ಕರ್ನಾಟಕ

karnataka

'ವಿಶ್ವದಲ್ಲಿ ಎಲ್ಲವೂ ಸರಿಯಾಗಿಲ್ಲ, ಒಗ್ಗಟ್ಟಿನ ಅವಶ್ಯಕತೆಯಿದೆ': ಪ್ರಿಯಾಂಕಾ ಚೋಪ್ರಾ

By

Published : Sep 20, 2022, 2:22 PM IST

ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2022ರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಭಾಗಿಯಾಗಿ ಜಾಗತಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ.

Actress Priyanka Chopra
ನಟಿ ಪ್ರಿಯಾಂಕಾ ಚೋಪ್ರಾ

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2022ರಲ್ಲಿ UNICEF Goodwill ರಾಯಭಾರಿ, ನಟಿ ಪ್ರಿಯಾಂಕಾ ಚೋಪ್ರಾ, ಜಾಗತಿಕ ಒಗ್ಗಟ್ಟು, ಸುಸ್ಥಿರ ಅಭಿವೃದ್ಧಿ, ಕೋವಿಡ್, ಬಡತನ, ಹವಾಮಾನ ಬಿಕ್ಕಟ್ಟಿನ ಕುರಿತು ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸಭೆಯಲ್ಲಿ 'ವಿಶ್ವದಲ್ಲಿ ಎಲ್ಲವೂ ಸರಿಯಾಗಿಲ್ಲ' ಎಂದು ಕೂಡ ಹೇಳಿದ್ದಾರೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸಲು ಕೇವಲ ಎಂಟು ವರ್ಷಗಳು ಉಳಿದಿವೆ. ಸುರಕ್ಷಿತ ಮತ್ತು ಆರೋಗ್ಯಕರ ಜಗತ್ತು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು, ಗುರಿ ಸಾಧನೆಗೆ ಜಾಗತಿಕ ಒಗ್ಗಟ್ಟು ಅಗತ್ಯ ಎಂದಿದ್ದಾರೆ.

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾದ ನಟಿ ಪ್ರಿಯಾಂಕಾ ಚೋಪ್ರಾ

"ನಾವಿಂದು ನಮ್ಮ ಜಗತ್ತಿನ ನಿರ್ಣಾಯಕ ಹಂತದಲ್ಲಿದ್ದೇವೆ. ಜಾಗತಿಕ ಒಗ್ಗಟ್ಟು ಎಂದಿಗಿಂತಲೂ ಹೆಚ್ಚು ಮುಖ್ಯವಾದ ಸಮಯವಿದು. ಪ್ರತೀ ದೇಶಗಳು ಸಾಂಕ್ರಾಮಿಕ ಕೋವಿಡ್, ಹವಾಮಾನ ಬಿಕ್ಕಟ್ಟಿನಂತಹ ಸಮಸ್ಯೆಗಳನ್ನು ಎದುರಿಸಿವೆ. ಸಂಘರ್ಷ, ಕ್ರೋಧ, ಬಡತನ, ಸ್ಥಳಾಂತರ, ಹಸಿವು ಮತ್ತು ಅಸಮಾನತೆಗಳು ಪ್ರಪಂಚದ ಅಡಿಪಾಯವನ್ನು ನಾಶಪಡಿಸುತ್ತವೆ ಎಂದು ಪ್ರಿಯಾಂಕಾ ಸೋಮವಾರ ಯುಟ್ಯೂಬ್ ಮೂಲಕ ಯುಎನ್ ಹಂಚಿಕೊಂಡ ಭಾಷಣದಲ್ಲಿ ಹೇಳಿದರು.

"ನಮ್ಮ ಪ್ರಪಂಚದಲ್ಲಿ ಎಲ್ಲವೂ ಸರಿಯಾಗಿಲ್ಲ" ಎಂದು ಕೂಡ ಹೇಳಿದರು. "ಈ ಬಿಕ್ಕಟ್ಟುಗಳು ಆಕಸ್ಮಿಕವಾಗಿ ಸಂಭವಿಸಿಲ್ಲ. ಆದರೆ ಅವುಗಳನ್ನು ಸೂಕ್ತ ಯೋಜನೆಯಿಂದ ಸರಿಪಡಿಸಬಹುದು'' ಎಂದು ಹೇಳಿದರು.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು 2015ರಲ್ಲಿ ಮಾಡಲಾಗಿದೆ. ನಾವು ವಾಸಿಸುವ ಜಗತ್ತನ್ನು ಬದಲಾಯಿಸಲು ನಮಗೆ ಅಸಾಮಾನ್ಯ ಅವಕಾಶವಿದೆ. ಈ ಗುರಿ ಸಾಧಿಸುವ ಗಡುವು ಶೀಘ್ರವಾಗಿ ಸಮೀಪಿಸುತ್ತಿದೆ. ಪ್ರಪಂಚದ ವರ್ತಮಾನ ಮತ್ತು ಭವಿಷ್ಯವು "ನಮ್ಮ ಕೈಯಲ್ಲಿದೆ" ಎಂದು ಹೇಳಿದರು.

ಇದನ್ನೂ ಓದಿ:ಕಾರ್ತಿಕ್ ಆರ್ಯನ್: ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿ ಗಮನ ಸೆಳೆದ ಸೆಲೆಬ್ರಿಟಿ

ನಾವು ನಮ್ಮ ಜನರಿಗೆ ಋಣಿಯಾಗಿದ್ದೇವೆ, ನಮ್ಮ ಗ್ರಹಕ್ಕೆ ಋಣಿಯಾಗಿದ್ದೇವೆ. ನಾವೆಲ್ಲರೂ ಜೀವಿಸಲು ನ್ಯಾಯಯುತ, ಸುರಕ್ಷಿತ ಮತ್ತು ಆರೋಗ್ಯಕರ ಜಗತ್ತಿಗೆ ಅರ್ಹರಾಗಿದ್ದೇವೆ. ಆದರೆ ಸಮಯ ಮೀರುತ್ತಿದೆ. ಈ ಗುರಿಗಳನ್ನು ಸಾಧಿಸಲು ನಾವು 2030ರ ಗಡುವಿನ ಅರ್ಧದಾರಿಯಲ್ಲಿ ಇದ್ದೇವೆ. ಆ ಗುರಿಗಳನ್ನು ಸಾಧಿಸಲು ಒಗ್ಗಟ್ಟಾಗೋಣ ಎಂದರು.

ABOUT THE AUTHOR

...view details