ಕರ್ನಾಟಕ

karnataka

ನೂರಾರು ಕೋಟಿ ಬಾಚಿದ 'ಪಠಾಣ್‌': ಅಭಿಮಾನಿಗಳಿಗೆ ಶಾರುಖ್‌​ ಖಾನ್​ ದರ್ಶನ, ಫೈಯಿಂಗ್ ಕಿಸ್‌!

By

Published : Jan 30, 2023, 12:02 PM IST

ಪಠಾಣ್ ಸಿನಿಮಾದ ಯಶಸ್ಸಿನ ಅಲೆಯ ಮೇಲೆ ತೇಲಾಡುತ್ತಿರುವ ನಟ ಶಾರೂಖ್ ಖಾನ್ ಅವರು ಭಾನುವಾರ ಮುಂಬೈನಲ್ಲಿರುವ ತಮ್ಮ ನಿವಾಸ 'ಮನ್ನತ್'ನಿಂದ ಅಭಿಮಾನಿಗಳಿಗೆ ದರ್ಶನ ನೀಡಿದರು.

Shahrukh Khan
ಶಾರೂಖ್ ಖಾನ್

ಮುಂಬೈ :ಶಾರುಖ್‌ ಖಾನ್ ನಟನೆಯಬಹುನಿರೀಕ್ಷಿತ ಪಠಾಣ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ. ಸಿದ್ಧಾರ್ಥ ಆನಂದ್​ ನಿರ್ದೇಶನದ ಸಿನಿಮಾದಲ್ಲಿ​ ಶಾರೂಖ್ ಖಾನ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಹಿಂದಿ ಸಿನಿಮಾ ಲೋಕಕ್ಕೆ ಪಠಾಣ್‌ ಹೊಸ ಚೈತನ್ಯ ನೀಡಿದೆ. ಸಿನಿಮಾ ಬಿಡುಗಡೆಯಾಗಿ 5 ದಿನ ಕಳೆದಿದ್ದು ಹತ್ತು ಹಲವು ದಾಖಲೆಗಳನ್ನು ಪುಡಿಗಟ್ಟಿದೆ.

ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಈಗಾಗಲೇ 400 ಕೋಟಿ ರೂ.ಗಳಿಗಿಂತಲೂ ಹೆಚ್ಚು ಕಲೆಕ್ಷನ್​ ಮಾಡಿದೆ. ನಿನ್ನೆ ಮುಂಬೈನಲ್ಲಿರುವ ನಟನ ಮನೆ ಮುಂದೆ ಅಭಿಮಾನಿ ಸಾಗರವೇ ಸೇರಿತ್ತು. ಈ ಸಂದರ್ಭದಲ್ಲಿ ತಮ್ಮ ಐಷಾರಾಮಿ ನಿವಾಸದಿಂದ ಶಾುಖ್ ಖಾನ್‌ ಅಭಿಮಾನಿಗಳಿಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟರು. ನೆಚ್ಚಿನ ನಟನನ್ನು ನೋಡಿದ ಅಭಿಮಾನಿಗಳು ಸಂತಸದಲ್ಲಿ ತೇಲಾಡಿದರು. ಕಪ್ಪು ಶರ್ಟ್​ ಮತ್ತು ಪ್ಯಾಂಟ್‌ನಲ್ಲಿ ಶಾರುಖ್ ಕಂಡುಬಂದರು.

'ಪಠಾಣ್‌' ಸಿನಿಮಾ ಆದಿತ್ಯ ಚೋಪ್ರಾ ಅವರ ಯಶ್​ ರಾಜ್​ ಫಿಲ್ಮ್ಸ್‌ನಡಿ ನಿರ್ಮಾಣಗೊಂಡಿದೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ಮತ್ತು ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಕೂಡಾ ಪ್ರಮುಖ ಪಾತ್ರಗಳಲ್ಲಿದ್ದರು. ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 2023 ರ ಗಣರಾಜ್ಯೋತ್ಸವದ ಮುನ್ನಾದಿನ ಬಿಡುಗಡೆಯಾಗಿತ್ತು.

ಪಠಾಣ್‌ ಭಾರತದಲ್ಲಿ ಈಗಾಗಲೇ 265 ಕೋಟಿ ರೂ ಹಾಗೂ ವಿದೇಶದಲ್ಲಿ 164 ಕೋಟಿ ರೂ.ಗೂ ಹೆಚ್ಚು ಸಂಪಾದನೆ ಮಾಡಿದೆ ಎಂದು ಅಂದಾಜಿಸಲಾಗಿದೆ. ನಾಲ್ಕು ವರ್ಷಗಳ ನಂತರ ಶಾರುಖ್‌ ಸಿನಿಮಾ ಕಣ್ತುಂಬಿಕೊಂಡು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಸಿನಿಮಾ ಮೊದಲ ದಿನವೇ ಚಿತ್ರ 100 ಕೋಟಿ ರೂ ಕ್ಲಬ್ ಸೇರಿ ದಾಖಲೆ ಬರೆದಿತ್ತು. ಅಷ್ಟೇ ಅಲ್ಲ, 300 ಕೋಟಿ ರೂಗೂ ಹೆಚ್ಚು ಹಣ ಗಳಿಸಿದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಇದನ್ನೂ ಓದಿ:ನಾಲ್ಕೇ ದಿನಗಳಲ್ಲಿ 400 ಕೋಟಿ ಕಲೆಕ್ಷನ್​: ದಾಖಲೆ ನಿರ್ಮಿಸಿದ ಪಠಾಣ್​​

ABOUT THE AUTHOR

...view details