ವೆಲ್ಲಿಂಗ್ಟನ್(ನ್ಯೂಜಿಲ್ಯಾಂಡ್) :ಆರು ತಿಂಗಳುಗಳಿಂದ ಶೂನ್ಯ ಕೋವಿಡ್ ಕೇಸ್ ದಾಖಲಾಗುತ್ತಿದ್ದ ನ್ಯೂಜಿಲ್ಯಾಂಡ್ನಲ್ಲಿ ಇದೀಗ ಒಂದು ಪ್ರಕರಣ ಪತ್ತೆಯಾಗಿದೆ. ತಕ್ಷಣವೇ ಮೂರು ದಿನಗಳ ಕಾಲ ಲಾಕ್‌ಡೌನ್ ಹೇರಿ ಸರ್ಕಾರ ಆದೇಶ ಹೊರಡಿಸಿದೆ.
ಪತ್ತೆಯಾಗಿರುವ ಕೇಸ್ ಡೆಲ್ಟಾ ರೂಪಾಂತರಿ ಎಂದು ಶಂಕಿಸಲಾಗಿದೆ. ಇದು 'ಗೇಮ್ ಚೇಂಜರ್' ಆಗಲು ನಾವು ಅವಕಾಶ ಮಾಡಿ ಕೊಡುವುದಿಲ್ಲ ಎಂದು ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಹೇಳಿದ್ದಾರೆ.
ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಥವಾ ಆರಂಭದಲ್ಲೇ ಸೋಂಕು ಹರಡುವುದನ್ನು ವಿಫಲವಾದರೆ ಏನಾಗಬಹುದು ಎಂಬುದನ್ನು ನಾವು ನೋಡಿದ್ದೇವೆ ಎಂದು ಮೂರನೇ ಕೊರೊನಾ ಅಲೆಗೆ ಸಾಕ್ಷಿಯಾಗಿರುವ ಆಸ್ಟ್ರೇಲಿಯಾವನ್ನು ಉದಾಹರಣೆ ನೀಡಿ ಅರ್ಡೆರ್ನ್ ಹೇಳಿಕೆ ನೀಡಿದ್ದಾರೆ. ಮಂಗಳವಾರ (ಇಂದು) ರಾತ್ರಿಯಿಂದ ನ್ಯೂಜಿಲ್ಯಾಂಡ್ನಲ್ಲಿ ಮೂರು ದಿನಗಳ ಕಾಲ ಲಾಕ್‌ಡೌನ್ ಹೇರಲಾಗಿದ್ದು, ವಿಸ್ತರಣೆ ಆಗುವ ಸಾಧ್ಯತೆಯಿದೆ.