ಕರ್ನಾಟಕ

karnataka

'ನಾನು BA ಮಾಡಿದ ಗಂಡು'... ನವಜೋಡಿಗಳು ಕೇಳಲೇಬೇಕಾದ ಹಾಡಿದು ಎಂದ ಅಭಿಷೇಕ್ ಅಂಬರೀಶ್

By ETV Bharat Karnataka Team

Published : Oct 14, 2023, 12:48 PM IST

Rajayoga Movie: ಧರ್ಮಣ್ಣ ಕಡೂರು ಅಭಿನಯದ 'ರಾಜಯೋಗ' ಸಿನಿಮಾದ 'ನಗ್​ಬ್ಯಾಡ್ವೆ ನನ್ನ ಕಂಡು, ನಾನು ಬಿ ಎ ಮಾಡಿದ ಗಂಡು....' ಹಾಡನ್ನು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅನಾವರಣಗೊಳಿಸಿದ್ದಾರೆ.

Rajayoga Movie
'ರಾಜಯೋಗ' ಸಿನಿಮಾ ಸಾಂಗ್​ ರಿಲೀಸ್ ಮಾಡಿದ ಅಭಿಷೇಕ್ ಅಂಬರೀಶ್

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಮ್ಯಾನರಿಸಂನಿಂದಲೇ ಸಿನಿಪ್ರಿಯರ ಮನೆಗೆದ್ದಿರುವ ಧರ್ಮಣ್ಣ ಕಡೂರು ಅವರಿಗೀಗ 'ರಾಜಯೋಗ' ಶುರುವಾಗಿದೆ. ರಾಜಯೋಗ ಅರಂಭವಾದ ಮೇಲೆ ಕಾಮಿಡಿ ಸ್ಟಾರ್ ಆಗಿದ್ದ ಧರ್ಮಣ್ಣ ನಾಯಕ ನಟನಾಗಿದ್ದಾರೆ. ಇದೆಲ್ಲ ನಿಜಕ್ಕೂ 'ರಾಜಯೋಗ'ದ ಮಹಿಮೆನಾ? ಅಂತ ಕೇಳಿದ್ರೆ 100 ಪರ್ಸೆಂಟ್ ಹೌದು ಅಂತಾರೆ ಧರ್ಮಣ್ಣ.

ಫ್ಯಾಮಿಲಿ ಎಂಟರ್​​ಟೈನ್ಮೆಂಟ್ ಸಿನಿಮಾ: ಯಾಕಂದ್ರೆ ಧರ್ಮಣ್ಣ ಅವರೀಗ 'ರಾಜಯೋಗ' ಶೀರ್ಷಿಕೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್​​ಟೈನ್ಮೆಂಟ್ ಸಿನಿಮಾ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರುವ ರಾಜಯೋಗ ಚಿತ್ರದ ಮೊದಲ ಹಾಡು ಇತ್ತಿಚೆಗೆ ಬಿಡುಗಡೆ ಆಗಿದೆ. ರೊಮ್ಯಾಂಟಿಕ್ ಸಾಂಗ್ 'ನಗ್​ಬ್ಯಾಡ್ವೆ ನನ್ನ ಕಂಡು, ನಾನು ಬಿ ಎ ಮಾಡಿದ ಗಂಡು....' ಎನ್ನುವ ಸಾಲಿನಿಂದ ಪ್ರಾರಂಭವಾಗುತ್ತದೆ.

ಅಭಿಷೇಕ್ ಅಂಬರೀಷ್ ಸಾಥ್: ಧರ್ಮಣ್ಣ ಅಭಿನಯದ ಈ ಸಿನಿಮಾದ ಮೊದಲ ಹಾಡನ್ನು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರು ಅನಾವರಣಗೊಳಿಸಿದ್ದಾರೆ. ಹಾಡನ್ನು ನೋಡಿ ಇಷ್ಟಪಟ್ಟಿರುವ ಅಭಿಷೇಕ್ ಅಂಬರೀಶ್​​ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು ನವಜೋಡಿಗಳು ಈ ಹಾಡನ್ನು ನೋಡಲೇಬೇಕು ಎಂದು ಸಹ ಹೇಳಿದ್ದಾರೆ.

'ರಾಜಯೋಗ' ಸಿನಿಮಾ

ರಾಜಯೋಗ ಚಿತ್ರಕ್ಕೆ ಲಿಂಗರಾಜ ಉಚ್ಚಂಗಿ ದುರ್ಗ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಅಕ್ಷಯ್ ಎಸ್ ರಿಷಬ್ ಸಂಗೀತ ನೀಡಿದ್ದಾರೆ. ಸದ್ಯ ರಿಲೀಸ್ ಆಗಿರುವ 'ಬಿ ಎ ಗಂಡು...' ಹಾಡಿಗೆ ಲಿಂಗರಾಜು ಅವರೇ ಸಾಹಿತ್ಯ ರಚಿಸಿದ್ದು, ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಮತ್ತು ಗಾಯಕಿ ಅನನ್ಯಾ ಭಟ್ ಧ್ವನಿ ನೀಡಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದಿರುವ ರಾಜಯೋಗ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ.

ಅಂದಹಾಗೇ, ನಿರ್ದೇಶಕ ಲಿಂಗರಾಜು ಉಚ್ಚಂಗಿ ದುರ್ಗ ಅವರಿಗೆ ಇದು ಚೊಚ್ಚಲ ಚಿತ್ರ. ಈ ಮೊದಲು ಕಿರುತೆರೆಯಲ್ಲಿ ಕೆಲಸ ಮಾಡಿದ್ದ ಲಿಂಗರಾಜು ಅವರು ರಾಜಯೋಗ ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡ‌ಲ್​​​ವುಡ್‌ ಹಿರಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಧರ್ಮಣ್ಣ ಬಿಟ್ಟರೆ ಉಳಿದವರೆಲ್ಲ ಹೊಸಬರೇ. ಧರ್ಮಣ್ಣ ಅವರಿಗೆ ನಾಯಕಿಯಾಗಿ ನಿರೀಕ್ಷಾ ರಾವ್ ಕಾಣಿಸಿಕೊಂಡಿದ್ದಾರೆ. ನಿರೀಕ್ಷಾ ಕೂಡ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದು, ಚಿತ್ರದಲ್ಲಿ ಧರ್ಮಣ್ಣ ಅವರ ಪತ್ನಿಯಾಗಿ ಮಿಂಚಿದ್ದಾರೆ.

ಇದನ್ನೂ ಓದಿ:ಸನ್ನಿ ಡಿಯೋಲ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರೆ: 'ಪುಷ್ಪ' ನಿರ್ಮಾಪಕರು!

ಶ್ರೀರಾಮ ರಕ್ಷಾ ಪ್ರೊಡಕ್ಷನ್‌ ಮೂಲಕ ಕುಮಾರ ಕಂಠೀರವ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಶೇಷ ಎಂದರೆ, ಧರ್ಮಣ್ಣ ನಟನೆ ಜೊತೆ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಉಳಿದಂತೆ ದೀಕ್ಷಿತ್ ಕೃಷ್ಣ, ಪ್ರಭು, ಲಿಂಗರಾಜು, ನೀರಜ್ ಗೌಡ ಕೂಡ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಸದ್ಯ ಟ್ರೇಲರ್ ಹಾಗೂ ಹಾಡಿನ ಮೂಲಕ ಸದ್ದು ಮಾಡುತ್ತಿರುವ ರಾಜಯೋಗ ಸಿನಿಮಾ ಮುಂದಿನ ತಿಂಗಳ ಮೊದಲ ವಾರದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಧರ್ಮಣ್ಣ ಅವರ ರಾಜಯೋಗ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

ಇದನ್ನೂ ಓದಿ:ಭಾರತ ಪಾಕಿಸ್ತಾನ ಪಂದ್ಯ: ಅಹಮದಾಬಾದ್‌ ತಲುಪಿದ ಸಚಿನ್​ ತೆಂಡೂಲ್ಕರ್, ಅನುಷ್ಕಾ ಶರ್ಮಾ, ಅರಿಜಿತ್ ಸಿಂಗ್​ - ವಿಡಿಯೋ!

ABOUT THE AUTHOR

...view details