ಕರ್ನಾಟಕ

karnataka

ಅಳಿಯ ರಾಮಚರಣ್​ ’ನಾಟು ನಾಟು‘ ಹಾಡಿಗೆ ಅತ್ತೆ ಶೋಭನಾ ಕಾಮಿನೇನಿ ಸ್ಟೆಪ್ಸ್​

By

Published : Jan 19, 2023, 8:16 PM IST

ಉಪಾಸನಾ ಅವರ ತಾಯಿ ಶೋಭನಾ ಕಾಮಿನೇನಿ ಅಳಿಯ ರಾಮ್​ಚರಣ್​ ಅವರ ಹಿಟ್​ ಹಾಡು, ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡಿಗೆ ವಿದೇಶದಲ್ಲಿ ಸ್ಟೆಪ್ಸ್​ ಹಾಕಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

shobhana-kamineni-dance-to-natu-natu-song
ಅಳಿಯ ರಾಮಚರಣ್​ ನಾಟು ನಾಟು ಹಾಡಿಗೆ ಅತ್ತೆ ಶೋಭನಾ ಕಾಮಿನೇನಿ ಸ್ಟೆಪ್ಸ್​

ದಕ್ಷಿಣ ಭಾರತದ ನಿರ್ದೇಶಕ ಎಸ್​ ಎಸ್​​ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡು ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇದೆ. ಈ ಹಾಡಿನ ಸಾಹಿತ್ಯಕ್ಕಿಂತಲೂ ಈ ಹಾಡಿನ ಸ್ಟೆಪ್ಸ್​ ಮಾತ್ರ ಸಖತ್​ ಹಿಟ್​ ಆಗಿತ್ತು. ಹಾಡು ಬಿಡುಗಡೆಯಾದಂದಿನಿಂದ ಪ್ರಾರಂಭಗೊಂಡು ಈ ಹಾಡಿನ ಸ್ಟೆಪ್ಸ್​ ಮೇಲೆ ಲಕ್ಷಗಟ್ಟಲೆ ರೀಲ್ಸ್​ ಬಂದಿರಬಹುದು. ತೆಲುಗು ರಾಜ್ಯ ಮಾತ್ರವಲ್ಲದೇ ರಾಜ್ಯ, ದೇಶದ ಗಡಿ ದಾಟಿಯೂ ಜನ ಈ ಹಾಡಿಗೆ ರೀಲ್ಸ್​ ಮಾಡಿ ಸಂಭ್ರಮಿಸಿದ್ದಾರೆ.

ಇದೀಗ ಆರ್​ಆರ್​ಆರ್​ ಸಿನಿಮಾದ ನಾಯಕ ನಟರಲ್ಲಿ ಒಬ್ಬರಾದ ರಾಮ್​ಚರಣ್​ ಅತ್ತೆ ಶೋಭನಾ ಕಾಮಿನೇನಿ ಅವರ ಅಳಿಯನ ನಾಟು ನಾಟು ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಟ್ವಿಟರ್​ನಲ್ಲಿ ಚಂದ್ರ ಆರ್​ ಶ್ರೀಕಾಂತ್​ ಎನ್ನುವವರು ಹಂಚಿಕೊಂಡಿರುವ ವಿಡಿಯೋವನ್ನು ಶೋಭನಾ ಕಾಮಿನೇನಿ ಅವರು ರಿಟ್ವೀಟ್​ ಮಾಡಿಕೊಂಡಿದ್ದಾರೆ. ಆರ್​ಆರ್​ಆರ್ ಸಿನಿಮಾ ನಾಟು ನಾಟು ಹಾಡಿನಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್​ಟಿಆರ್ ಅದ್ಭುತವಾದ ನೃತ್ಯವನ್ನು ಮಾಡಿದ್ದಾರೆ.

ಟ್ವಿಟರ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ರಾಮ್ ಚರಣ್ ಅವರ ಅತ್ತೆ ಶೋಭನಾ ಕಾಮಿನೇನಿ ಅದ್ಭುತವಾದ ಡ್ಯಾನ್ಸ್ ಸ್ಟೆಪ್‌ಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಅವರು ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಾಟು ನಾಟು ಹಾಡಿಗೆ ಹೆಜ್ಜೆಗಳನ್ನು ಹಾಕಿದ್ದಾರೆ. ಸ್ವಲ್ಪವೇ ಸ್ಟೆಪ್ಸ್​ ಹಾಕಿರುವ ಅವರು ತುಂಬಾ ಸಂತೋಷವಾಗಿರುವುದನ್ನು ಕಾಣಬಹುದು. ಅವರ ಜೊತೆ ಇನ್ನೊಬ್ಬ ಮಹಿಳೆಯೂ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ.

ಶೋಭನಾ ಕಾಮಿನೇನಿ ಅವರು ಪ್ರಸ್ತುತ ಅಪೋಲೋ ಆಸ್ಪತ್ರೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ. ಶೋಭನಾ ಕಾಮಿನೇನಿ ಅವರ ಮಗಳು ಉಪಾಸನಾ ಅವರನ್ನು ರಾಮ್​ಚರಣ್​ ಅವರು ಮಾದುವೆಯಾಗಿದ್ದಾರೆ. ದಂಪತಿ ಇತ್ತೇಚೆಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಸೂಪರ್‌ಹಿಟ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ನಿರ್ದೇಶನ ಹಾಗೂ ಜೂನಿಯರ್​ ಎನ್​ಟಿಆರ್​ ಹಾಗೂ ರಾಮ್​ಚರಣ್​ ಅಭಿನಯದ ದಕ್ಷಿಣದ ಬ್ಲಾಕ್‌ಬಸ್ಟರ್ ಚಿತ್ರ 'ಆರ್‌ಆರ್‌ಆರ್' ತನ್ನ ಅದ್ಭುತ ಯಶಸ್ಸಿನಿಂದ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದೆ.

ಇತ್ತೀಚೆಗೆ ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡಿಗೆ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ಗೋಲ್ಡನ್​ ಗ್ಲೋಬ್​ ಪ್ರಶಸ್ತಿ ಬಂದಿತ್ತು. ನಂತರದಲ್ಲಿ ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್​ನಲ್ಲಿ ಆರ್​ಆರ್​ಆರ್​ ಸಿನಿಮಾಗೆ ಅತ್ಯುತ್ತಮ ವಿದೇಶಿ ಭಾಷಾ ಸಿನಿಮಾ ಹಾಗೂ ನಾಟು ನಾಟು ಹಾಡಿಗೆ ಅತ್ಯುತ್ತಮ ಗೀತೆ ವಿಭಾಗಗಳಲ್ಲಿ ಪ್ರಶಸ್ತಿಗಳು ಬಂದಿದ್ದವು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶೋಭನಾ ಕಾಮಿನೇನಿ ಅವರು 'ಆರ್‌ಆರ್‌ಆರ್‌ ಸಿನಿಮಾದ ಗುಂಗಿನಿಂದ ಹೊರ ಬರುವುದು.

ನನಗೆ ತುಂಬಾ ಖುಷಿ ಹಾಗೂ ಆಶ್ಚರ್ಯವೂ ಆಗುತ್ತಿದೆ, ಈ ಅದ್ಭುತ ಚಿತ್ರವು ಅಂತಾರಾಷ್ಟ್ರೀಯ ಕ್ವಾರ್ಟರ್ಸ್‌ನಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆಯುತ್ತಿದೆ. ಚಿತ್ರ ಹಲವಾರು ವಿದೇಶಿ ಪ್ರಶಸ್ತಿಗಳಿಗೆ ಭಾಜನವಾಗುತ್ತಿರುವುದು ಅನೇಕ ಭಾರತೀಯರಲ್ಲಿ ಸಿನಿಮಾರಂಗದ ಮೇಲೆ ಭರವಸೆಯನ್ನು ಮೂಡಿಸಿದೆ' ಎಂದಿದ್ದರು.

ಆರ್‌ಆರ್‌ಆರ್ ಇಬ್ಬರು ನಿಜ ಜೀವನದ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರ ಕಾಲ್ಪನಿಕ ಕಥೆಯನ್ನು ಆಧರಿಸಿದ ಚಿತ್ರವಾಗಿದೆ. ಸಿನಿಮಾದಲ್ಲಿ ರಾಮಚರಣ್ ಹಾಗೂ ಜೂನಿಯರ್ ಎನ್​ಟಿಆರ್​ ಜೊತೆಗೆ ಬಾಲಿವುಡ್ ಸ್ಟಾರ್​ಗಳಾದ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ನಟಿಸಿದ್ದಾರೆ. ಈ ಚಿತ್ರ ಭಾರತ ಮಾತ್ರವಲ್ಲದೆ ವಿದೇಶದ ಗಲ್ಲಾಪೆಟ್ಟಿಗೆಯಲ್ಲೂ ಭಾರಿ ಗಳಿಕೆ ಕಂಡಿತ್ತು.

ಇದನ್ನೂ ಓದಿ:ಆರ್​ಆರ್​ಆರ್​ ಹೊಗಳಿದ ಅವತಾರ್​ ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​: ಪ್ರಪಂಚದ ಉತ್ತುಂಗದಲ್ಲಿದ್ದೇನೆ ಎಂದ ನಿರ್ದೇಶಕ ರಾಜಮೌಳಿ

ABOUT THE AUTHOR

...view details