ಕರ್ನಾಟಕ

karnataka

ಇದು ಶಾರುಖ್ ಖಾನ್ TIME! ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಕಿಂಗ್‌ ಖಾನ್‌

By

Published : Apr 7, 2023, 3:31 PM IST

ನಟ ಶಾರುಖ್ ಖಾನ್ ಅವರು ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.

Shah Rukh Khan Wins 2023 TIME100 Reader Poll
ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಸ್​ಆರ್​ಕೆ

ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ 2023 ಬಹಳ ವಿಶೇಷ ವರ್ಷವಾಗುತ್ತಿದೆ. ನಾಲ್ಕು ವರ್ಷಗಳ ವಿರಾಮದ​ ನಂತರ ಪಠಾಣ್​ ಚಿತ್ರದೊಂದಿಗೆ ಸಿನಿಮಾ ಲೋಕಕ್ಕೆ ಕಮ್​ ಬ್ಯಾಕ್​ ಮಾಡಿದ ಇವರು​ ಗೆಲುವಿನ ನಗೆ ಬೀರಿದ್ದರು. ಹಲವರ ಕೆಂಗಣ್ಣಿಗೂ ಗುರಿಯಾಗಿ ತೆರೆಕಂಡ ಚಿತ್ರ ವಿಶ್ವಾದ್ಯಂತ 1,050 ಕೋಟಿ ರೂ. ಮೀರಿ ಕಲೆಕ್ಷನ್ ಮಾಡಿತ್ತು.

ಇದೀಗ ಟೈಮ್(TIME)​ ನಿಯತಕಾಲಿಕೆ 2023ರ ಟೈಮ್ 100 ರೀಡರ್ ಮತದಾನದಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಇದು ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಶ್ರೇಯಾಂಕ ಹೊಂದಿದೆ. ಆಸ್ಕರ್ ವಿಜೇತ ನಟ ಮಿಚೆಲ್ ಯೋಹ್, ಅಥ್ಲೀಟ್ ಸೆರೆನಾ ವಿಲಿಯಮ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಬ್ರೆಜಿಲಿಯನ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಮತ್ತು ಟ್ವಿಟರ್ ಸಿಇಒ ಎಲೋನ್ ಮಸ್ಕ್ ಅವರಂತಹ ಗಣ್ಯ ವ್ಯಕ್ತಿಗಳನ್ನು ಈ ಸಮೀಕ್ಷೆ ಒಳಗೊಂಡಿದೆ. ಭಾರತದ ಚಿತ್ರೋದ್ಯಮದಲ್ಲಿ ಖ್ಯಾತಿ ಗಳಿಸಿರುವ ಶಾರುಖ್ ಖಾನ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಒಂದು ಪ್ರಕಟಣೆಯ ಪ್ರಕಾರ, ಮತದಾನದಲ್ಲಿ 1.2 ಮಿಲಿಯನ್‌ಗಿಂತಲೂ ಹೆಚ್ಚು ಮತಗಳು ಚಲಾವಣೆಯಾಗಿವೆ. ಈ ಪೈಕಿ ಶಾರುಖ್ ಶೇ. 4ಕ್ಕೂ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. ತಮ್ಮ ದೇಶದಲ್ಲಿ ಇಸ್ಲಾಮಿಕ್ ಆಡಳಿತದ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಶೇ.3ರಷ್ಟು ಮತಗಳೊಂದಿಗೆ ಇರಾನ್ ಮಹಿಳೆಯರು 2ನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನ ಆರೋಗ್ಯ ಕಾರ್ಯಕರ್ತರಿಗೆ ದಕ್ಕಿದೆ. ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ 4 ನೇ ಸ್ಥಾನ ಪಡೆದಿದ್ದಾರೆ. 5ನೇ ಸ್ಥಾನದಲ್ಲಿ ಫುಟ್‌ಬಾಲ್​ ಆಟಗಾರ ಲಿಯೋನೆಲ್ ಮೆಸ್ಸಿ ಇದ್ದಾರೆ.

ಶಾರುಖ್ ಸಿನಿಮಾ ಸಾಧನೆ: ಶಾರುಖ್​ ಖಾನ್​ ಆ್ಯಕ್ಷನ್​ ಅವತಾರದ ಪಠಾಣ್‌ ಸಿನಿಮಾ ವಿಶ್ವಾದ್ಯಂತ ಯಶಸ್ಸು ಕಂಡಿದೆ. ಜನವರಿಯಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ನಟಿಸಿದ್ದರು. ಸಲ್ಮಾನ್‌ ಖಾನ್‌ ಅತಿಥಿ ಪಾತ್ರ ನಿರ್ವಹಿಸಿದ್ದರು. ಸಲ್ಮಾನ್ ಅವರ ಟೈಗರ್ 3ನಲ್ಲಿ ಶಾರುಖ್​ ಖಾನ್​​ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಡಂಕಿ ಮತ್ತು ಜವಾನ್​ ಸಿನಿಮಾ ಮೂಲಕ ಕಿಂಗ್​ ಖಾನ್​ ಅಬ್ಬರಿಸಲಿದ್ದು, ಸಿನಿಮಾ ಶೂಟಿಂಗ್​ ಮುಕ್ತಾಯ ಹಂತದಲ್ಲಿದೆ.

ಇದನ್ನೂ ಓದಿ:ವಿವಾಹಿತ ನಟಿಗೆ ಟ್ವಿಟರ್​ನಲ್ಲಿ ಪ್ರಪೋಸ್ ಮಾಡಿದ 60ರ ವ್ಯಕ್ತಿ: ಉತ್ತರ ಹೀಗಿತ್ತು ನೋಡಿ!

ನಿನ್ನೆ (ಗುರುವಾರ) ರಾತ್ರಿ ಈಡನ್ ಗಾರ್ಡನ್‌ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಗೆಲುವು ಕಂಡಿದೆ. ಆಟ ಮುಕ್ತಾಯಗೊಳ್ಳುತ್ತಿದ್ದಂತೆ, ಶಾರುಖ್​ ಖಾನ್​​ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಬಳಿ ತೆರಳಿ ಅವರನ್ನು ಅಪ್ಪಿಕೊಂಡರು. ಇಬ್ಬರೂ ಆತ್ಮೀಯ ಕ್ಷಣಗಳನ್ನು ಸಂಭ್ರಮಿಸಿದರು. ವಿರಾಟ್ ಅವರಿಗೆ ಶಾರುಖ್​ ಪಠಾಣ್​​ ನೃತ್ಯದ ಸ್ಟೆಪ್​ ಹೇಳಿಕೊಟ್ಟ ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ಆರ್​ಸಿಬಿ - ಕೆಕೆಆರ್​ ಪಂದ್ಯ: ವಿರಾಟ್​ಗೆ Jhoome Jo Pathaan ಸಾಂಗ್​ನ ಸ್ಟೆಪ್ಸ್​ ಕಲಿಸಿದ ಶಾರುಖ್​

ABOUT THE AUTHOR

...view details