ಕರ್ನಾಟಕ

karnataka

ಡೆಂಘೀಯಿಂದ ಚೇತರಿಸಿಕೊಂಡ ಸಲ್ಮಾನ್ ಖಾನ್: ಬಿಗ್ ಬಾಸ್ 16ರ ಚಿತ್ರೀಕರಣ ಪುನಾರಂಭ

By

Published : Oct 27, 2022, 1:18 PM IST

ಸಲ್ಮಾನ್ ಖಾನ್ ಡೆಂಘೀ ಯಿಂದ ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಬಿಗ್ ಬಾಸ್ ಶೂಟಿಂಗ್ ಅನ್ನು ಪುನಾರಂಭಿಸಲಿದ್ದಾರೆ.

Salman Khan recovers from dengue, to resume shoot for Bigg Boss 16'
Salman Khan recovers from dengue, to resume shoot for Bigg Boss 16'

ಮುಂಬೈ (ಮಹಾರಾಷ್ಟ್ರ): ಕಳೆದ ಒಂದು ವಾರದಿಂದ ಡೆಂಘೀ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಬಾಲಿವುಡ್​​ ನಟ ಸಲ್ಮಾನ್ ಖಾನ್ ಅವರು ಸದ್ಯ ಚೇತರಿಸಿಕೊಂಡಿದ್ದಾರೆ. ಶೀಘ್ರದಲ್ಲೇ ರಿಯಾಲಿಟಿ ಶೋ ಬಿಗ್ ಬಾಸ್ 16ರ ಶೂಟಿಂಗ್ ಪುನಾರಂಭಿಸಲಿದ್ದಾರೆ ಎಂದು ನಟನ ಆಪ್ತ ಮೂಲಗಳು ತಿಳಿಸಿವೆ.

2010 ರಿಂದ ಪ್ರಸಿದ್ಧ ಬಿಗ್ ಬಾಸ್ ಹೋಸ್ಟ್ ಮಾಡುತ್ತಿರುವ 56 ವರ್ಷದ ಖಾನ್​ಗೆ ಕಳೆದ ವಾರ ಡೆಂಘೀ ಇರುವುದು ಪತ್ತೆಯಾಗಿತ್ತು. ಹಾಗಾಗಿ ರಿಯಾಲಿಟಿ ಶೋದ 'ವೀಕೆಂಡ್ ಕಾ ವಾರ್' ಸಂಚಿಕೆಗಳ ಚಿತ್ರೀಕರಣಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಸದ್ಯ ಚೇತರಿಸಿಕೊಂಡಿದ್ದಾರೆ. ಆದರೆ, ಡೆಂಗ್ಯೂನಿಂದ ಸ್ವಲ್ಪ ದುರ್ಬಲರಾಗಿದ್ದಾರೆ ಎನ್ನಲಾಗುತ್ತಿದೆ.

ಇಂದು (ಗುರುವಾರ) ವಾರಾಂತ್ಯದ ಸಂಚಿಕೆಯ ಶೂಟಿಂಗ್​ ನಡೆಯಲಿದ್ದು ಅದರ ಚಿತ್ರೀಕರಣದಲ್ಲಿ ಸಲ್ಮಾನ್ ಖಾನ್ ಪಾಲ್ಗೊಳ್ಳಲಿದ್ದಾರೆ ಎಂದು ರಿಯಾಲಿಟಿ ಶೋ ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ. ಇಂದು ಮತ್ತು ನಾಳೆ ನಡೆಯುವ ಚಿತ್ರೀಕರಣವು ವಾರಾಂತ್ಯದ ಸಂಚಿಕೆಯಾಗಿ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ನಟರಾದ ಕತ್ರಿನಾ ಕೈಫ್, ಇಶಾನ್ ಮತ್ತು ಸಿದ್ಧಾಂತ್ ಚತುರ್ವೇದಿ ಕೂಡ ತಮ್ಮ 'ಫೋನ್ ಭೂತ್' ಚಿತ್ರದ ಪ್ರಚಾರಕ್ಕಾಗಿ ಇಂದು ಸೆಟ್‌ಗೆ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಲ್ಮಾನ್ ಅನುಪಸ್ಥಿತಿಯಲ್ಲಿ ಚಿತ್ರ ನಿರ್ಮಾಪಕ ಕರಣ್ ಜೋಹರ್ ರಿಯಾಲಿಟಿ ಶೋನ ಮೂರು ಸಂಚಿಕೆಗಳಿಗೆ ನಿರೂಪಕರಾಗಿ ಸೇವೆ ಸಲ್ಲಿಸಿದರು.

ಇದನ್ನೂ ಒದಿ:ಗಂಧದಗುಡಿ ಶೂಟಿಂಗ್​ ವೇಳೆ ಪುನೀತ್​ ಜೊತೆ ನಾನೂ ಟ್ರಕ್ಕಿಂಗ್​ ಮಾಡಿದ್ದೆ.. ಅಶ್ವಿನಿ ಪುನೀತ್​ ರಾಜ್​ಕುಮಾರ್​

ABOUT THE AUTHOR

...view details