ಕರ್ನಾಟಕ

karnataka

ಒಟಿಟಿಯಲ್ಲಿ 'ಘೋಸ್ಟ್​' ಹವಾ; ಶಿವಣ್ಣನ ಮುಂದಿನ ಸಿನಿಮಾದಲ್ಲಿ ನಾನಿ ನಟನೆ

By ETV Bharat Karnataka Team

Published : Dec 7, 2023, 6:20 PM IST

Nani to act in Shivarajkumar's next movie: ಒಟಿಟಿ ಫ್ಲಾಟ್​ಫಾರ್ಮ್​ ಜೀ5ನಲ್ಲಿ 'ಘೋಸ್ಟ್​' ಸಿನಿಮಾ ಭರ್ಜರಿ ವೀಕ್ಷಣೆ ಪಡೆಯುತ್ತಿದೆ. ಈ ಬಗ್ಗೆ ಸಂತಸ ಹಂಚಿಕೊಳ್ಳುವುದರ ಜೊತೆಗೆ, ನಟ ಶಿವರಾಜ್​ ಕುಮಾರ್​ ತಮ್ಮ ಮುಂದಿನ ಸಿನಿಮಾಗಳ ಬಗ್ಗೆಯೂ ಮಾಹಿತಿ ನೀಡಿದರು. ನ್ಯಾಚುರಲ್​ ಸ್ಟಾರ್​ ನಾನಿ ಅವರೊಂದಿಗೂ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.

Natural star nani is acting in Shivarajkumar next movie
ಶಿವಣ್ಣನ ಮುಂದಿನ ಸಿನಿಮಾದಲ್ಲಿ ನಾನಿ

ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೇ, ಒಟಿಟಿಯಲ್ಲೂ ಕನ್ನಡ ಸಿನಿಮಾಗಳ ಹವಾ ಜೋರಾಗಿದೆ. ಇದೀಗ ನಟ ಶಿವರಾಜ್​ ಕುಮಾರ್ ನಟನೆಯ 'ಘೋಸ್ಟ್​' ಥಿಯೇಟರ್​ನಲ್ಲಿ ಮಾತ್ರವಲ್ಲದೇ, ಒಟಿಟಿ ಫ್ಲಾಟ್​ಫಾರ್ಮ್​ ಜೀ5ನಲ್ಲಿ ಭರ್ಜರಿ ವೀಕ್ಷಣೆ ಪಡೆಯುತ್ತಿದ್ದು, ಮಿಲಿಯನ್‌ಗಟ್ಟಲೆ ಜನರು ನೋಡಿ ಮೆಚ್ಚಿಕೊಂಡಿದ್ದಾರೆ.

ಅಕ್ಟೋಬರ್​ 19ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದ 'ಘೋಸ್ಟ್​'​, ನವೆಂಬರ್​ 17ರಂದು ಒಟಿಟಿಗೆ ಬಂತು. ಪ್ರೇಕ್ಷಕರ ಆಯ್ಕೆಗೆ ಅನುಗುಣವಾಗಿ ಜೀ5ನಲ್ಲಿ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ಲಭ್ಯವಿದೆ. ಈವರೆಗೆ ಚಿತ್ರ ಒಟಿಟಿಯಲ್ಲಿ 200 ಮಿಲಿಯನ್​ ಸ್ಟ್ರೀಮಿಂಗ್​ ಕಂಡಿದ್ದು, ಈ ಮೂಲಕ ದಾಖಲೆ ಬರೆದಿದೆ. ಈ​ ಬಗ್ಗೆ ಶಿವಣ್ಣ ಹಾಗೂ ನಿರ್ದೇಶಕ ಶ್ರೀನಿ ಸಂತಸ ಹಂಚಿಕೊಂಡಿದ್ದಾರೆ.

ಶಿವಣ್ಣ ಜೊತೆ ನಾನಿ: ಈ ವೇಳೆ ಶಿವರಾಜ್​ ಕುಮಾರ್​ ಅವರು ತಮ್ಮ ಕೈಯಲ್ಲಿರುವ ಸಾಲು ಸಾಲು ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದರು. ಘೋಸ್ಟ್​ ಪಾರ್ಟ್​ 2, ಭೈರತಿ ರಣಗಲ್​ ಚಿತ್ರಗಳ ಬಗ್ಗೆ ಅಪ್‌ಡೇಟ್​ ನೀಡಿದ ಅವರು, ತಮ್ಮ ಮುಂದಿನ ಸಿನಿಮಾದಲ್ಲಿ ನ್ಯಾಚುರಲ್​ ಸ್ಟಾರ್​ ನಾನಿ ನಟಿಸುತ್ತಿರುವುದಾಗಿ ಖಚಿತಪಡಿಸಿದರು. ಜೊತೆಗೆ, ಭಜರಂಗಿ 2, ವೇದ ಹಾಗೂ ಘೋಸ್ಟ್​ ಈ ಮೂರು ಸಿನಿಮಾಗಳು ಒಟಿಟಿಯಲ್ಲಿ 100 ಮಿಲಿಯನ್​ ಸ್ಟ್ರೀಮಿಂಗ್​ ಕಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

"ಜೀ5ನಲ್ಲಿ ಇದು ಮೂರನೇ ಕನೆಕ್ಷನ್. ಭಜರಂಗಿ 2, ವೇದ ಮತ್ತು ಘೋಸ್ಟ್. ಮೂರು ಸಿನಿಮಾ ತುಂಬಾ ಚೆನ್ನಾಗಿ ಸ್ಟ್ರೀಮಿಂಗ್ ಆಗಿರುವುದರಿಂದ ನಮಗೆ ಜೀ ಜೊತೆಗಿನ ಕನೆಕ್ಷನ್ ಜಾಸ್ತಿ ಇದೆ ಎಂದು ಅನಿಸುತ್ತದೆ. ಕನ್ನಡ ಡಬ್ ಸಿನಿಮಾ ನೋಡುತ್ತಾರೆ. ಆದರೆ, ಕನ್ನಡ ಸಿನಿಮಾ ನೋಡೋದು ಕಡಿಮೆ. ಸದ್ಯ ಅದೆಲ್ಲ ಬದಲಾಗಿದೆ. ತಮಿಳುನಾಡು ಹಾಗೂ ಕೇರಳದಲ್ಲಿ ಘೋಸ್ಟ್​ ರಿಲೀಸ್ ಮಾಡಿದ್ದರು. ಅಲ್ಲೆಲ್ಲ ಚೆನ್ನಾಗಿಯೇ ರೆಸ್ಪಾನ್ಸ್ ಸಿಕ್ಕಿದೆ" ಎಂದು ಶಿವಣ್ಣ ಖುಷಿ ಹಂಚಿಕೊಂಡರು.

ಇತ್ತೀಚೆಗೆ 'ಹಾಯ್ ನಾನ್ನ' ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದ ನಾನಿ, ಶಿವಣ್ಣನ ಮನೆಗೆ ಭೇಟಿ ಕೊಟ್ಟಿದ್ದರು. ಶಿವಣ್ಣ ಮತ್ತು ನಾನಿ ಭೇಟಿ ಬೆನ್ನಲ್ಲೇ ಇವರಿಬ್ಬರು ಜೊತೆಗೆ ಸಿನಿಮಾ ಮಾಡುತ್ತಾರೆ ಎಂಬ ಗುಲ್ಲೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಣ್ಣ, "ಸಿನಿಮಾವೊಂದಕ್ಕೆ ಗೆಸ್ಟ್ ಅಪಿಯರೆನ್ಸ್ ಮಾಡಬೇಕು ಎಂದು ಫೋನ್ ಮಾಡಿದ್ದೆ. ತಕ್ಷಣ ಓಕೆ ಎಂದಿದ್ದರು. ನಾನೇ ಅಲ್ಲಿಗೆ ಬರುತ್ತೇನೆ ಎಂದಿದ್ದೆ. ಇಲ್ಲ ನಾನೇ ಅಲ್ಲಿಗೆ ಬರುತ್ತೇನೆ. ಆಮೇಲೆ ಅದು ಬೇಡ ಅನಿಸಿತು. ಇನ್ನೊಮ್ಮೆ ಇಬ್ಬರು ಒಟ್ಟಿಗೆ ಸಿನಿಮಾ ಮಾಡೋಣ ಅಂದುಕೊಂಡಿದ್ದೇವೆ" ಎಂದು ತಿಳಿಸಿದರು.

ವಿದೇಶದಲ್ಲಿಯೂ ಘೋಸ್ಟ್​ಗೆ ಸಿಕ್ಕ ರೆಸ್ಪಾನ್ಸ್​ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀನಿ ಹಾಗೂ ಶಿವಣ್ಣ, "ಆಸ್ಟ್ರೇಲಿಯಾ, ಅಮೆರಿಕ, ಯುಕೆಯಲ್ಲಿ ಘೋಸ್ಟ್​ಗೆ ತುಂಬಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಆ ಸಮಯದಲ್ಲಿ ಸ್ವಲ್ಪ ದೊಡ್ಡ ದೊಡ್ಡ ಸಿನಿಮಾಗಳೇ ಬಂತು. ಆದರೂ, ನಮ್ಮ ಚಿತ್ರ ಅಲ್ಲಿ ಚೆನ್ನಾಗಿಯೇ ಓಡಿತು" ಎಂದು ಸಂತಸದಿಂದ ಹೇಳಿದರು.

ಇದನ್ನೂ ಓದಿ:ಓಟಿಟಿಗೆ ಶಿವಣ್ಣನ 'ಘೋಸ್ಟ್​' ಎಂಟ್ರಿ; ನವೆಂಬರ್​ 17 ರಿಂದ ಜೀ 5ನಲ್ಲಿ ನೋಡಿ..

ABOUT THE AUTHOR

...view details