ಕರ್ನಾಟಕ

karnataka

ಅನಂತ್​ ನಾಗ್​,  ದಿಗಂತ್​ ನಟನೆಯ ‘‘ತಿಮ್ಮಯ್ಯ ಅಂಡ್​ ತಿಮ್ಮಯ್ಯ’’ ನಾಳೆಯಿಂದ ರಾಜ್ಯಾದ್ಯಂತ ತೆರೆಗೆ

By

Published : Dec 1, 2022, 9:35 PM IST

ಗಾಳಿಪಟ, ಪಂಚರಂಗಿ, ಮುಂಗಾರು ಮಳೆಯಂತಹ ಹಿಟ್​ ಚಿತ್ರಗಳಲ್ಲಿ ನಟಿಸಿದ ಅನಂತ್​ನಾಗ್​, ದಿಗಂತ್​ ಜೋಡಿ ಈಗ ಮತ್ತೊಮ್ಮೆ ತಿಮ್ಮಯ್ಯ ಅಂಡ್​ ತಿಮ್ಮಯ್ಯ ಎಂಬ ಚಿತ್ರದ ಮೂಲಕ ಜನರನ್ನು ಮನರಂಜಿಸಲು ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.

thimmaiah and thimmaiah
ತಿಮ್ಮಯ್ಯ ಅಂಡ್​ ತಿಮ್ಮಯ್ಯ’

ಫ್ರೆಶ್ ಕಂಟೆಂಟ್, ಅದ್ದೂರಿ ಮೇಕಿಂಗ್ ನಿಂದಲೇ ವಿಶ್ವಾದ್ಯಂತ ಕನ್ನಡ ಸಿನಿಮಾಗಳು ಸೌಂಡ್ ಮಾಡುತ್ತಿವೆ. ಈಗ ಇಂತಹದ್ದೇ ಕಂಟೆಂಟ್ ಇಟ್ಟುಕೊಂಡು ಕನ್ನಡ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿರೋ ಚಿತ್ರ ತಿಮ್ಮಯ್ಯ ಅಂಡ್ ತಿಮ್ಮಯ್ಯ.

ಕನ್ನಡದ ಎವರ್ ಗ್ರೀನ್ ಹೀರೋ ಅನಂತ್ ನಾಗ್ ಹಾಗೂ ದಿಗಂತ್, ತಾತ - ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಟ್ರೈಲರ್ ಹಾಗೂ ಹಾಡುಗಳಿಂದಲೇ ಸ್ಯಾಂಡಲ್​ವುಡ್ ನಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿರೋ ತಿಮ್ಮಯ್ಯ ಅಂಡ್ ತಿಮ್ಮಯ್ಯ ಚಿತ್ರದ ಬಗ್ಗೆ ದೂದ್ ಪೇಡಾ ದಿಗಂತ್ ಈಟಿವಿ ಭಾರತ ಜೊತೆ ಈ ಚಿತ್ರದ ಬಗ್ಗೆ ಸಾಕಷ್ಟು ಇಂಟ್ರಸ್ಟ್ರಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ನಟ ದಿಗಂತ್​ ಮತ್ತು ಅನಂತ್​ ನಾಗ್​ ನಟನೆಯ ‘‘ತಿಮ್ಮಯ್ಯ ಅಂಡ್​ ತಿಮ್ಮಯ್ಯ’’

ಎಲ್ಲ ವರ್ಗದವರಿಗೂ ಇಷ್ಟವಾಗುವ ಚಿತ್ರ: ಚಿತ್ರದ ಪೋಸ್ಟರ್ ಹೇಳುವ ಹಾಗೆ ತಾತ ಹಾಗೂ ಮೊಮ್ಮಗನ ಕಥೆ. ಒಳ್ಳೆ ಕಂಟೆಂಟ್ ಇಟ್ಟುಕೊಂಡು ಬರ್ತಾ ಇರೋ ಚಿತ್ರ. ಈ ಚಿತ್ರದಲ್ಲಿ ಮತ್ತೆ ನಾನು ಐಂದ್ರಿತಾ ರೇ ಒಟ್ಟಿಗೆ ಕಾಣಿಸಿಕೊಂಡಿದ್ದೇವೆ. ನಿರ್ದೇಶಕ ಸಂಜಯ್ ಶರ್ಮಾ ಕಥೆ ಬರೆದು ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಶುಭ್ರಾ ಅಯ್ಯಪ್ಪ, ಪ್ರಕಾಶ್ ತುಂಬಿನಾಡ್, ವೀನಿತ್ ಎಂಬ ನಟ ಅಭಿನಯಿಸಿದ್ದಾರೆ. ಈ ಚಿತ್ರ ಎಲ್ಲರನ್ನು ಎಂಟರ್​ಟೈನ್ ಮಾಡುತ್ತೆ ಅಂತಾರೆ ದಿಗಂತ್.

ನಾನು ಅನಂತ್ ನಾಗ್ ಸಾರ್ ಜೊತೆ ಗಾಳಿಪಟ, ಪಂಚರಂಗಿ, ಮುಂಗಾರು ಮಳೆ ಚಿತ್ರದಲ್ಲಿ ಸಾಕಷ್ಟು ತರ್ಲೆ ಮಾಡಿದ್ವಿ, ಆದರೆ ತಿಮ್ಮಯ್ಯ ಅಂಡ್ ತಿಮ್ಮಯ್ಯ ಸಿನಿಮಾ ತುಂಬಾ ಮಾಜಾ ಕೊಡುತ್ತೆ, ನಗಿಸುತ್ತೆ ಬಳಿಕ ಅಳಿಸುತ್ತೆ ಅಂದರು.

ಅನಂತ್​ನಾಗ್​ ಅದ್ಬುತ ನಟ: ಇನ್ನು ಅನಂತ್ ನಾಗ್ ಸರ್ ಹಾಲಿವುಡ್​​ನಲ್ಲಿ ಇದ್ದಿದ್ದರೆ ಆಸ್ಕರ್ ಅವಾರ್ಡ್ ಗೆಲ್ಲುತ್ತಿದ್ದರು. ಆ ತರಹದ ನಟ ಅನಂತ್ ನಾಗ್ ಸಾರ್ ಅಭಿನಯ ಮಾಡಬೇಕಿಲ್ಲ, ಹಾಗೇ ಬಂದು ಎಕ್ಸ್​ಪ್ರೆಶನ್ ಕೊಟ್ರೆ ಅವರ ಮುಖದಲ್ಲಿ ಒಂದು ಸಾವಿರ ವಿಷಯಗಳು ಹೇಳುತ್ತೆ ಅಂತಹ ಅದ್ಭುತ ಕಲಾವಿದ ಅನಂತ್​ನಾಗ್ ಸರ್.

ಒಳ್ಳೆ ಸಿನಿಮಾ ಮಾಡಿರುವ ಹೆಮ್ಮೆಇದೆ: ಇನ್ನು ಡೈರೆಕ್ಟರ್ ಸಂಜಯ್ ಶರ್ಮಾ ಬಗ್ಗೆ ಒಂದು ಲೈನ್ ಸ್ಟೋರಿ ಹೇಳ್ತಾ ಇದ್ದಹಾಗೆ ಈ ಸಿನಿಮಾ ಮಾಡುತ್ತೇನೆ ಎಂದು ಒಪ್ಪಿಕೊಂಡೆ, ಜ್ಯೋಷ್ನಾ ಎಂಬ ಪಾತ್ರವನ್ನ ಐಂದ್ರಿತಾ ರೇ ಮಾಡಿದರೆ ಚೆನ್ನಾಗಿರುತ್ತೆ ಎಂದು ನಿರ್ದೇಶಕ ಸಂಜಯ್ ಹೇಳಿದರು. ಅದೇ ರೀತಿ ಈ ಸಿನಿಮಾ ಬಹಳ ಚೆನ್ನಾಗಿ ಮೂಡಿ ಬಂದಿದೆ. ನನಗೂ ಒಳ್ಳೆ ಸಿನಿಮಾ ಮಾಡಿರುವ ಹೆಮ್ಮೆ ಅನ್ನೋದು ದಿಗಂತ್ ಮಾತು.

ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದ್ದು, ಬಾಲಕೃಷ್ಣ ತೋಟ ಅವರ ಅದ್ಭುತ ಛಾಯಾಗ್ರಹಣವಿದೆ. ಗರುಡ ಮೋಷನ್ ಪಿಕ್ಚರ್ಸ್ ಪ್ರೈ ಲಿ ಲಾಂಛನದಲ್ಲಿ ರಾಜೇಶ್ ಶರ್ಮ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮೂಲತಃ ಕನ್ನಡದವರೇ ಆಗಿರುವ ನಿರ್ದೇಶಕ ಸಂಜಯ್ ಶರ್ಮಾ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್​ ಜನ್ಮದಿನ.. ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸ್ಮರಣೆ

ABOUT THE AUTHOR

...view details