ಕರ್ನಾಟಕ

karnataka

'ಬಾಹುಬಲಿ 2' ದಾಖಲೆ ಪುಡಿಗಟ್ಟುವತ್ತ ಗುರಿ ಇಟ್ಟ 'ಪಠಾಣ್​'!

By

Published : Feb 17, 2023, 6:39 PM IST

ಜನವರಿ 25ರಂದು ತೆರೆಕಂಡ ಪಠಾಣ್​ ಚಿತ್ರ ಜಗತ್ತಿನಾದ್ಯಂತ ಒಟ್ಟು 976 ಕೋಟಿ ರೂಪಾಯಿ ಗಳಿಸಿದೆ.

Pathaan to break baahubali 2 record
ಬಾಹುಬಲಿ 2 ದಾಖಲೆ ಬ್ರೇಕ್​ ಮಾಡಲಿರುವ ಪಠಾಣ್​

ಬಾಲಿವುಡ್ ಬಹುಬೇಡಿಕೆಯ ನಟರಾದ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಹಾಂ ನಟನೆಯ ಪಠಾಣ್​ ಸಿನಿಮಾ ಕ್ರೇಜ್​ ಕಡಿಮೆ ಆಗಿಲ್ಲ. ಭರ್ಜರಿ ಕಲೆಕ್ಷನ್​ ಮೂಲಕ ದಾಖಲೆಗಳನ್ನು ಪುಡಿಗಟ್ಟುತ್ತಿದೆ. ಇದೀಗ ಮತ್ತೊಂದು ದೊಡ್ಡ ದಾಖಲೆ ಮಾಡಲು ಸಿನಿಮಾ ಸಜ್ಜಾಗಿದೆ. ಇನ್ನೂ ನಾಲ್ಕು ಕೋಟಿ ರೂ ಕಲೆಕ್ಷನ್​ ಆದ್ರೆ ಸೌತ್​ ಸೂಪರ್​ ಹಿಟ್​ ಸಿನಿಮಾ ಬಾಹುಬಲಿ 2 ದಾಖಲೆ ಬ್ರೇಕ್​ ಆಗಲಿದೆ. ​​​

ಇಂದು ಪಠಾಣ್‌ ಚಿತ್ರ ತಯಾರಕರು ತಮ್ಮ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಲೇಟೆಸ್ಟ್‌ ಸುದ್ದಿ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಯಶ್ ರಾಜ್ ಫಿಲ್ಮ್ಸ್ (YRF), ಚಿತ್ರವು 23 ದಿನಗಳಲ್ಲಿ ವಿಶ್ವದಾದ್ಯಂತ 976 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಬಹಿರಂಗಪಡಿಸಿದೆ.

ಯಶ್ ರಾಜ್ ಫಿಲ್ಮ್ಸ್ ಪ್ರಕಾರ, ಭಾರತದಲ್ಲಿ 505.85 ಕೋಟಿ ರೂಪಾಯಿ ನೆಟ್​ ಕಲೆಕ್ಷನ್​ (ನಿವ್ವಳ) ಮಾಡಿದೆ. ಆದರೆ ದೇಶೀಯ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್​​ 609 ಕೋಟಿ ರೂಪಾಯಿಗೆ ತಲುಪಿದೆ. ಇನ್ನೂ ಹೊರದೇಶಗಳ ವ್ಯವಹಾರಕ್ಕೆ ಬಂದರೆ, ಪಠಾಣ್ 23 ದಿನಗಳಲ್ಲಿ 367 ಕೋಟಿ ರೂ. ಕಲೆಕ್ಷನ್​ ಮಾಡಿದೆ. 'ಬಾಹುಬಲಿ: ದಿ ಕನ್‌ಕ್ಲೂಷನ್' ಸಿನಿಮಾದ ಭಾರತದ ನೆಟ್​​ ಕಲೆಕ್ಷನ್ 510 ಕೋಟಿ ರೂ. ಆಗಿದ್ದು, ಈ ದಾಖಲೆ ಮುರಿಯುವತ್ತ ಪಠಾಣ್ ಮುನ್ನುಗ್ಗುತ್ತಿದೆ.

ಪಠಾಣ್​​ ಟಿಕೆಟ್ ದರವನ್ನು 110 ರೂಪಾಯಿಗೆ ಇಳಿಸಿರುವುದರಿಂದ ಬಾಕ್ಸ್ ಆಫೀಸ್ ಕಲೆಕ್ಷನ್​​ನಲ್ಲಿ ನಾಳೆ ಏರಿಳಿತ ಗುರುತಿಸಬಹುದು. ಚಿತ್ರದ ದೊಡ್ಡ ಯಶಸ್ಸನ್ನು ಆಚರಿಸಲು ಚಿತ್ರ ತಯಾರಕರು ಟಿಕೆಟ್ ದರ ಕಡಿತಗೊಳಿಸಿದ್ದಾರೆ. ಆದಾಗ್ಯೂ, ಇಂದು ಎರಡು ಬಹುನಿರೀಕ್ಷಿತ ಚಲನಚಿತ್ರಗಳಾದ ಕಾರ್ತಿಕ್ ಆರ್ಯನ್‌ನ ಶೆಹಜಾದಾ ಮತ್ತು ಹಾಲಿವುಡ್​ನ 'ಆಂಟ್-ಮ್ಯಾನ್ ಮತ್ತು ದಿ ವಾಸ್ಪ್: ಕ್ವಾಂಟುಮೇನಿಯಾ ತೆರೆ ಕಂಡಿದ್ದು, ಸಿನಿಮಾಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಅಲ್ಲದೇ ಶೆಹಜಾದಾ ಬಿಡುಗಡೆಯಾದ ಕೆಲ ಹೊತ್ತಿನಲ್ಲೇ ದೊಡ್ಡ ಟಿಕೆಟ್​ ಆಫರ್​ ಕೂಡ ಕೊಟ್ಟಿದೆ. ಬೈ ಒನ್​ ಗೆಟ್​ ಒನ್​ ಟಿಕೆಟ್​ ಆಫರ್​​ ಅನ್ನು​ ಶೆಹಜಾದಾ ನೀಡಿದೆ.

ಇದನ್ನೂ ಓದಿ:ಹಿಂದೂ, ಕ್ರಿಶ್ಚಿಯನ್ ಪದ್ಧತಿಯಂತೆ ಕ್ರಿಕೆಟಿಗ ಪಾಂಡ್ಯ ಮರುಮದುವೆ: ಫೋಟೋಗಳಲ್ಲಿ ನೋಡಿ

ಶಾರುಖ್​ ಖಾನ್​ ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ಹಿಂದಿ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ರೊಮ್ಯಾಂಟಿಕ್ ಹೀರೋ ಎಂದೇ ಖ್ಯಾತಿ ಗಳಿಸಿದ್ದಾರೆ. ಆ್ಯಕ್ಷನ್​ ಹೀರೋ ಆಗಬೇಕೆಂದು ಕನಸು ಹೊತ್ತು ಬಂದ ಶಾರುಖ್​​ ಆಗಿದ್ದು ಮಾತ್ರ ರೊಮ್ಯಾಂಟಿಕ್ ಹೀರೋ, ಲವರ್​ ಬಾಯ್​. ಆದ್ರೆ ಪಠಾಣ್‌ ಚಿತ್ರದಲ್ಲಿ ಸಂಪೂರ್ಣ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಮೆಚ್ಚಿನ ನಟ ಯಾವುದಕ್ಕೂ ಕಮ್ಮಿ ಇಲ್ಲ ಎಂದು ಸಾಬೀತು ಪಡಿಸುತ್ತಿದ್ದಾರೆಂದು ಅಭಿಮಾನಿಗಳು ಹೇಳುತ್ತಿದ್ದಾರೆ. ರಗಡ್​ ಲುಕ್​​, ಮೈನವಿರೇಳಿಸುವಂಥ ಸಾಹಸಮಯ ದೃಶ್ಯಗಳೊಂದಿಗೆ ಅಭಿಮಾನಿಗಳ ಖುಷಿ ಹೆಚ್ಚಿಸಿದ್ದಾರೆ.

ಇದನ್ನೂ ಓದಿ:'ರಿಷಬ್​ಗಾಗಿ ಪ್ರಾರ್ಥಿಸುತ್ತಿರುವೆ': ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾ

ABOUT THE AUTHOR

...view details