ಕರ್ನಾಟಕ

karnataka

ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಬರ್ತಡೇ: ರೂಮರ್​ ಗರ್ಲ್​​ಫ್ರೆಂಡ್​ ಸುಹಾನಾ ಖಾನ್​ ಜೊತೆ ಸೆಲೆಬ್ರೇಶನ್

By ETV Bharat Karnataka Team

Published : Nov 23, 2023, 3:06 PM IST

Agastya Nanda and Suhana Khan: ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಬರ್ತ್​​ಡೇ ಪಾರ್ಟಿಯಲ್ಲಿ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​​ ಕಾಣಿಸಿಕೊಂಡಿದ್ದಾರೆ.

Agastya Nanda Suhana Khan
ಅಗಸ್ತ್ಯ ನಂದಾ ಸುಹಾನಾ ಖಾನ್

ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ದಂಪತಿಯ ಮೊಮ್ಮಗ ಅಗಸ್ತ್ಯ ನಂದಾ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 23ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಉದಯೋನ್ಮುಖ ನಟನಿಗೆ ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ಚಿತ್ರರಂಗದಿಂದ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ.

ಅಗಸ್ತ್ಯ ನಂದಾ ಜನ್ಮದಿನ:ಆರ್ಚೀಸ್ ಸ್ಟಾರ್​ನ ಫೋಟೋ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ. ಬರ್ತ್​​ಡೇ ಸೆಲೆಬ್ರೇಶನ್​ ವಿಡಿಯೋ ಕೂಡ ವೈರಲ್​ ಆಗಿದೆ. ಕೇಕ್ ಕಟ್​ ಮಾಡುವ ಸಂದರ್ಭ 'ದಿ ಆರ್ಚೀಸ್‌'ನ ಸಹ-ನಟಿ ಸುಹಾನಾ ಖಾನ್ ಸಹ ಉಪಸ್ಥಿತರಿದ್ದರು. ಶಾರುಖ್​​ ಖಾನ್​ ಪುತ್ರಿ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಜೊತೆ ಡೇಟಿಂಗ್​​ ನಡೆಸುತ್ತಿದ್ದಾರೆ ಎಂಬ ವದಂತಿ ಕೆಲ ದಿನಗಳಿಂದ ಇರೋದು ತಿಳಿದೇ ಇದೆ.

ಅಗಸ್ತ್ಯ ಜೊತೆ'ದಿ ಆರ್ಚೀಸ್‌' ತಂಡ: ಅಗಸ್ತ್ಯ ನಂದಾ ಬರ್ತ್​ಡೇ ಸೆಲೆಬ್ರೇಶನ್​ನಲ್ಲಿ ಬಿಡುಗಡೆಗೆ ಸಜ್ಜಾಗಿರುವ 'ದಿ ಆರ್ಚೀಸ್‌' ಸಿನಿಮಾದ ಸಹ-ನಟರಾದ ಸುಹಾನಾ ಖಾನ್ ಮತ್ತು ಮಿಹಿರ್ ಅಹುಜಾ ಕಾಣಿಸಿಕೊಂಡಿದ್ದಾರೆ. ಮಿಹಿರ್ ಅಹುಜಾ ಅವರು ಫೋಟೋ, ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಡಿಯೋಗಳಲ್ಲಿ, ಅಗಸ್ತ್ಯ ನಂದಾ ಕೇಕ್​​ ಕತ್ತರಿಸುತ್ತಿದ್ದಾರೆ. ಸುಹಾನಾ ಪಕ್ಕದಲ್ಲಿ ನಿಂತಿದ್ದಾರೆ. ಗೆಳಯನ ಜನ್ಮದಿನದ ಸಂಭ್ರಮ ಸುಹಾನಾ ಮೊಗದಲ್ಲಿ ಎದ್ದು ಕಾಣುತ್ತಿದೆ. ಅಗಸ್ತ್ಯ ನಂದಾ ಜೊತೆಯೇ ಇದ್ದ ಶಾರುಖ್​ ಪುತ್ರಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಉಳಿದವರು ಹೆಚ್ಚು ಕಾಣಿಸಿಕೊಂಡಿಲ್ಲ. ಆದ್ರೆ ಗೆಳೆಯರ ಸೆಲೆಬ್ರೇಶನ್​ ಸೌಂಡ್​ ಸ್ಪಷ್ಟವಾಗಿ ಕೇಳಿಸಿದೆ. ಅಗಸ್ತ್ಯ ಮತ್ತು ಸುಹಾನಾ ಮ್ಯಾಚಿಂಗ್​ ಕಪ್ಪುಡುಗೆಯಲ್ಲಿ ಕಂಗೊಳಿಸಿದ್ದಾರೆ.

ಇದನ್ನೂ ಓದಿ:ಗ್ಲ್ಯಾಮರಸ್​ ಲುಕ್​​​ನಲ್ಲಿ ರಾಕುಲ್​​​ ಪ್ರೀತ್ ಸಿಂಗ್: ಸೌಂದರ್ಯಕ್ಕೆ ಫ್ಯಾನ್ಸ್ ಕೊಟ್ರು ಫುಲ್​ ಮಾರ್ಕ್ಸ್ ಫೋಟೋ ಗ್ಯಾಲರಿ

ಇಂದು ಬೆಳಗ್ಗೆ ನಟ ಅಭಿಷೇಕ್ ಬಚ್ಚನ್​ ಕೂಡ ಅಗಸ್ತ್ಯ ನಂದಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಅಗಸ್ತ್ಯ ಅವರ ಹಳೇ ಫೋಟೋ ಹಂಚಿಕೊಂಡ ನಟ, "ಹ್ಯಾಪಿ ಬರ್ತ್​ಡೇ ಆರ್ಚೀ ಆ್ಯಂಡ್ರೆವ್ಸ್. ಸ್ಟೇ ಕೂಲ್" ಎಂದು ಬರೆದಿದ್ದಾರೆ. ಅಗಸ್ತ್ಯ ಸಂದಾ, ಅಭಿಷೇಕ್ ಅವರ ಸಹೋದರಿ ಶ್ವೇತಾ ಬಚ್ಚನ್ ಅವರ ಪುತ್ರ.

ಇದನ್ನೂ ಓದಿ:ಸ್ಟೈಲಿಶ್​ ಲುಕ್​ನಲ್ಲಿ ಆಲಿಯಾ ಭಟ್; ಶಾರುಖ್​ ನಂತರದ ಸ್ಥಾನ ಬಣ್ಣದ ಲೋಕದ ಈ ಬೊಂಬೆಗೆ ಫೋಟೋಗಳಿವೆ ನೋಡಿ

ಚೊಚ್ಚಲ ಚಿತ್ರಕ್ಕೆ ಸುಹಾನಾ ಅಗಸ್ತ್ಯ ಸಜ್ಜು: ಅಗಸ್ತ್ಯ ಸಂದಾ, ಜೋಯಾ ಅಖ್ತರ್ ಅವರ ಮುಂದಿನ ಸಿನಿಮಾ 'ದಿ ಆರ್ಚೀಸ್‌' ಸಜ್ಜಾಗಿದ್ದಾರೆ. ಸಿನಿಮಾ ಡಿಸೆಂಬರ್ 7 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುತ್ತದೆ. ಅಗಸ್ತ್ಯ ಜೊತೆಗೆ ಶಾರುಖ್ ಪುತ್ರಿ ಸುಹಾನಾ ಖಾನ್ ಅವರ ಚೊಚ್ಚಲ ಚಿತ್ರ ಕೂಡ ಹೌದು. ಈ ಇಬ್ಬರೂ ಡೇಟಿಂಗ್​ ನಡೆಸುತ್ತಿದ್ದಾರೆಂಬುದು ಸೋಷಿಯಲ್​ ಮೀಡಿಯಾ ಬಳಕೆದಾರರ ಊಹೆ.

ABOUT THE AUTHOR

...view details