ಕರ್ನಾಟಕ

karnataka

2023ರಿಂದ ಪ್ರತಿಷ್ಠಿತ ಮಿಸ್ ಯೂನಿವರ್ಸ್ ಸ್ಪರ್ಧೆಗೆ ವಿವಾಹಿತ ಮಹಿಳೆಯರಿಗೂ ಅವಕಾಶ

By

Published : Aug 22, 2022, 5:55 PM IST

ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಾಹಿತ ಮಹಿಳೆಯರಿಗೆ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿದೆ. ಇದೊಂದು ಐತಿಹಾಸಿಕ ನಿರ್ಧಾರವೆಂದು ಹೇಳಲಾಗುತ್ತಿದ್ದು, ಮಾಜಿ ಮಿಸ್ ಯೂನಿವರ್ಸ್ ಸೇರಿದಂತೆ ಹಲವು ರೂಪದರ್ಶಿಯರು ಈ ನಿರ್ಧಾರವನ್ನು ಸ್ವಗತಿಸಿದ್ದಾರೆ.

Miss Universe to allow married women from 2023
ವಿಶ್ವ ಸುಂದರಿ ಕಿರೀಟ ಧರಿಸಿದ ಭಾರತದ ರೂಪದರ್ಶಿಯರು

ಮುಂಬೈ (ಮಹಾರಾಷ್ಟ್ರ):ವಿಶ್ವದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಮಿಸ್ ಯೂನಿವರ್ಸ್​​ನಲ್ಲಿ ತಾಯಂದಿರು ಮತ್ತು ವಿವಾಹಿತ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ತನ್ನ ಸ್ಪರ್ಧೆಯ ಅರ್ಹತೆಯನ್ನು ವಿಸ್ತರಿಸುತ್ತಿದೆ. ಇದು ಐತಿಹಾಸಿಕ ನಿರ್ಧಾರವಾಗಿದ್ದು, ಹಲವರು ಸ್ವಾಗತಿಸಿದ್ದಾರೆ. ಹಲವು ಕಠಿಣ ಮಾನದಂಡಗಳನ್ನು ಹೊಂದಿದ್ದ ಈ ಸ್ಪರ್ಧೆಯಲ್ಲಿ, ಬರುವ ಅಂದರೆ 2023 ರಿಂದ ಪ್ರಾರಂಭವಾಗುವ ಸ್ಪರ್ಧೆಯ ಸ್ಪರ್ಧಾಳುಗಳಿಗೆ ಈ ಮೇಲಿನ ಅವಕಾಶಗಳ ಜೊತೆಗೆ ಕೆಲವು ಸಡಿಲಿಕೆ, ವಿಶೇಷ ಅನುಮತಿಗಳನ್ನು ಮಾರ್ಪಾಡು ಮಾಡಲಾಗಿದೆ.

ವಿಶ್ವ ಸುಂದರಿ ಕಿರೀಟ ಧರಿಸಿದ ಭಾರತದ ರೂಪದರ್ಶಿಯರು

ಇಲ್ಲಿಯವರೆಗೆ ಕೇವಲ ಅವಿವಾಹಿತ ಯುವತಿಯರಿಗೆ ಮಾತ್ರ ಸೀಮಿತವಾಗಿದ್ದ ಮಿಸ್ ಯೂನಿವರ್ಸ್​ನಲ್ಲಿ ಇನ್ನು ಮುಂದೆ ವಿವಾಹಿತ ಮಹಿಳೆಯರು ಮತ್ತು ತಾಯಂದಿರು ಕೂಡ ಸ್ಪರ್ಧಿಸಬಹುದು ಎಂದು ಹೇಳಿದೆ. ಪ್ರತಿ ವರ್ಷ 80 ದೇಶಗಳ ರೂಪದರ್ಶಿಯರು ಈ ಸ್ಪರ್ಧೆಯಲ್ಲಿ ಭಾಗವಹಿದರೆ ಅದರಲ್ಲಿ ಕೇವಲ ಒಬ್ಬರು ಮಾತ್ರ ಈ ಕಿರೀಟ ಧರಿಸಲು ಸಾಧ್ಯ. ಆದರೆ, ಹಲವರಿಗೆ ಗೆಲ್ಲುವ ಆಸೆ ಇರಲಿ, ಈ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಒಂದು ಸವಾಲಾಗಿತ್ತು. ಅದಕ್ಕೆ ಕಾರಣ ಅಲ್ಲಿಯ ಕಠಿಣ ಮಾನದಂಡಗಳು. ಆದರೆ, ಈಗ ಲೆಕ್ಕಾಚಾರ ಬದಲಾಗಿದೆ. ಒಂದು ಕಾಲದಲ್ಲಿ ಅವಿವಾಹಿತರಿಗೆ ಮಾತ್ರ ಸೀಮಿತವಾಗಿದ್ದ ಈ ಸ್ಪರ್ಧೆಗಳಲ್ಲಿ ಈಗ ವಿವಾಹಿತ ಮಹಿಳೆಯರು ಮತ್ತು ಮಕ್ಕಳ ತಾಯಂದಿರು ಭಾಗವಹಿಸಬಹುದು ಎಂದು ಹೇಳಿದೆ. ಈ ಬದಲಾವಣೆಯನ್ನು ಮಾಜಿ ವಿಶ್ವ ಸುಂದರಿಯರು ಸೇರಿದಂತೆ ಹಲವುರು ಸ್ವಾಗತಿಸಿದ್ದಾರೆ.

ವಿಶ್ವ ಸುಂದರಿ ಕಿರೀಟ ಧರಿಸಿದ ಭಾರತದ ರೂಪದರ್ಶಿ ಲಾರಾ ದತ್ತಾ

ಈ ಹಿಂದಿನ ವಿಶ್ವ ಸುಂದರಿ ಸ್ಪರ್ಧೆಯ ನಿಯಮಗಳ ಪ್ರಕಾರ ಭಾಗವಹಿಸುವ ಸ್ಪರ್ಧಾಳುಗಳು ಅವಿವಾಹಿತರಾಗಿಯೇ ಇರಬೇಕಿತ್ತು. ಮಕ್ಕಳಾದ ತಾಯಂದಿರುಗಳಿಗೆ ಸ್ಪರ್ಧಿಸಲು ಅವಕಾಶ ಸಹ ಇರಲಿಲ್ಲ. ಜೊತೆಗೆ ವಿಜೇತರು ಮಿಸ್ ಯೂನಿವರ್ಸ್ ಆಗಿ ಆಳ್ವಿಕೆ ಮಾಡುವಾಗ ಗರ್ಭಿಣಿಯಾಗಿರಬಾರದು ಎಂಬ ನಿಯಮವನ್ನೂ ಸಹ ಹೇರಲಾಗಿತ್ತು. ಆದರೆ, ಇದೀಗ ಈ ನಿಯಮ ಬದಲಾಗಿದೆ.

ವಿಶ್ವ ಸುಂದರಿ ಕಿರೀಟ ಧರಿಸಿದ ಭಾರತದ ರೂಪದರ್ಶಿ ಸುಶ್ಮಿತಾ ಸೇನ್

ಮೆಕ್ಸಿಕೋದ ಮಿಸ್ ಯೂನಿವರ್ಸ್ 2020 ವಿಜೇತೆ ಆಂಡ್ರಿಯಾ ಮೆಜಾ ರೂಲ್ ಈ ಮಹತ್ತರವಾದ ಬದಲಾವಣೆಯನ್ನು ಸ್ವಾಗತಿಸಿದ್ದಾರೆ. ಪುರುಷರು ಸಾಧಿಸಿದ್ದನ್ನು ಮಹಿಳೆಯರು ಈಗ ಸಾಧಿಸುತ್ತಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ ಯುವತಿಯರು ಮಾತ್ರವಲ್ಲದೇ ತಾಯಂದಿರೂ ಸೇರುವ ಸಮಯ ಬಂದಿದೆ ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ.

2021ರ ವಿಶ್ವ ಸುಂದರಿ ಕಿರೀಟ ಅಲಂಕರಿಸಿದ ಹರ್ನಾಜ್ ಸಂಧು

ವಿಶ್ವ ಸುಂದರಿ ಸ್ಪರ್ಧೆಯ ಕಾರ್ಯಕ್ರಮವನ್ನು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ 160ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ ಮಾಡಿಕೊಂಡು ಬರಲಾಗುತ್ತಿರುವುದು ದೊಡ್ಡ ಸಾಧನೆ. ಇನ್ನು ಭಾರತದ ಹರ್ನಾಜ್ ಸಂಧು 2021ರ ವಿಶ್ವ ಸುಂದರಿ ಕಿರೀಟವನ್ನು ಅಲಂಕರಿಸುವ ಮೂಲಕ ದೇಶಕ್ಕೆ ಕೀರ್ತಿ ತಂದರು.

ಹರ್ನಾಜ್ ಸಂಧು ಅವರನ್ನು ಅಭಿನಂದಿಸುತ್ತಿರುವುದು

ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ 2021 ಸ್ಪರ್ಧೆಯಲ್ಲಿ ಪಂಜಾಬ್‌ನ ಈ ಸುಂದರಿ ಭಾರತವನ್ನು ಪ್ರತಿನಿಧಿಸಿದ್ದರು. ಹರ್ನಾಜ್ ಸಂಧು ಅವರಿಗೂ ಮುನ್ನ ಇಬ್ಬರು ಭಾರತೀಯರು ಮಾತ್ರ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದಿದ್ದರು. ಬಾಲಿವುಡ್ ನಟಿ ಸುಶ್ಮಿತಾ ಸೇನ್ 1994 ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರೆ, ಲಾರಾ ದತ್ತಾ 2000ನೇ ಇಸವಿಯಲ್ಲಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದರು.

ಹರ್ನಾಜ್ ಸಂಧು ಅವರನ್ನು ಅಭಿನಂದಿಸುತ್ತಿರುವುದು

ಇದನ್ನೂ ಓದಿ:ರಜನಿಕಾಂತ್- ಶಿವರಾಜಕುಮಾರ್​ ಅಭಿನಯದ ಜೈಲರ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ

ABOUT THE AUTHOR

...view details