ಕರ್ನಾಟಕ

karnataka

ದೈವದೊಂದಿಗೆ ಡಿವೈನ್​ ಸ್ಟಾರ್​: ನೇಮೋತ್ಸವದಲ್ಲಿ ರಿಷಬ್​ ಶೆಟ್ಟಿ ಭಾಗಿ, ವಿಡಿಯೋ ನೋಡಿದ್ರಾ?

By

Published : Apr 28, 2023, 4:02 PM IST

Updated : Apr 28, 2023, 4:30 PM IST

ಬಂಟ್ವಾಳ ಸಮೀಪ ನಡೆದ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ನಟ ರಿಷಬ್​ ಶೆಟ್ಟಿ ಭಾಗಿಯಾಗಿ ವಿಡಿಯೋ ಹಂಚಿಕೊಂಡಿದ್ದಾರೆ.

Rishab shetty in Panjurli daiva kola
ನೇಮೋತ್ಸವದಲ್ಲಿ ರಿಷಬ್​ ಶೆಟ್ಟಿ

2022ರಲ್ಲಿ ಕನ್ನಡ ಚಿತ್ರರಂಗದ ಖ್ಯಾತಿ ಉತ್ತುಂಗಕ್ಕೇರಿದೆ. ಬಗೆಬಗೆಯ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಕಥೆ, ಕಾಸ್ಟಿಂಗ್​, ಮೇಕಿಂಗ್​ ವಿಷಯದಲ್ಲೀಗ ಸ್ಯಾಂಡಲ್​ವುಡ್​ ಫಸ್ಟ್​ ಕ್ಲಾಸ್​. ಕೆಜಿಎಫ್​, ಕಾಂತಾರ ಎಂಬ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್​ವುಡ್​ನತ್ತ ನೋಡುವಂತಾಯ್ತು.

ಸೂಪರ್​ ಹಿಟ್​ 'ಕಾಂತಾರ'ದಲ್ಲಿ ನಟಿಸಿ, ನಿರ್ದೇಶನ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ ಬಂಟ್ವಾಳ ಸಮೀಪ ನಡೆದಿದೆ ಎನ್ನಲಾದ ಮುತ್ತೂರು ನಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು 'ಆಶೀರ್ವದಿಸಲ್ಪಟ್ಟೆ' ಎಂದು ಬರೆದುಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದು, ಮೆಚ್ಚುಗೆ ಸಂಪಾದಿಸಿದೆ. ದೈವದ ಕುರಿತು ಸಾಮಾಜಿಕ ಜಾಲತಾಣದ ಬಳಕೆದಾರರು ಭಕ್ತಿ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸದ್ದು ಮಾಡುತ್ತಿದ್ದು, ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 'ಎಲ್ಲರನ್ನೂ ಕಾಪಾಡು ಪಂಜುರ್ಲಿ' ಎಂದು ಓರ್ವ ಸಾಮಾಜಿಕ ಜಾಲತಾಣ ಬಳಕೆದಾರರು ಬರೆದಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ, 'ರಿಷಬ್ ಸರ್ ಈ ಬಾರಿ ಯಾವುದೇ ವಿವಾದ ಆಗದಿರಲಿ ಅನ್ನೋದು ನನ್ನ ಪ್ರಾರ್ಥನೆ' ಎಂದು ತಿಳಿಸಿದ್ದಾರೆ. 'ಅಣ್ಣಾ ನಮಗೂ ನೇಮೋತ್ಸವ ನೋಡುವಾಸೆ ಮತ್ತೆ ಯಾವಾಗಲಾದರೂ ಮುಂಚೆಯೇ ತಿಳಿಸಿ ದಯಮಾಡಿ' ಎಂದು ಓರ್ವರು ಕಾಮೆಂಟ್​ ಮಾಡಿದ್ದಾರೆ. 'ನೀವು ನರ್ತಕ ವೇಷ ಧರಿಸಿದಾಗ (ಕಾಂತಾರ ಸಿನಿಮಾದಲ್ಲಿ) ಇವರಂತೆಯೇ ಕಾಣುತ್ತೀರಿ' ಎಂದು ಓರ್ವರು ತಿಳಿಸಿದ್ದರೆ, 'ದ್ವಿಪಾತ್ರ ನೋಡಿದಂತಾಯಿತು, ದೈವ ನರ್ತಕರು ನಿಮ್ಮನ್ನೇ ಹೋಲುತ್ತಾರೆ' ಎಂದು ಮತ್ತೋರ್ವರು ಹೇಳಿದ್ದಾರೆ. ರೋಮಾಂಚನ, ಅದ್ಭುತ, ದೈವ ದರ್ಶನ, ಆಶೀರ್ವದಿಸಲ್ಪಟ್ಟೆವು ಎಂಬ ಪದಗಳು ಕಾಮೆಂಟ್​ ವಿಭಾಗದಲ್ಲಿ ತುಂಬಿ ತುಳುಕುತ್ತಿದೆ. ಇಷ್ಟೇ ಅಲ್ಲದೇ, 'ನಿಮ್ಮ ಮುಂದಿನ ಪ್ರಾಜೆಕ್ಟ್​ ಕಾಂತಾರ 2ಗೆ ಬಹಳ ಕಾತರದಿಂದ ಕಾಯುತ್ತಿದ್ದೇವೆ' ಎಂದು ಅಭಿಮಾನಿಗಳು ಕಾಮೆಂಟ್​ ಮೂಲಕ ತಿಳಿಸಿದ್ದಾರೆ.

ರಿಷಬ್​ ಶೆಟ್ಟಿ ಅವರ ಮುಂದಿನ ಬಹುನಿರೀಕ್ಷಿತ ಕಾಂತಾರ 2 (ಕಾಂತಾರ 1 / ಕಾಂತಾರ ಪ್ರೀಕ್ವೆಲ್​) ಕೆಲಸ ಚುರುಕುಗೊಂಡಿದೆ. ಈ ಹಿನ್ನೆಲೆ ನಟ, ನಿರ್ದೇಶಕ ರಿಷಬ್​ ಶೆಟ್ಟಿ ದೈವದ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ, ಕಾಂತಾರ ಕೆಲಸ ಆರಂಭವಾಗುವ ವೇಳೆ ಮತ್ತು ಕಾಂತಾರ 2 ಆರಂಭಿಸಲು ಸಹ ರಿಷಬ್​ ಶೆಟ್ಟಿ ಅವರು ದೈವದ ಅಪ್ಪಣೆ ಪಡೆದಿದ್ದಾರೆ.

ಇದನ್ನೂ ಓದಿ:ಜಿಯಾ ಖಾನ್​​ ಆತ್ಮಹತ್ಯೆ ಪ್ರಕರಣ: ಸೂರಜ್ ಪಾಂಚೋಲಿ ನಿರ್ದೋಷಿ..ಕೋರ್ಟ್​​ ಮಹತ್ವದ ತೀರ್ಪು

'ಕಾಂತಾರ' ಇಡೀ ಭಾರತೀಯ ಸಿನಿಮಾ ರಂಗದಲ್ಲಿ ಸಾಕಷ್ಟು ಮಟ್ಟಿಗೆ ಸದ್ದು ಮಾಡಿದ ಸಿನಿಮಾ. ನಿರ್ದೇಶಕರು, ನಿರ್ಮಾಪಕರೇ ನಿರೀಕ್ಷಿಸದಷ್ಟರ ಮಟ್ಟಿಗೆ ಸದ್ದಿಯಾದ ಚಿತ್ರ. ಚಿತ್ರತಂಡದ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ. 2022ರ ಡಿಸೆಂಬರ್​ 30ರಂದು ತೆರೆಕಂಡ ಈ ಚಿತ್ರ 450 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಆದ್ರೆ ಈ ಸಿನಿಮಾ ನಿರ್ಮಾಣವಾಗಿದ್ದು ಕೇವಲ 16 ಕೋಟಿ ರೂ. ವೆಚ್ಚದಲ್ಲಿ ಅನ್ನೋದನ್ನು ನೀವು ಗಮನಿಸಲೇಕು. ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರು ಸದ್ಯ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದು, ಕಾಂತಾರ 2 ಕೆಲಸ ಜೋರಾಗೇ ನಡೆಯುತ್ತಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ಮಾತ್ರವಲ್ಲದೇ, ಭಾರತೀಯ ಸಿನಿ ರಂಗ ಸಹ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ.

ಇದನ್ನೂ ಓದಿ:ಪುನಿತ್ - ಯುವ ರಾಜ್​ಕುಮಾರ್​ ನಡುವೆ ಸಾಮ್ಯತೆ ಹುಡುಕುತ್ತಿರುವ ಫ್ಯಾನ್ಸ್​: '5'ರ ಸೀಕ್ರೆಟ್​ ಇಲ್ಲಿದೆ

Last Updated : Apr 28, 2023, 4:30 PM IST

ABOUT THE AUTHOR

...view details