ಕರ್ನಾಟಕ

karnataka

ಮಲ್ಪೆ ಕಡಲ ತೀರದಲ್ಲಿ 'ಲವ್ ಲಿ' ವಸಿಷ್ಠ ಸಿಂಹ: ಮುಂದಿನ ಶೂಟಿಂಗ್ ಲಂಡನ್​ನಲ್ಲಿ

By

Published : Dec 16, 2022, 7:49 PM IST

ಪಡುಕೆರೆಯಲ್ಲಿ ಲವ್ ಲಿ ಸಿನಿಮಾ ಶೂಟಿಂಗ್​ ನಡೆಯುತ್ತಿದೆ. ಜನವರಿ ಮೊದಲ ವಾರದಲ್ಲಿ ಲಂಡನ್​​ನಲ್ಲಿ ಚಿತ್ರೀಕರಣ ನಡೆಯಲಿದೆ.

Love Lee movie shooting
ಮಲ್ಪೆ ಕಡಲ ತೀರದಲ್ಲಿ ಲವ್ ಲಿ ಶೂಟಿಂಗ್

ಪಡುಕೆರೆಯಲ್ಲಿ ಲವ್ ಲಿ ಸಿನಿಮಾ ಶೂಟಿಂಗ್

ಕನ್ನಡ ಚಿತ್ರರಂಗದ ಅಂಗಳದಲ್ಲಿ ವಸಿಷ್ಠ ಸಿಂಹ ಅಭಿನಯದ ಲವ್ ಲಿ ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಿನಿರಸಿಕರ ಗಮನ ಸೆಳೆಯುತ್ತಲೇ ಇದೆ. ಸಿಲಿಕಾನ್ ಸಿಟಿಯಲ್ಲಿ ಮೊದಲ ಹಾಗೂ ಎರಡನೇ ಶೆಡ್ಯೂಲ್​ನ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಉಡುಪಿಯ ಮಲ್ಪೆಯ ಪಡುಕೆರೆಯಲ್ಲಿ ಮೂರನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

ಲವ್ ಲಿ ಚಿತ್ರೀಕರಣಕ್ಕೆಂದೇ ಪಡುಕರೆಯ ಕಡಲ ತೀರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಮನೆ ಸೆಟ್​ ಅನ್ನು ನಿರ್ಮಾಣ ಮಾಡಲಾಗಿದೆ. ಕೇವಲ 25 ದಿನದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದ್ದು, ಕಳೆದ 10 ದಿನಗಳಿಂದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಸಿಷ್ಠ ಸಿಂಹ, ಸಾಧುಕೋಕಿಲ, ನಾಯಕಿ ಸ್ಟೆಫಿ ಪಟೇಲ್ ಸೇರಿದಂತೆ ಹಲವರು ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ.

ನಟ ವಸಿಷ್ಠ ಸಿಂಹ ಮಾತನಾಡಿ, ಇದೊಂದು ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ರೌಡಿಸಂ ಕಥಾಹಂದರ ಕೂಡ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಸಿನಿಮೀಯ ರೀತಿಯಲ್ಲಿ ಹೇಳಹೊರಟಿದ್ದೇವೆ. ಎಲ್ಲಾ ರೀತಿಯ ಭಾವನೆಗಳನ್ನು ಒಮ್ಮೆಲೆ ಕ್ಯಾರಿ ಮಾಡುವ ಅವಕಾಶ ಚಿತ್ರದಲ್ಲಿ ಸಿಕ್ಕಿದೆ. ಪಾತ್ರಕ್ಕೆ ಜೀವ ತುಂಬುವ ಕೆಲಸ ನಡೆಯುತ್ತಿದೆ. ಈ ಸಿನಿಮಾ ಸಿನಿಮಾಪ್ರಿಯರ ಮನಸ್ಸು ಗೆಲ್ಲುವುದರಲ್ಲಿ ಎರಡು ಮಾತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ದೇಶಕ ಚೇತನ್ ಕೇಶವ್ ಮಾತನಾಡಿ, ಇನ್ನೂ 7 ದಿನಗಳ ಚಿತ್ರೀಕರಣ ನಡೆಸಿದ್ರೆ ಶೇಕಡಾ 80ರಷ್ಟು ಸಿನಿಮಾ ಶೂಟಿಂಗ್ ಪೂರ್ಣಗೊಳ್ಳಲಿದೆ. ಲಂಡನ್​​ನಲ್ಲೂ ಚಿತ್ರೀಕರಣ ಮಾಡಬೇಕಿದೆ. ಜನವರಿ ಮೊದಲ ವಾರದಲ್ಲಿ ಚಿತ್ರತಂಡ ಲಂಡನ್​​​​​ಗೆ ತೆರಳಲಿದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ಇದನ್ನೂ ಓದಿ:ವೇದಿಕೆ ಮೇಲೆ ಬಿಗ್​​ ಬಿ ಪಾದ ಸ್ಪರ್ಶಿಸಿ ಗೌರವ ಸಲ್ಲಿಸಿದ ಕಿಂಗ್​ ಖಾನ್

ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಚಿತ್ರದ ಪ್ರಮುಖ ರೋಲ್​ನಲ್ಲಿ ಮಿಂಚಲಿದ್ದಾರೆ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ಸಾಧುಕೋಕಿಲ, ದತ್ತಣ್ಣ, ಮಾಳವಿಕಾ, ಶೋಭಾರಾಜ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ರವೀಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಕ್ಯಾಮರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಈ ಲವ್​ ಲಿ ಚಿತ್ರಕ್ಕಿದೆ.

ಇದನ್ನೂ ಓದಿ:ವಸಿಷ್ಠ ಸಿಂಹರ ಲವ್ ಲಿ ಸಿನಿಮಾ‌ ಅಡ್ಡಕ್ಕೆ ಸರ್​ಪ್ರೈಸ್ ಭೇಟಿ ಕೊಟ್ಟ ಭಾವಿ ಪತ್ನಿ

ABOUT THE AUTHOR

...view details