ಕರ್ನಾಟಕ

karnataka

ದೇಸಿಗರ್ಲ್​ ಸೇರಿದಂತೆ ಬಾಲಿವುಡ್​ ಸೆಲೆಬ್ರಿಟಿಗಳ ಹೋಳಿ ಸಂಭ್ರಮ!

By

Published : Mar 9, 2023, 5:26 PM IST

ಪ್ರೀತಿ ಜಿಂಟಾ, ಪತಿ ಜೀನ್ ಗುಡೆನಾಫ್ ಮತ್ತು ಅವರ ಸ್ನೇಹಿತರು ಲಾಸ್ ಏಂಜಲೀಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಾಸ್ ಜೊತೆ ಹೋಳಿ ಆಚರಿಸಿದರು.

Priyanka Chopra
ಬಾಲಿವುಡ್​ ಸೆಲೆಬ್ರಿಟಿಗಳ ಹೋಳಿ ಸಂಭ್ರಮ

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ಅಮೆರಿಕನ್ ಪಾಪ್ ಗಾಯಕ ಹಾಗೂ ಪತಿ ನಿಕ್ ಜೋನಾಸ್ ಅವರು ಲಾಸ್ ಏಂಜಲೀಸ್‌ನಲ್ಲಿ ಹೋಳಿ ಆಚರಿಸಲು ಬಾಲಿವುಡ್ ತಾರೆ ಪ್ರೀತಿ ಜಿಂಟಾ ಮತ್ತು ಅವರ ಪತಿ ಜೀನ್ ಗುಡ್‌ನಫ್ ಜೊತೆಗೂಡಿದರು. ಪ್ರೀತಿ, ತಾನು ತನ್ನ ಪತಿ ಜೀನ್ ಮತ್ತು ಪ್ರಿಯಾಂಕಾ - ನಿಕ್ ಜೊತೆ ಹೋಳಿ ಆಚರಿಸುತ್ತಿರುವ ಪೋಟೋ ಮತ್ತು ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಪ್ರೀತಿ ಜಿಂಟಾ ಪೋಸ್ಟ್​ ಮಾಡಿರುವ ಈ ವಿಡಿಯೋದಲ್ಲಿ ಜೀನ್, ಪ್ರಿಯಾಂಕಾ, ನಿಕ್ ಮತ್ತು ಇನ್ನೂ ಕೆಲವು ಸ್ನೇಹಿತರು ಫುಲ್​ ಬಣ್ಣದಲ್ಲಿ ಮಿಂದೆದಿದ್ದಾರೆ. ನಟಿ ಈ ವಿಡಿಯೋವನ್ನು ಶೇರ್​ ಮಾಡಿ ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಮುಂದುವರಿದು ಕ್ಯಾಪ್ಶನ್​ ಬರೆದುಕೊಂಡಿರುವ ಅವರು, "ಇಂದಿನ ದಿನ ಆಹ್ಲಾದಕರವಾಗಿದೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​ ಫುಲ್​ ಮನರಂಜನೆಯನ್ನು ನೀಡುತ್ತಿದ್ದರು. ನಿಮ್ಮೊಂದಿಗೆ ಹೋಳಿಯನ್ನು ಆಚರಿಸಿದ್ದು ನಿಜಕ್ಕೂ ಖುಷಿಯಾಯಿತು" ಎಂದು ನಟಿ ಹೇಳಿದ್ದಾರೆ. ಜೊತೆಗೆ ಮಳೆಯಾಗದೇ, ಬಿಸಿಲನ್ನೇ ನೀಡಿದ ಸೂರ್ಯನಿಗೆ ಕೃತಜ್ಞತೆ ಸಲ್ಲಿಸಿದರು.

ನಟಿ ಫೋಟೋ ಮತ್ತು ವಿಡಿಯೋವನ್ನು ಕೈ ಬಿಟ್ಟ ಕೂಡಲೇ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರಿಗೆ ಹೋಳಿ ಶುಭಾಶಯಗಳನ್ನು ಕಮೆಂಟ್​ ಮೂಲಕ ಕೋರಿದರು. "ಅವ್​, ಸೆಲೆಬ್ರೇಟಿಂಗ್ ವಿತ್ ಪ್ರಿ ಮತ್ತು ನಿಕ್... ಅದ್ಭುತ!" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಜೊತೆಗೆ ಫ್ಯಾನ್ಸ್​ಗಳು ಕೆಂಪು ಹೃದಯ ಮತ್ತು ಫೈರ್​ ಎಮೋಜಿಯೊಂದಿಗೆ ಕಾಮೆಂಟ್​ ವಿಭಾಗವನ್ನು ತುಂಬಿದರು. ಜೊತೆಗೆ ಎಲ್ಲರೂ ಜೊತೆಯಾಗಿ ಹೋಳಿ ಆಚರಿಸಿದ್ದಕ್ಕೆ ಅಭಿಮಾನಿಗಳು ತಮ್ಮ ಖುಷಿ ವ್ಯಕ್ತಪಡಿಸಿದರು.

ಇದನ್ನೂ ಓದಿ:ರಾಮ್ ಪೋತಿನೇನಿ ಜೊತೆ ತೆರೆ ಹಂಚಿಕೊಂಡ ಸಾಯಿ ಎಂ ಮಂಜ್ರೇಕರ್

ಏತನ್ಮಧ್ಯೆ, ಪ್ರಿಯಾಂಕಾ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಪತಿ ನಿಕ್ ಜೊತೆಗಿನ ಹೋಳಿ ಆಚರಣೆಯ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋವನ್ನು ಹಂಚಿಕೊಂಡ ನಟಿ, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ 2018 ರಲ್ಲಿ ರಾಜಸ್ಥಾನದಲ್ಲಿ ವಿವಾಹವಾದರು. ಕಳೆದ ಜನವರಿಯಲ್ಲಿ, ದಂಪತಿ ತಮ್ಮ ಮಗಳು ಮಾಲ್ಟಿ ಮೇರಿ ಚೋಪ್ರಾ ಜೋನಾಸ್ ಅವರನ್ನು ಬಾಡಿಗೆ ಮೂಲಕ ಸ್ವಾಗತಿಸಿದರು.

ಸಿನಿಪ್ರಿಯರ ಮೆಚ್ಚುಗೆ ಗಳಿಸಿದ ಸಿಟಾಡೆಲ್​: ಗ್ಲೋಬಾಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ನಟನೆಯ ಬಹು ನಿರೀಕ್ಷಿತ ಸರಣಿ 'ಸಿಟಾಡೆಲ್​' ಫಸ್ಟ್​ ಲುಕ್​ನಿಂದಲೇ ಕ್ರೇಜ್​ ಹೆಚ್ಚಿಸಿಕೊಂಡಿತ್ತು. ಇದೀಗ ಟ್ರೇಲರ್​ ರಿಲೀಸ್​ ಆದ ಮೇಲಂತೂ ಮತ್ತಷ್ಟು ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಸಿಟಾಡೆಲ್​ ಟ್ರೇಲರ್​ನಲ್ಲಿ ಬಾಲಿವುಡ್​ ತಾರೆ ಪ್ರಿಯಾಂಕಾ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಸಿಟಾಡೆಲ್ ಸೀರಿಸ್​​ ರುಸ್ಸೋ ಬ್ರದರ್ಸ್‌ನ ಎಜಿಬಿಒ ಬ್ಯಾನರ್‌ನಿಂದ ರೆಡಿಯಾಗಿದೆ. ಏಪ್ರಿಲ್ 28ರಂದು ಪ್ರೈಮ್ ವಿಡಿಯೋದಲ್ಲಿ ಎರಡು ಸಂಚಿಕೆಗಳೊಂದಿಗೆ ಮೊದಲ ಪ್ರದರ್ಶನಗೊಳ್ಳಲಿದೆ. ಉಳಿದ ಸಂಚಿಕೆಗಳು ಪ್ರತಿ ಶುಕ್ರವಾರದಂದು ಮೇ. 26 ರವರೆಗೆ ವಾರಕ್ಕೊಮ್ಮೆ ಪ್ರಸಾರವಾಗಲಿದೆ.

ಇದನ್ನೂ ಓದಿ:ಕೃತಿ ಸನೋನ್​ ಜೊತೆ ನಟಿಸುವ ಬಯಕೆ ವ್ಯಕ್ತಪಡಿಸಿದ ರಣಬೀರ್​ ಕಪೂರ್

ABOUT THE AUTHOR

...view details