ಕರ್ನಾಟಕ

karnataka

ಬಿಗ್ ಬಾಸ್ 16 ಮನೆಗೆ ಪ್ರವೇಶಿಸಲಿದ್ದಾರೆ ರಾಜ್​ಕುಂದ್ರಾ

By

Published : Sep 5, 2022, 9:50 PM IST

ಉದ್ಯಮಿ ರಾಜ್ ಕುಂದ್ರಾ ಹಾಗೂ ಬಿಗ್​ ಬಾಸ್​ ರಿಯಾಲಿಟಿ ಶೋ ಸೀಸನ್​ನ ತಯಾರಕರ ನಡುವೆ ಕಾರ್ಯಕ್ರಮದ ಕುರಿತು ಚರ್ಚೆಗಳು ನಡೆಯುತ್ತಿವೆ.

ಉದ್ಯಮಿ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ
ಉದ್ಯಮಿ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ

ಮುಂಬೈ (ಮಹಾರಾಷ್ಟ್ರ):ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನ ಹೊಸ ಸೀಸನ್‌ಗಾಗಿ ಶಿಲ್ಪಾ ಶೆಟ್ಟಿ ಅವರ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರನ್ನು ಸಂಪರ್ಕಿಸಲಾಗಿದೆ. ಒಂದು ಮೂಲದ ಪ್ರಕಾರ, ರಾಜ್ ಮತ್ತು ಕಾರ್ಯಕ್ರಮದ ತಯಾರಕರ ನಡುವೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.

ಎಲ್ಲವೂ ಸರಿಯಾಗಿದ್ದರೆ ರಾಜ್ ಬಿಗ್ ಬಾಸ್ 16 ರಲ್ಲಿ ಸ್ಪರ್ಧಿಗಳಲ್ಲಿ ಒಬ್ಬರಾಗಬಹುದಿತ್ತು. ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿದ ಆರೋಪದಲ್ಲಿ ರಾಜ್ ಅವರನ್ನು ಜುಲೈ 2021 ರಲ್ಲಿ ಬಂಧಿಸಲಾಗಿತ್ತು. ಮತ್ತು ಸೆಪ್ಟೆಂಬರ್‌ನಲ್ಲಿ ಜಾಮೀನು ಕೂಡಾ ಸಿಕ್ಕಿತ್ತು. ಆ ಬಳಿಕ ರಾಜ್​ ಕುಂದ್ರಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆ. ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಅವರು ಮುಖವಾಡ ಸಹ ಹಾಕಿದ್ದಿದೆ.

ಸೋಷಿಯಲ್ ಮೀಡಿಯಾದಲ್ಲೂ ರಾಜ್ ಕುಂದ್ರಾ ತಮ್ಮ ಮುಖವನ್ನು ಕಾಣದಂತೆ ಮರೆಮಾಚಿದ್ದಾರೆ. ಜೂನ್ 8 ರಂದು, ಅವರು ತಮ್ಮ 47 ನೇ ಹುಟ್ಟುಹಬ್ಬದಂದು ಪತ್ನಿ ಶಿಲ್ಪಾಗೆ ಶುಭ ಹಾರಿಸಿದ್ದರು. ಈ ಮೂಲಕ ಅವರು ಸುಮಾರು ಒಂದು ವರ್ಷದ ಬಳಿಕ ಟ್ವಿಟರ್‌ ನಲ್ಲಿ ಕಾಣಿಸಿಕೊಂಡಿದ್ದರು.

ಕಳೆದ ವರ್ಷ ರಾಜ್ ಕುಂದ್ರಾ ಸೊಸೆ, ಶಿಲ್ಪಾ ಶೆಟ್ಟಿ ಸಹೋದರಿ, ಶಮಿತಾ ಶೆಟ್ಟಿ ಬಿಗ್ ಬಾಸ್ 15 ರಲ್ಲಿ ಭಾಗವಹಿಸಿ ಟಾಪ್ 5 ರಲ್ಲಿ ಕಾಣಿಸಿಕೊಂಡು ಸದ್ದು ಮಾಡಿದರು.

ಓದಿ:ಕಾಫಿ ವಿತ್​ ಕರಣ್ ಶೋನಲ್ಲಿ ಮತ್ತೆ ಫಸ್ಟ್​ನೈಟ್​ ಟಾಕ್​.. ಈ ಬಾರಿ ಯಾರ ಸರದಿ ಗೊತ್ತಾ?


ABOUT THE AUTHOR

...view details