ಕರ್ನಾಟಕ

karnataka

ಅಮೆರಿಕದ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಪ್ರಕರಣ; ಜೋ ಬೈಡನ್ ಕಾರ್ಯಕ್ರಮ ರದ್ದು

By

Published : Jan 15, 2021, 6:41 PM IST

ಟ್ರಂಪ್​ ಬೆಂಬಲಿಗರಿಂದ ಜನವರಿ 6ರಂದು ಕ್ಯಾಪಿಟಲ್ ಕಟ್ಟಡ(ಅಮೆರಿಕದ ಸಂಸತ್ ಕಟ್ಟಡ)ಕ್ಕೆ ಮುತ್ತಿಗೆ ಹಾಕಿ ಗಲಭೆ ನಡೆಸಿದ ಹಿನ್ನೆಲೆಯಲ್ಲಿ ಭದ್ರತೆಯ ಹಿತದೃಷ್ಟಿಯಿಂದ ಭಾನುವಾರ ನಡೆಯಬೇಕಿದ್ದ ಜೋ ಬೈಡನ್​​ರ ಉದ್ಘಾಟನೆಯ ಪೂರ್ವಾಭ್ಯಾಸ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

File Photo
ಸಂಗ್ರಹ ಚಿತ್ರ

ವಾಷಿಂಗ್ಟನ್:ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತಗೊಂಡಿರುವ ಜೋ ಬೈಡನ್​​ ಭಾನುವಾರದಂದು ಉದ್ಘಾಟನೆಯ ಪೂರ್ವಾಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆದರೆ, ಭದ್ರತಾ ಕಾರಣಗಳಿಂದಾಗಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.

ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಎಣಿಸುವ ಮತ್ತು ಪ್ರಮಾಣೀಕರಿಸುವ ಪ್ರಕ್ರಿಯೆ ಸಾಗುತ್ತಿರುವ ವೇಳೆ ಭದ್ರತೆಯನ್ನು ಉಲ್ಲಂಘಿಸಿ ಕ್ಯಾಪಿಟಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿದ ನೂರಾರು ಟ್ರಂಪ್ ಬೆಂಬಲಿಗರು ಪೊಲೀಸರ ವಿರುದ್ಧ ಘರ್ಷಣೆಗಿಳಿದು ಹಿಂಸಾಚಾರದಲ್ಲಿ ಭಾಗಿಯಾದರು. ಹೀಗಾಗಿ, ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್​​ಬಿಐ) ಜೋ ಬೈಡೆನ್​​ರ ಕಾರ್ಯಕ್ರಮ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದು, ಭದ್ರತಾ ದೃಷ್ಠಿಯಿಂದ ಉದ್ಘಾಟನೆಯ ಪೂರ್ವಾಭ್ಯಾಸ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ಈ ಕಾರ್ಯಕ್ರಮ ಮಾತ್ರವಲ್ಲದೆ, ಜೋ ಬೈಡನ್​​ ತಂಡ ಆಯೋಜಿಸಿದ್ದ ವಿಲ್ಮಿಂಗ್ಟನ್‌ನಿಂದ ವಾಷಿಂಗ್ಟನ್‌ವರೆಗಿನ ಪ್ರವಾಸವನ್ನೂ ಸಹ ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.

ABOUT THE AUTHOR

...view details