ಕರ್ನಾಟಕ

karnataka

ವೇದ ಹಾಫ್‌ ಸೆಂಚುರಿ!: ಚಿತ್ರತಂಡಕ್ಕೆ ಗೀತಾ ಪಿಕ್ಚರ್ಸ್ ಅಭಿನಂದನೆ

By

Published : Feb 20, 2023, 10:57 PM IST

ಡಾ.ಶಿವರಾಜ್​ ಕುಮಾರ್ ನಟನೆಯ​ ವೇದ ಚಿತ್ರ ಬಿಡುಗಡೆಗೊಂಡು ಇಂದಿಗೆ 50 ದಿನಗಳನ್ನು ಪೂರೈಸಿದೆ.

50ದಿನ ಪೂರ್ತಿಗೊಳಿಸಿದ ವೇದ ಚಿತ್ರ
50ದಿನ ಪೂರ್ತಿಗೊಳಿಸಿದ ವೇದ ಚಿತ್ರ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ ಬಹುನಿರೀಕ್ಷಿತ ವೇದ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿ ಸಿನಿಮಾ ಪ್ರೇಕ್ಷಕರ ಹೃದಯ ಕದಿಯುವಲ್ಲಿ ಯಶಸ್ವಿ ಆಗಿತ್ತು. ಹೆಣ್ಣು ಮಕ್ಕಳನ್ನು ಗೌರವಿಸಬೇಕು ಎಂಬ ಸಂದೇಶವನ್ನಿಟ್ಟುಕೊಂಡು ಬಂದಿದ್ದ ಚಿತ್ರ ವಿಶೇಷವಾಗಿ ಹೆಣ್ಣು ಮಕ್ಕಳ ಮನ ಗೆದ್ದಿದೆ. ಅಷ್ಟೇ ಅಲ್ಲ, ಶಿವರಾಜ್ ಕುಮಾರ್ ಸ್ಟಾಲ್ ಅಂಡ್ ಪೇಪರ್ ಲುಕ್​ಗೆ ಸಿನಿಮಾ ಪ್ರೇಕ್ಷಕರು ಫಿದಾ ಆಗಿದ್ದರು. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ವೇದ ಇದೀಗ ಯಶಸ್ವಿ 50 ದಿನ ಪೂರೈಸಿದೆ. ಈ ಸಿನಿಮಾ ಮೂಲಕ‌ ಗೀತಾ ಶಿವರಾಜ್ ನಿರ್ಮಾಪಕಿಯಾಗಿ ಸಕ್ಸಸ್ ಕಂಡಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ 125ನೇ ಚಿತ್ರ ಇದಾಗಿದ್ದು, ಅಪ್ಪ-ಮಗಳ ಬಾಂಧವ್ಯದ ಕಥೆ ಒಳಗೊಂಡಿದೆ. ಅದಿತಿ ಸಾಗರ್, ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ಉಮಾಶ್ರೀ ಹೀಗೆ ಮಹಿಳಾ ಪಾತ್ರಧಾರಿಗಳೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ನಿರ್ದೇಶಕ ಹರ್ಷ ಜೊತೆ ಇದು ಶಿವಣ್ಣನ 4ನೇ ಸಿನಿಮಾ. ಮೊದಲಿನ ಚಿತ್ರಗಳಿಗಿಂತ ಹೆಚ್ಚು ವೈಬ್ರೇಟ್ ಆಗಿದ್ದ ವೇದ, 50 ದಿನ ಪೂರೈಸಿದ ಸಂಭ್ರಮವನ್ನು ಗೀತಾ ಶಿವರಾಜ್ ಕುಮಾರ್ ಹಾಗೂ ಶಿವಣ್ಣ ಚಿತ್ರತಂಡದವರಿಗೆ ಬೆಳ್ಳಿ ಪದಕ ನೀಡುವ ಮೂಲಕ ಸಂಭ್ರಮಿಸಿದರು.

ಚಿತ್ರ ತಂಡದ ಕಲಾವಿದರಿಗೆ ಬೆಳ್ಳಿ ಪದಕ ಉಡುಗೊರೆ

ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಬಂದು 37 ವರ್ಷ ಪೂರೈಸಿರೋ ಹಿನ್ನೆಲೆಯಲ್ಲಿ ನಾಗವಾರದ ಶಿವರಾಜ್ ಕುಮಾರ್ ನಿವಾಸದಲ್ಲಿ ಸಕ್ಸಸ್ ಸೆಲೆಬ್ರೇಷನ್ ಕಾರ್ಯಕ್ರಮ ನಡೆಸಲಾಗಿದೆ. ಶಿವಣ್ಣ ಆ್ಯಂಡ್ ಟೀಂ ಎರಡೂ ಕಾರ್ಯಕ್ರಮಗಳನ್ನು ಒಟ್ಟಿಗೆ ಆಚರಿಸಿದೆ. ವೇದ ನಿಮ್ಮೆಲ್ಲರ ಆಶೀರ್ವಾದದಿಂದ 50 ದಿನ ಪೂರೈಸಿದೆ. ಸಿನಿಮಾ ಈಗ್ಲೂ ಚೆನ್ನಾಗಿ ಪ್ರದರ್ಶನ ಆಗ್ತಿದೆ. ಹರ್ಷ ಹಾಗು ಟೀಂ ತುಂಬಾ ಉತ್ತಮವಾಗಿ ಕೆಲಸ ಮಾಡಿ ಸಿನಿಮಾ ಗೆಲ್ಲಿಸಿದ್ದಾರೆ ಎಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದರು.

ನಾನು ಹೋದಲ್ಲೆಲ್ಲ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ನನ್ನ ತಂದೆ ತಾಯಿಗೆ, ನಮ್ಮ ಸಿನಿಮಾ ತಂಡಕ್ಕೆ ನನ್ನ ಧನ್ಯವಾದ. ಪುಷ್ಪ ಕ್ಯಾರೆಕ್ಟರ್ ತುಂಬಾ ಇಷ್ಟ ಆಯ್ತು. ನನಗೆ ಆ ಪಾತ್ರ ಮಾಡ್ತೀನಾ ಅನ್ನೋ ಡೌಟ್ ಇತ್ತು. ಗೀತಾ ಶಿವರಾಜ್ ಕುಮಾರ್ ಸ್ವೀಟ್ ಆ್ಯಂಡ್ ಲವ್ಲಿ ಹಾರ್ಟ್ ಇರೋರು. ಶಿವಣ್ಣ ಎನರ್ಜಿಟಿಕ್ ಅಂತ ನಮ್ಗೆಲ್ಲಾ ಗೊತ್ತು. ಆದ್ರೆ ಗೀತಾ ಶಿವರಾಜ್ ಕುಮಾರ್ ಶಿವಣ್ಣನಿಗಿಂತ ಎನರ್ಜೆಟಿಕ್ ಎಂದರು ನಾಯಕಿ ಗಾನವಿ ಲಕ್ಷ್ಮಣ್.

ಚಿತ್ರ ತಂಡದ ಕಲಾವಿದರಿಗೆ ಬೆಳ್ಳಿ ಪದಕ ಉಡುಗೊರೆ

ನನಗೂ ಇಬ್ಬರು ಹೆಣ್ಣು ಮಕ್ಖಳಿದ್ದಾರೆ ಎನ್ನುತ್ತಲೇ ಮಾತನಾಡಿದ ಶಿವಣ್ಣ, ಈ 37 ವರ್ಷದ ಜರ್ನಿಯಲ್ಲಿ ನನಗೆ ಹಲವಾರು ಜನ ನೆರವಿಗೆ ನಿಂತಿದ್ದಾರೆ. ನನ್ನ ಮೊದಲ ಚಿತ್ರಕ್ಕೆ ಅಮ್ಮ ನಿರ್ಮಾಪಕಿಯಾದರೆ, 125ನೇ ಚಿತ್ರಕ್ಕೆ ಪತ್ನಿ ನಿರ್ಮಾಪಕಿ ಅಂತಾ ಹೇಳುವ ಮೂಲಕ ತಮ್ಮ‌ ಜರ್ನಿಗೆ ಕಾರಣವಾದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ತಿಳಿಸಿದರು.

ಇದನ್ನೂ ಓದಿ:ತೆಲುಗಿನ 'ವೇದ' ರಿಲೀಸ್: ಶಿವಣ್ಣನ ಮುಂದಿನ ಸಿನಿಮಾ ಯಾವುದು? ಭಕ್ತಿ ಪ್ರಧಾನ ಚಿತ್ರದತ್ತ ಹ್ಯಾಟ್ರಿಕ್‌ ಹೀರೋ ಚಿತ್ತ

ABOUT THE AUTHOR

...view details