ಕರ್ನಾಟಕ

karnataka

'ಪಠಾಣ್'​ ಗೆಲ್ಲಿಸಿದ್ದಕ್ಕೆ ಸರ್ವರಿಗೂ ಧನ್ಯವಾದಗಳು: ಶಾರುಖ್​ ಖಾನ್​​

By

Published : Mar 9, 2023, 12:32 PM IST

ಪಠಾಣ್ ಸಿನಿಮಾ ಗೆಲ್ಲಿಸಿಕೊಟ್ಟ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ ಶಾರುಖ್​ ಖಾನ್​.

Shah Rukh Khan
ನಟ ಶಾರುಖ್​ ಖಾನ್​​

ಬಹುತೇಕರ ಕೆಂಗಣ್ಣಿಗೆ ಗುರಿಯಾಗಿ ತೆರೆಕಂಡ ಬಾಲಿವುಡ್​ ಸಿನಿಮಾ 'ಪಠಾಣ್'​ ಯಶಸ್ಸು ಅಭೂತಪೂರ್ವ. ಹಲವರ ಆಕ್ರೋಶ ಎದರಿಸಿದ ಈ ಸಿನಿಮಾ ಅಭಿಮಾನಿಗಳ ಪ್ರೀತಿಯಿಂದ ಗೆದ್ದು ಬೀಗಿದೆ ಅಂದ್ರೆ ತಪ್ಪಲ್ಲ. ಈ ಅದ್ಭುತ ಯಶಸ್ಸಿಗೆ ಚಿತ್ರದ ನಾಯಕ ಅಭಿಮಾನಿಗಳಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಬಾಲಿವುಡ್ ಸೂಪರ್‌ ಸ್ಟಾರ್ ಶಾರುಖ್ ಖಾನ್ ಸದ್ಯ ತಮ್ಮ ಆ್ಯಕ್ಷನ್ ಥ್ರಿಲ್ಲರ್ ಪಠಾಣ್​ನ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಚಿತ್ರವು ಇತ್ತೀಚೆಗಷ್ಟೇ ಬಾಹುಬಲಿ 2 ದಾಖಲೆ ಮೀರಿಸಿದೆ. ಈವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್​ ಮೂಲಕ ಚಿತ್ರದ ನಾಯಕ ನಟ ಚಲನಚಿತ್ರಕ್ಕೆ ಬೆಂಬಲ ಸೂಚಿಸಿದ ಸರ್ವರಿಗೂ ಥ್ಯಾಂಕ್ಸ್‌ ಹೇಳಿದ್ದಾರೆ.

"ಇದು ವ್ಯವಹಾರವಲ್ಲ, ಕಟ್ಟುನಿಟ್ಟಾದ ವೈಯಕ್ತಿಕ ವಿಷಯ" ಎಂದು ಟ್ವೀಟ್ ಮಾಡಿರುವ ಕಿಂಗ್​ ಖಾನ್​​, ಜನರನ್ನು ನಗಿಸುವುದು ಮತ್ತು ಮನರಂಜಿಸುವುದು ತಮ್ಮ ಕೆಲಸ ಎಂದು ಹೇಳಿದ್ದಾರೆ. ವೈಯಕ್ತಿಕವಾಗಿ ತೆಗೆದುಕೊಳ್ಳದಿದ್ದರೆ, ಅದು ಕೆಲಸ ಮಾಡುವುದಿಲ್ಲ ಎಂದೂ ಸಹ ತಿಳಿಸಿದ್ದಾರೆ. ಪಠಾಣ್‌ಗೆ ಬೆಂಬಲ ನೀಡಿದ ಎಲ್ಲರಿಗೂ ಮತ್ತು ಶ್ರಮ-ನಂಬಿಕೆ ಇನ್ನೂ ಜೀವಂತವಾಗಿದೆ ಎಂದು ಸಾಬೀತುಪಡಿಸಿರುವ ಚಿತ್ರತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಕಿಂಗ್ ಖಾನ್ ಟ್ವೀಟ್ ಮಾಡಿದ ಕೂಡಲೇ, ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಪ್ರೀತಿಯ ಮಳೆಗೈದಿದ್ದಾರೆ.

ಪಠಾನ್ ಜನವರಿ 25ರಂದು ಬಿಡುಗಡೆ ಆಗಿತ್ತು. ಜಾನ್ ಅಬ್ರಹಾಂ, ದೀಪಿಕಾ ಪಡುಕೋಣೆ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಸೇರಿದಂತೆ ಇತರರು ನಟಿಸಿದ್ದಾರೆ. ಶ್ರೀಧರ್ ರಾಘವನ್ ಚಿತ್ರಕಥೆ ಬರೆದಿರುವ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್​​ ನಿರ್ಮಿಸಿದೆ.

ಡಿಸೆಂಬರ್​ 2ನೇ ವಾರದಲ್ಲಿ ಬೇಶರಂ ರಂಗ್​ ಹಾಡು ಬಿಡುಗಡೆ ಆಗಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ನಟಿ ದೀಪಿಕಾ ಪಡುಕೋಣೆ ಅವರ ಕೇಸರಿ ಬಿಕಿನಿ ವಸ್ತ್ರ ವಿವಾದಕ್ಕೆ ಒಳಗಾಗಿತ್ತು. ಪರ-ವಿರೋಧ ಚರ್ಚೆಗೆ ವೇದಿಕೆ ಸೃಷ್ಟಿ ಮಾಡಿಕೊಟ್ಟಿತ್ತು. ಸಿನಿಮಾ ಮೇಲೆ ಬಹಿಷ್ಕಾರದ ಎಚ್ಚರಿಕೆ ಇತ್ತು. ಆದರೂ ಚಿತ್ರತಂಡ ಮೌನವಾಗಿ, ಆತ್ಮವಿಶ್ವಾಸದಲ್ಲಿ ಮುನ್ನುಗ್ಗಿತು. ಸಿನಿಮಾ ಬಿಡುಗಡೆ ಆಗಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಒಂದೇ ತಿಂಗಳೊಳಗೆ ಒಂದು ಸಾವಿರ ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಈ ಹಿನ್ನೆಲೆಯಲ್ಲಿ ನಟ ಶಾರುಖ್​ ಖಾನ್ ಇದೀಗ​ ಅಭಿಮಾನಿಗಳು, ಹಿತೈಷಿಗಳು, ಫಾಲೋವರ್ಸ್​ಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ:'ಚಳಿ, ಕೇಕ್, ಮುದ್ದಾಟ..': ಸ್ಯಾಂಡಲ್​ವುಡ್ ಸಿಂಡ್ರೆಲಾ ಬರ್ತ್​ಡೇ ಸೆಲೆಬ್ರೇಷನ್ ಫೋಟೋ

ಶಾರುಖ್​ ಅಭಿನಯದ ಜವಾನ್​ ಸಿನಿಮಾ ಈ ಸಾಲಿನಲ್ಲೇ ಬಿಡುಗಡೆ ಆಗಲಿದ್ದು, ಈ ಚಿತ್ರದ ಮೇಲೂ ಭಾರಿ ನಿರೀಕ್ಷೆ ಇದೆ. ಜವಾನ್ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಇತ್ತೀಚೆಗಷ್ಟೇ ಮುಂಬೈನಲ್ಲಿ 9 ದಿನಗಳ ಶೂಟಿಂಗ್​ ಪೂರ್ಣಗೊಳಿಸಿದೆ. ಮುಂಬೈನಲ್ಲಿ ನಡೆದ ಚಿತ್ರೀಕರಣದಲ್ಲಿ, ಶಾರುಖ್​​ ಖಾನ್ ಮತ್ತು ನಯನತಾರಾ ಅವರನ್ನೊಳಗೊಂಡ ಕೆಲ ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು, ಮುಂದಿನ ಹಂತದ ಶೂಟಿಂಗ್​ ರಾಜಸ್ಥಾನದಲ್ಲಿ ನಡೆಯಲಿದೆ.

ಇದನ್ನೂ ಓದಿ:ಕೆಜಿಎಫ್ ಚಾಪ್ಟರ್ 2 ದಾಖಲೆ ಸರಿಗಟ್ಟಲಿದೆ ಕಬ್ಜ ಸಿನಿಮಾ ಬಿಡುಗಡೆ.. 4000 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಸಂಭವ

ABOUT THE AUTHOR

...view details