ಕರ್ನಾಟಕ

karnataka

ಕೆನಡಾದಲ್ಲಿ ಭಾರತೀಯ ಹೈಕಮಿಷನ್​ನಿಂದ ಗಣರಾಜ್ಯೋತ್ಸವ ಆಚರಣೆ

By

Published : Jan 27, 2021, 4:53 AM IST

ಕೆನಡಾದಲ್ಲಿ ಭಾರತೀಯ ಹೈಕಮಿಷನ್​ನಿಂದ 72 ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.

indian-high-commission-celebrates-72nd-republic-day-in-canada
ಗಣರಾಜ್ಯೋತ್ಸವ

ಒಟ್ಟಾವಾ (ಕೆನಡಾ) :ಕೆನಡಾದಲ್ಲಿ ಭಾರತೀಯ ಹೈಕಮಿಷನ್ ವತಿಯಿಂದ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಗಣರಾಜ್ಯೋತ್ಸವ ಸಂದೇಶವನ್ನು ಓದಿದರು.

'ಈ ದಿನವು ದೇಶ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲ ಭಾರತೀಯರಿಗೆ ಬಹಳಷ್ಟು ಅರ್ಥ ನೀಡಿದೆ. 71 ವರ್ಷಗಳ ಹಿಂದೆ, ಈ ದಿನದಂದು ನಾವು ಸಂವಿಧಾನವನ್ನು ಅಳವಡಿಸಿಕೊಂಡಿದ್ದೇವೆ, ಜಾರಿಗೆ ತಂದಿದ್ದೇವೆ. ಸಂವಿಧಾನವು ಪ್ರತಿಪಾದಿಸುವ ಪ್ರಮುಖ ಮೌಲ್ಯಗಳ ಬಗ್ಗೆ ವಿಚಾರ ಮಾಡುವ ದಿನ ಇದಾಗಿದೆ' ಎಂದು ಬಿಸಾರಿಯಾ ರಾಷ್ಟ್ರಪತಿ ಕೋವಿಂದ್ ಅವರ ಗಣರಾಜ್ಯೋತ್ಸವದ ಸಂದೇಶವನ್ನು ತಿಳಿಸಿದರು.

ಭಾರತದಲ್ಲೂ ಕೂಡ 72ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನವದೆಹಲಿಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಗಣ್ಯರ ಸಮ್ಮುಖದಲ್ಲಿ ರಾಜ್‌ಪಾತ್‌ನಲ್ಲಿ ರಾಷ್ಟ್ರಧ್ವಜಾರೋಹಣ ನಡೆಯಿತು.

ABOUT THE AUTHOR

...view details