ಕರ್ನಾಟಕ

karnataka

ಮಂತ್ರಾಲಯ ರಾಯರ ಸನ್ನಿಧಿಯಲ್ಲಿ ವೇದ ಸಿನಿಮಾ ಯಶಸ್ಸಿಗೆ ಪೂಜೆ

By

Published : Nov 3, 2022, 8:01 PM IST

ದೊಡ್ಮನೆಯ ಆರಾಧ್ಯ ದೇವರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿಂದು ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿಯ ಸದಸ್ಯರು ವೇದ ಸಿನಿಮಾ ಪೋಸ್ಟರ್​ಗೆ ಪೂಜೆ ಸಲ್ಲಿಸಿದ್ದಾರೆ.

special pooja in mantralaya for success of veda movie
ಮಂತ್ರಾಲಯ ರಾಯರ ಸನ್ನಿಧಿಯಲ್ಲಿ ವೇದ ಸಿನಿಮಾ ಯಶಸ್ಸಿಗೆ ಪೂಜೆ

ಭಜರಂಗಿ 2 ಸಿನಿಮಾ ಬಳಿಕ ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್ ಅಭಿನಯದ ಹೈ ವೋಲ್ಟೇಜ್ ಚಿತ್ರ ವೇದ. ಪೋಸ್ಟರ್​ಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ವೇದ ಚಿತ್ರ ಈ ವರ್ಷದ ಅಂತ್ಯಕ್ಕೆ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದೆ. ಇದು ಶಿವ ರಾಜ್​ಕುಮಾರ್ ಮತ್ತು ನಿರ್ದೇಶಕ ಹರ್ಷ ಜೋಡಿಯ 4ನೇ ಚಿತ್ರವಾಗಿದ್ದು, ಡಿಸೆಂಬರ್​ 23ಕ್ಕೆ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿದೆ.

ರಾಯರ ಸನ್ನಿಧಿಯಲ್ಲಿ ವೇದ ಸಿನಿಮಾ ಯಶಸ್ಸಿಗೆ ಪೂಜೆ

ಈ ಚಿತ್ರ ಬಿಡುಗಡೆಗೆ ಒಂದು ತಿಂಗಳು ಬಾಕಿ ಇದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟಿಸಿದೆ. ದೊಡ್ಮನೆಯ ಆರಾಧ್ಯ ದೇವರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿಂದು ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಸೇನಾ ಸಮಿತಿಯ ಸದಸ್ಯರು ವೇದ ಸಿನಿಮಾ ಪೋಸ್ಟರ್​ಗೆ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಸಿನಿಮಾ ಯಶಸ್ಸಿಗೆ ರಾಯರ ಆರ್ಶೀವಾದ ಪಡೆಯಲಾಗಿದೆ‌.

ಇನ್ನು ಈ ಚಿತ್ರದಲ್ಲಿ ಶಿವ ರಾಜ್​ಕುಮಾರ್ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. 1960ರ ದಶಕದಲ್ಲಿ ನಡೆಯುವ ಕಥೆ ಇದು. ಶಿವ ರಾಜ್​ಕುಮಾರ್ ಜೊತೆಗೆ ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಅರುಣ್ ಸಾಗರ್ ಮಗಳು ಅದಿತಿ ಸಾಗರ್ ಹಾಗೂ ಅನುಪಮಾ ಕಾಣಿಸಿಕೊಂಡಿದ್ದಾರೆ. ಮೋಷನ್ ಪೋಸ್ಟರ್ ಅನ್ನು ಕಿಚ್ಚಿನ ನಡುವೆ ರೂಪಿಸಲಾಗಿದ್ದು, ಇದಾಗ್ಯೂ ಚಿತ್ರಕಥೆ ಹೇಗೆ ಸಾಗಲಿದೆ ಎಂಬುದರ ಬಗ್ಗೆ ನಿರ್ದೇಶಕರು ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮ್ರಾಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಯರ ಸನ್ನಿಧಿಯಲ್ಲಿ ವೇದ ಸಿನಿಮಾ ಯಶಸ್ಸಿಗೆ ಪೂಜೆ

ಇದನ್ನೂ ಓದಿ:ಶಿವಣ್ಣನ 125ನೇ ಸಿನಿಮಾ 'ವೇದ' ಬಿಡುಗಡೆ‌ಗೆ ಮುಹೂರ್ತ ಫಿಕ್ಸ್

ವೇದ ಚಿತ್ರವನ್ನು ಝೀ ಸ್ಟುಡಿಯೋಸ್​ ಜೊತೆಗೂಡಿ ಗೀತಾ ಸ್ಟುಡಿಯೋಸ್ ಮೂಲಕ ಗೀತಾ ಶಿವ ರಾಜ್​ಕುಮಾರ್ ನಿರ್ಮಿಸುತ್ತಿದ್ದು, ಈ ಸಿನಿಮಾ ಮೂಲಕ ಗೀತಾ ಶಿವ ರಾಜ್​ಕುಮಾರ್ ನಿರ್ಮಾಪಕಿಯಾಗಲಿದ್ದಾರೆ. ಸದ್ಯ ವೇದ ಪೋಸ್ಟರ್​ನಲ್ಲಿ ಡೋಂಟ್ ಫಿಯರ್, ಡೋಂಟ್ ಫರ್ಗೀವ್ ಎಂಬ ಟ್ಯಾಗ್ ಲೈನ್ ಇದೆ. ಈಗಾಗಲೇ ರಿವೀಲ್ ಆಗಿರುವ ಪೋಸ್ಟರ್ ಶಿವ ರಾಜ್​ಕುಮಾರ್ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿಸಿದೆ. ಪೋಸ್ಟರ್ ನಿಂದಲೇ ಕ್ರೇಜ್ ಹುಟ್ಟಿಸಿರೋ ವೇದಾ ಸಿನಿಮಾ ಕ್ರಿಸ್ಮಸ್ ಹಬ್ಬಕ್ಕೂ ಮುನ್ನ ಅಂದರೆ ಡಿಸೆಂಬರ್ 23ಕ್ಕೆ ಕನ್ನಡ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ABOUT THE AUTHOR

...view details