ಕರ್ನಾಟಕ

karnataka

ಹಾಸ್ಯ ನಟ ರಾಜು ಶ್ರೀವಾಸ್ತವಗೆ ಶ್ರದ್ಧಾಂಜಲಿ ಸಲ್ಲಿಸಿದ ಕುಟುಂಬಸ್ಥರು.. ಕಣ್ಣೀರಿಟ್ಟ ಪತ್ನಿ!

By

Published : Sep 26, 2022, 5:09 PM IST

ಹಾಸ್ಯ ನಟ ರಾಜು ಶ್ರೀವಾಸ್ತವ ಅವರಿಗೆ ಅವರ ಕುಟುಂಬವು ಮುಂಬೈನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದೆ. ಈ ವೇಳೆ ಅವರ ಅನೇಕ ಸ್ನೇಹಿತರು, ಸಹೋದ್ಯೋಗಿಗಳು ಉಪಸ್ಥಿತರಿದ್ದರು. ಅಲ್ಲದೇ ಅವರ ಕುಟುಂಬದವರು ಶೀಘ್ರದಲ್ಲೇ ದೆಹಲಿಗೆ ತೆರಳಲಿದ್ದಾರೆ.

raju srivastava family
ಹಾಸ್ಯ ನಟ ರಾಜು ಶ್ರೀವಾಸ್ತವರಿಗೆ ಶ್ರದ್ಧಾಂಜಲಿ

ಮುಂಬೈ:ರಾಜು ಶ್ರೀವಾಸ್ತವ ಅವರ ಕುಟುಂಬವು ದಿವಂಗತ ಹಾಸ್ಯ ನಟನಿಗೆ ಭಾನುವಾರ ಮುಂಬೈನಲ್ಲಿ ಶ್ರದ್ಧಾಂಜಲಿ ಸಲ್ಲಿಸಿತು. ಶ್ರೀವಾಸ್ತವ ಅವರ ಹಲವಾರು ಸ್ನೇಹಿತರು ಮತ್ತು ಸಹೋದ್ಯೋಗಿಗಳು ಇದರಲ್ಲಿ ಭಾಗಿಯಾಗಿದ್ದರು. ಕಪಿಲ್ ಶರ್ಮಾ, ಭಾರ್ತಿ ಸಿಂಗ್, ಜಾನಿ ಲಿವರ್, ನೀಲ್ ನಿತಿನ್ ಮುಖೇಶ್, ಕೇ ಕೇ ಮೆನಾನ್, ಎಹ್ಸಾನ್ ಖುರೇಷಿ ಮತ್ತು ಕಿಕು ಶಾರ್ಡಾ ಅವರು ದಿವಂಗತ ಹಾಸ್ಯನಟನಿಗೆ ನಮನ ಸಲ್ಲಿಸಲು ಆಗಮಿಸಿದ್ದರು.

ಹಾಸ್ಯ ನಟ ರಾಜು ಶ್ರೀವಾಸ್ತವ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಅವರ ಪತ್ನಿ ಗಂಡನನ್ನು ನೆನೆದು ಕಣ್ಣೀರಿಡುವುದನ್ನು ನಾವು ನೋಡಬಹುದಾಗಿದೆ.

ನನ್ನ ಜೀವನ ಈಗ ಕೊನೆಗೊಂಡಿದೆ. ಎಲ್ಲರೂ ಅವರಿಗಾಗಿ ಪ್ರಾರ್ಥಿಸಿದ್ದರು. ವೈದ್ಯರು ಸಹ ಅವರನ್ನು ಉಳಿಸಲು ತುಂಬಾ ಪ್ರಯತ್ನ ಮಾಡಿದರು. ಇಲ್ಲಿರುವಾಗ ಅವರು ನಮ್ಮನ್ನು ನಗಿಸಿದರು, ಈಗ ಸ್ವರ್ಗದಲ್ಲಿ ಅವರು ಎಲ್ಲರನ್ನೂ ನಗಿಸುತ್ತಿದ್ದಾರೆ ಎಂಬುದು ನನಗೆ ಅನಿಸುತ್ತಿದೆ. ಅವರ ಸ್ನೇಹಿತರು ನಮಗೆ ಬಹಳಷ್ಟು ಬೆಂಬಲ ನೀಡಿದ್ದಾರೆ ಎಂದು ರಾಜು ಶ್ರೀವಾಸ್ತವ ಪತ್ನಿ ನೆನಪಿಸಿಕೊಂಡಿದ್ದಾರೆ.

ನಟ ರಾಜು ಶ್ರೀವಾಸ್ತವ ಅವರ ಕುಟುಂಬವು ದೆಹಲಿಗೆ ಮರಳಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ, ಅವರ ಕಾನ್ಪುರ್ ನಿವಾಸದಲ್ಲಿ ಪೂಜೆಯನ್ನು ಸಹ ಮಾಡಿಸಲಿದ್ದಾರೆ. ನಾವು ಶೀಘ್ರದಲ್ಲೇ ದೆಹಲಿಗೆ ಹಿಂತಿರುಗುತ್ತೇವೆ. ಬಹಳಷ್ಟು ಆಚರಣೆಗಳು ನಡೆಯುತ್ತಿವೆ. ಕಾನ್ಪುರ್ ಅಪ್ಪನ ಮನೆಯಾಗಿತ್ತು. ಆದ್ದರಿಂದ, ನಾವು ಅಲ್ಲಿಯೂ ಪೂಜೆಯನ್ನು ಮಾಡಬೇಕು ಎಂದು ಅಂಟಾರಾ ಹೇಳಿದ್ದಾರೆ.

ಇದನ್ನೂ ಓದಿ:ಬಾಲಿವುಡ್ ಕಾಮಿಡಿ ಕಿಂಗ್ ರಾಜು ಶ್ರೀವಾಸ್ತವ್ ನಿಧನ: ಸ್ವಚ್ಛ ಭಾರತ ಅಭಿಯಾನದ ಸಾರಥಿಯಾಗಿದ್ದ ಸೆಲೆಬ್ರಿಟಿ

ರಾಜು ಶ್ರೀವಾಸ್ತವ ಸೆಪ್ಟೆಂಬರ್ 21 ರಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಹೃದಯಾಘಾತದ ನಂತರ ಅವರನ್ನು ಆಗಸ್ಟ್ 9 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ನಟರಾದ ರವಿ ಕಿಶನ್, ಶೇಖರ್ ಸುಮನ್ ಮತ್ತು ವಿಕ್ಕಿ ಕೌಶಾಲ್, ಕಾಶ್ಮೀರಿ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕೂಡ ದಿವಂಗತ ಹಾಸ್ಯನಟನಿಗೆ ಗೌರವ ಸಲ್ಲಿಸಿದ್ದರು.

ABOUT THE AUTHOR

...view details