ಕರ್ನಾಟಕ

karnataka

ನಿಶ್ಚಿತಾರ್ಥಕ್ಕಾಗಿ ಮಾಲ್ಡೀವ್ಸ್‌ಗೆ ಹಾರಲಿದ್ದಾರಾ 'ಆದಿಪುರುಷ್' ಜೋಡಿ ಕೃತಿ - ಪ್ರಭಾಸ್?!

By

Published : Feb 8, 2023, 3:32 PM IST

ನಟಿ ಕೃತಿ ಸನೊನ್ ಮತ್ತು ನಟ​ ಪ್ರಭಾಸ್ ಡೇಟಿಂಗ್​ ವದಂತಿ ಜೋರಾಗಿಯೇ ಕೇಳಿ ಬರುತ್ತಿದೆ. ಆದರೆ ಈ ವದಂತಿಗಳನ್ನು ಪ್ರಭಾಸ್ ತಂಡ ತಳ್ಳಿ ಹಾಕಿದೆ.

Prabhas Kriti Sanon engagement Rumors
ಕೃತಿ ಸನೊನ್​ ಪ್ರಭಾಸ್ ಡೇಟಿಂಗ್​ ವದಂತಿ

ಬಾಲಿವುಡ್​​ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ವಿವಾಹದ ನಂತರ ಅಭಿಮಾನಿಗಳೀಗ 'ಆದಿಪುರುಷ್' ಸಿನಿಮಾ ತಾರೆಯರಿಂದ ಶುಭ ಸುದ್ದಿಗೆ ಕಾಯುತ್ತಿದ್ದಾರೆ. ಬಾಲಿವುಡ್​ ಬೆಡಿಕೆ ನಟಿ ಕೃತಿ ಸನೊನ್ ಮತ್ತು ಸೌತ್​ ಸೂಪರ್​ ಸ್ಟಾರ್​ ಪ್ರಭಾಸ್ ಅವರ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು, ಅಂದರೆ ಹಸೆಮಣೆ ಏರಲು ಸಿದ್ಧರಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಜೋಡಿ ತಮ್ಮ ನಿಶ್ಚಿತಾರ್ಥಕ್ಕಾಗಿ ಮಾಲ್ಡೀವ್ಸ್‌ಗೆ ಹಾರಲಿದ್ದಾರೆ ಎಂಬ ಗುಸುಗುಸು ಶುರುವಾಗಿದೆ.

ಪ್ರಭಾಸ್ - ಕೃತಿ ಸನೊನ್ ನಿಶ್ಚಿತಾರ್ಥ: ವರದಿಗಳ ಪ್ರಕಾರ, ವದಂತಿಗಳ ಲವ್ ಬರ್ಡ್ಸ್ ಮುಂದಿನ ವಾರದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ವಿಷಯವನ್ನು ಸ್ವಯಂ ಘೋಷಿತ ವಿಮರ್ಶಕ ಉಮೈರ್ ಸಂಧು (Umair Sandhu) ಬಹಿರಂಗಪಡಿಸಿದ ನಂತರ ಪ್ರಭಾಸ್ ಮತ್ತು ಕೃತಿ ಅವರ ನಿಶ್ಚಿತಾರ್ಥದ ವದಂತಿ ಜೋರಾಗಿ ಹರಡತೊಡಗಿದೆ. ಮಾಲ್ಡೀವ್ಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಉಮೈರ್ ಸಂಧು ತಿಳಿಸಿದ್ದಾರೆ.

ಉಮೈರ್ ಸಂಧು ಟ್ವೀಟ್:ನಟ ಪ್ರಭಾಸ್ ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಯ ಮದುವೆಯನ್ನು ನೋಡಲು ಕಾತರದಿಂದ ಕಾಯುತ್ತಿರುವ ಈ ಸಂದರ್ಭ ಉಮೈರ್ ಅವರ ಟ್ವೀಟ್ ವೈರಲ್ ಆಗಿದೆ. ಕೃತಿ ಸನೊನ್ ಮತ್ತು ಪ್ರಭಾಸ್ ಜೋಡಿಯನ್ನು ಪ್ರೀತಿಯಿಂದ ಪ್ರಕೃತಿ (PraKriti) ಎಂದು ಕರೆಯುವ ಅಭಿಮಾನಿಗಳು ನಿಶ್ಚಿತಾರ್ಥದ ಅಧಿಕೃತ ಘೋಷಣೆಗೆ ಕಾಯುತ್ತಿದ್ದಾರೆ.

ಪ್ರಭಾಸ್ ಆಪ್ತರ ಮಾಹಿತಿ:ಆದರೆ ಪ್ರಭಾಸ್ ಆಪ್ತರ ಪ್ರಕಾರ, ಉಮೈರ್ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪ್ರಭಾಸ್ ಮತ್ತು ಕೃತಿ ನಿಶ್ಚಿತಾರ್ಥದ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ. ಆ ಜೋಡಿಯದ್ದು ಸ್ನೇಹ, ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಪ್ರಭಾಸ್ ತಂಡ ಹೇಳಿದೆ.

ನಟಿ ಕೃತಿ ಸನೊನ್ ಮತ್ತು ನಟ​ ಪ್ರಭಾಸ್ ಓಂ ರಾವುತ್ ಅವರ ಮುಂಬರುವ ಚಿತ್ರ ಆದಿಪುರುಷ್​​ನಲ್ಲಿ ತೆರೆ ಹಂಚಿಕೊಂಡಿದ್ದಾರೆ. ರಾಮಾಯಣ ಆಧಾರಿತ ಈ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಕೃತಿ ಸನೊನ್ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಚಿತ್ರ ಸೆಟ್ಟೇರಿದಾಗಿನಿಂದ ಕೃತಿ ಮತ್ತು ಪ್ರಭಾಸ್​ ಪ್ರೀತಿಸುತ್ತಿರಬಹುದು ಎಂಬ ಊಹಾಪೋಹಗಳು ಎದ್ದಿವೆ. ಅಲ್ಲದೇ ರಿಯಾಲಿಟಿ ಶೋ ಝಲಕ್ ದಿಖ್ಲಾ ಜಾ ನಲ್ಲಿ ಭೇಡಿಯಾ ಸಿನಿಮಾ ಪ್ರಚಾರದ ವೇಳೆ ನಡ ವರುಣ್ ಧವನ್ ಕೂಡ ಇವರಿಬ್ಬರ ಪ್ರೀತಿ ಬಗ್ಗೆ ಸುಳಿವು ನೀಡಿದ್ದರು. ಅದಾದ ನಂತರ ಕೃತಿ ಮತ್ತು ಪ್ರಭಾಸ್ ಡೇಟಿಂಗ್ ವದಂತಿ ಹೆಚ್ಚಿದೆ.

ಇದನ್ನೂ ಓದಿ:ಪ್ರಭಾಸ್ ಜತೆ ಮದುವೆಗೆ ಅವಕಾಶ ಸಿಕ್ಕರೆ ರೆಡಿ: ಕೃತಿ ಸನನ್ ಹೇಳಿಕೆಗೆ ಅಭಿಮಾನಿಗಳಲ್ಲಿ ದಿಗ್ಬ್ರಮೆ..!

ಇನ್ನೂ ಕೆಲ ದಿನಗಳ ಹಿಂದೆ ಕೃತಿ ಸನೊನ್ ಅವರ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಅದರಲ್ಲಿ ಅವಕಾಶ ಸಿಕ್ಕರೆ ಪ್ರಭಾಸ್ ಅವರೊಂದಿಗೆ ಮದುವೆಯಾಗುವುದಾಗಿ ಹೇಳಿದ್ದು ಅಭಿಮಾನಿಗಳ ಕುತೂಹಲಕ್ಕೆ ಕಾರಣರಾಗಿದ್ದರು. ಈ ಹಿನ್ನೆಲೆ ನಟಿ ಕೃತಿ ಸನೊನ್ ಮತ್ತು ನಟ​ ಪ್ರಭಾಸ್ ಅವರ ಡೇಟಿಂಗ್​ ವದಂತಿ ಜೋರಾಗಿಯೇ ಇದೆ. ಆದರೆ ಇವರಿಬ್ಬರು ಈ ಬಗ್ಗೆ ಅಧಿಕೃತವಾಗಿ ಏನೂ ಹೇಳಿಲ್ಲ. ಸ್ನೇಹಿತರಂತೆ ಕಾಣಿಸಿಕೊಂಡಿದ್ದಾರೆ.

ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ವಿವಾಹ ಆಗುವವರೆಗೂ ತಮ್ಮ ಪ್ರೀತಿಯನ್ನು ಎಲ್ಲೂ ಹೇಳಿಕೊಂಡಿರಲಿಲ್ಲ. ಹಾಗಾಗಿ ಕೃತಿ ಮತ್ತು ಪ್ರಭಾಸ್​ ಬಗ್ಗೆಯೂ ಏನೂ ಹೇಳಲು ಸಾಧ್ಯವಿಲ್ಲವೆಂದು ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ಓದಿ:ಸಪ್ತಪದಿ ತುಳಿದ ಸಿದ್ಧಾರ್ಥ್-ಕಿಯಾರಾ: ಬಾಲಿವುಡ್​ ತಾರಾ ಜೋಡಿ ಮದುವೆಯ ಸುಂದರ ಕ್ಷಣಗಳು ಇಲ್ಲಿವೆ

ABOUT THE AUTHOR

...view details