಸ್ಯ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಧ್ಯಕ್ಷರಾಗಲು ಸರಳ ಬಹುಮತದ ಅಗತ್ಯವಿರುತ್ತದೆ.

ಐದು ಗುಂಪುಗಳಿಂದ ಆಯ್ಕೆ

ಸಾಮಾನ್ಯ ಸಭೆಯ ಐದು ಪ್ರಾದೇಶಿಕ ಗುಂಪುಗಳಾದ ಗ್ರೂಪ್ ಆಫ್ ಏಷ್ಯನ್ ಸ್ಟೇಟ್ಸ್, ಗ್ರೂಪ್ ಆಫ್ ಈಸ್ಟರ್ನ್ ಯುರೋಪಿಯನ್ ಸ್ಟೇಟ್ಸ್, ಗ್ರೂಪ್ ಆಫ್ ಲ್ಯಾಟಿನ್ ಅಮೆರಿಕನ್ ಮತ್ತು ಕೆರಿಬಿಯನ್ ಸ್ಟೇಟ್ಸ್, ಗ್ರೂಪ್ ಆಫ್ ಆಫ್ರಿಕನ್ ಸ್ಟೇಟ್ಸ್, ವೆಸ್ಟರ್ನ್ ಯುರೋಪಿಯನ್ ಮತ್ತು ಇತರ ಸ್ಟೇಟ್ಸ್ ಗ್ರೂಪ್​​ಗಳಿಂದ ಅಧ್ಯಕ್ಷರನ್ನುಆಯ್ಕೆ ಮಾಡಲಾಗುತ್ತದೆ. ಈ ವರ್ಷ ಏಷ್ಯಾ-ಪೆಸಿಫಿಕ್ ಗ್ರೂಪ್​ನಿಂದ ಆಯ್ಕೆ ಮಾಡಲಾಗಿದೆ.

ಭಾರತ ಬೆಂಬಲ :

ಶಾಹಿದ್ ಅವರ ಆಯ್ಕೆಗೆ ಆರಂಭದಿಂದಲೂ ಭಾರತ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಮಾಲ್ಡೀವ್ಸ್ ರಾಜತಾಂತ್ರಿಕ ಮಾಲೆ ಜೊತೆ ಸುದ್ದಿಗೊಷ್ಠಿ ನಡೆಸಿದ್ದ ವಿದೇಶಾಂಗ ಸಚಿವ ಜೈಶಂಕರ್, ದ್ವಿಪಕ್ಷೀಯ ಸಂಬಂಧವನ್ನು ಕೊಂಡಾಡಿದ್ದರು.

Last Updated : Jun 8, 2021, 11:28 AM IST

ABOUT THE AUTHOR

...view details