ಕರ್ನಾಟಕ

karnataka

'ಕಾಂತಾರ' ಚಿತ್ರ ಕುರಿತು ಹೇಳಿಕೆ; ಬಾಲಿವುಡ್​ ನಿರ್ದೇಶಕರ ನಡುವೆ ಟ್ವೀಟ್​ ವಾರ್​​

By

Published : Dec 15, 2022, 11:03 AM IST

ಅನುರಾಗ್​ ಕಶ್ಯಪ್​ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ 'ದಿ ಕಾಶ್ಮೀರಿ ಫೈಲ್ಸ್'​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದು, ಇಬ್ಬರ ನಡುವೆ ಟ್ವೀಟ್​ ವಾರ್​ಗೆ ಕಾರಣವಾಗಿದೆ.

'ಕಾಂತಾರ' ಚಿತ್ರ ಕುರಿತು ಹೇಳಿಕೆ; ಬಾಲಿವುಡ್​ ನಿರ್ದೇಶಕರ ನಡುವೆ ಟ್ವೀಟ್​ ವಾರ್​​
statement-on-kantara-film-tweet-war-between-bollywood-directors-vivek-agnihotri-anurag-kashyap

ಮುಂಬೈ:ಬಾಲಿವುಡ್​ ಚಿತ್ರ ನಿರ್ದೇಶಕರಾದ ವಿವೇಕ್​ ಅಗ್ನಿಹೋತ್ರಿ ಮತ್ತು ಅನುರಾಗ್​ ಕಶ್ಯಪ್​ ನಡುವೆ ಟ್ವಿಟರ್​ನಲ್ಲಿ ಮಾತಿನ ಚಕಮಕಿ ನಡೆದಿದೆ. ಇತ್ತೀಚೆಗೆ ಅನುರಾಗ್​ ಕಶ್ಯಪ್​, "ಕಾಂತಾರ ಮತ್ತು ಪುಷ್ಪನಂತಹ ಸಿನಿಮಾಗಳು ಉದ್ಯಮವನ್ನು ನಾಶ ಮಾಡುತ್ತಿವೆ" ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ 'ದಿ ಕಾಶ್ಮೀರಿ ಫೈಲ್ಸ್'​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದು, ಇಬ್ಬರ ನಡುವೆ ಟ್ವೀಟ್​ ವಾರ್​ಗೆ ಕಾರಣವಾಗಿದೆ.

'ಬಾಲಿವುಡ್​ ಮಿಲಾರ್ಡ್​​ ಧೋರಣೆಗೆ ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಇದಕ್ಕೆ ನೀವು ಒಪ್ಪುತ್ತೀರಾ?' ಎಂದು ವಿವೇಕ್​ ಟ್ವೀಟ್​ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಚಿತ್ರ ನಿರ್ದೇಶಕ ಅನುರಾಗ್​ ಕಶ್ಯಪ್​, 'ಸರ್​​, ಇದು ನಿಮ್ಮ ತಪ್ಪಲ್ಲ. ನನ್ನ ಟ್ವೀಟ್​ಗಳ ಸಂಭಾಷಣೆಗಳಂತೆಯೇ ನಿಮ್ಮ ಚಲನಚಿತ್ರಗಳನ್ನು ಸಂಶೋಧಿಸಲಾಗಿದೆ. ನೀವು ಮತ್ತು ನಿಮ್ಮ ಮಾಧ್ಯಮ ಒಂದೇ ರೀತಿಯ ಸ್ಥಿತಿಯಲ್ಲಿದೆ. ಪರವಾಗಿಲ್ಲ, ಮುಂದಿನ ಬಾರಿ ಸ್ವಲ್ಪ ಗಂಭೀರವಾಗಿ ಸಂಶೋಧನೆ ಮಾಡಿ' ಎಂದಿದ್ದಾರೆ.

ಇದಕ್ಕೆ ಟ್ವೀಟ್​ ಮೂಲಕವೇ ತಿರುಗೇಟು ನೀಡಿರುವ ಅಗ್ನಿಹೋತ್ರಿ, 'ದಿ ಕಾಶ್ಮೀರ್​ ಫೈಲ್ಸ್‌ನ 4 ವರ್ಷಗಳ ಸಂಶೋಧನೆಯು ಸುಳ್ಳು ಎಂದು ಸಾಬೀತುಪಡಿಸಿ. ಗಿರಿಜಾ ಟಿಕೂ, ಬಿ.ಕೆ. ಗಂಜು, ವಾಯುಪಡೆಯ ಸಿಬ್ಬಂದಿ ಹತ್ಯೆ, ನದಿಮಾರ್ಗ ಎಲ್ಲವೂ ಸುಳ್ಳು. 700 ಪಂಡಿತರ ವಿಡಿಯೋಗಳು ಸುಳ್ಳು. ಹಿಂದೂಗಳು ಎಂದಿಗೂ ಸಾಯಲಿಲ್ಲ ಎಂಬುದನ್ನು ನೀವು ಸಾಬೀತು ಪಡಿಸಿ. ಆಗ ಈ ರೀತಿ ತಪ್ಪು ಮತ್ತೊಮ್ಮೆ ಆಗುವುದಿಲ್ಲ' ಎಂದಿದ್ದಾರೆ.

ಈ ಟ್ವೀಟ್​ ವಾರ ಎರಡು ಬಳಕೆದಾರರನ್ನು ಎರಡು ಗುಂಪುಗಳಾಗಿ ವಿಂಗಡಿಸಿದ್ದು, ಕೆಲವರು ಅಗ್ನಿಹೋತ್ರಿಯನ್ನು ಬೆಂಬಲಿಸಿದರೆ, ಮತ್ತೆ ಕೆಲವರು ಕಶ್ಯಪ್​ ಅವರ ಪರ ನಿಂತಿದ್ದಾರೆ.

ಸದ್ಯ ವಿವೇಕ್​ 'ದಿ ವಾಕ್ಸಿನ್​ ವಾರ್'​ ಎಂಬ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ 2023ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದೆ.

ಇನ್ನು, ಅನುರಾಗ್​ ಕಶ್ಯಪ್​ ಅವರು ನಿರ್ದೇಶಿಸಿದ್ದ 'ದುಬಾರಾ' ಚಿತ್ರ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್​ನಲ್ಲಿ ಹೆಚ್ಚಾಗಿ ಸದ್ದು ಮಾಡಲಿಲ್ಲ.

ಇದನ್ನೂ ಓದಿ: ''ಬೇಶರಂ ರಂಗ್'' ವಿವಾದ: ಪಠಾಣ್‌ ಬಿಡುಗಡೆ ಆಗೋದು ಅನುಮಾನ​ ಎಂದ ಸಚಿವ

ABOUT THE AUTHOR

...view details