ಮುಂಬೈ:ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರು ಸಿನಿಮಾ ನಿರ್ಮಾಪಕ ಅರುಣ್ ಗೋಪಾಲನ್ ಅವರ ಮುಂದಿನ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಟೆಹ್ರಾನ್'ಗೆ ಇತ್ತೀಚೆಗೆ ಸೇರ್ಪಡೆಯಾಗಿದ್ದಾರೆ. ನಟ ಜಾನ್ ಅಬ್ರಹಾಂ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಮಾನುಷಿ ಮತ್ತು ಜಾನ್ ಇಬ್ಬರೂ ಈ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
2017 ರ ವಿಶ್ವ ಸುಂದರಿ ನಮ್ಮ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ನಾನು ತುಂಬಾ ಎಕ್ಸೈಟೆಡ್ ಆಗಿದ್ದೇನೆ. ಅವರು ತುಂಬಾ ಪ್ರತಿಭಾವಂತೆ ಎನ್ನುವ ಮೂಲಕ 'ಧೂಮ್' ನಟ ಮಾನುಷಿಯನ್ನು ಸ್ವಾಗತಿಸಿದರು. ನಾನು 'ಟೆಹ್ರಾನ್' ಚಿತ್ರತಂಡ ಸೇರಲು ತುಂಬಾ ಉತ್ಸುಕನಾಗಿದ್ದೇನೆ. ಈ ಪ್ರಯಾಣವು ನಿಜವಾಗಿಯೂ ವಿಶೇಷವಾಗಿರಲಿದೆ ಎಂದು ಮಾನುಷಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.