ಕರ್ನಾಟಕ

karnataka

ತೂಕ ಇಳಿಸಿಕೊಳ್ಳಲು ಮುಂದಾಗಿ ಜೀವಕ್ಕೆ ಕುತ್ತು.. ಗಾಯಕಿ ಲಿಸಾ ಮೇರಿ ಪ್ರೀಸ್ಲಿ ಸಾವಿನ ಕಾರಣ ಬಹಿರಂಗ!

By

Published : Jul 15, 2023, 2:31 PM IST

ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಗಾಯಕಿ ಲೀಸಾ ಮೇರಿ ಪ್ರೀಸ್ಲಿ ಅವರ ಸಣ್ಣ ಕರುಳಿನ ಕಾರ್ಯದಲ್ಲಿ ತೊಡಕುಂಟಾಗಿ ಸಾವನ್ನಪ್ಪಿದ್ದಾರೆ ಎಂಬುದು ಬಹಿರಂಗಗೊಂಡಿದೆ.

Lisa Mary Presley death
ಲಿಸಾ ಮೇರಿ ಪ್ರೀಸ್ಲಿ

ಗಾಯಕಿ ಲೀಸಾ ಮೇರಿ ಪ್ರೀಸ್ಲಿ (Lisa Marie Presley) ಕಳೆದ ಆರು ತಿಂಗಳ ಹಿಂದೆ ಕೊನೆಯುಸಿರೆಳೆದಿದ್ದರು. ಅವರ ಸಾವಿನ ಕಾರಣ ಇದೀಗ ಬಹಿರಂಗಗೊಂಡಿದೆ. ಗಾಯಕರಾಗಿದ್ದ ಎಲ್ವಿಸ್ ಪ್ರೀಸ್ಲಿ ಅವರ ಪುತ್ರಿ ಲೀಸಾ ಮೇರಿ ಪ್ರೀಸ್ಲಿ ಶಸ್ತ್ರಚಿಕಿತ್ಸೆಗೊಳಗಾದ ನಂತರ (bariatric surgery) ಸಾವನ್ನಪ್ಪಿದ್ದಾರೆ. ವರ್ಷಗಳ ಹಿಂದೆ ಮಾಡಿಸಿದ್ದ ಶಸ್ತ್ರಚಿಕಿತ್ಸೆಯು ಗಾಯಕಿಗೆ ತೀವ್ರ ತೊಡಕಾಗಿ ಪರಿಣಮಿಸಿದೆ ಎಂದು ಗುರುವಾರ ಬಿಡುಗಡೆಯಾದ ಶವಪರೀಕ್ಷೆ ವರದಿಯೊಂದು ತಿಳಿಸಿದೆ. ಈ ರೀತಿಯ ತೊಡಕುಗಳು ಅಪರೂಪವೆಂಬಂತೆ ಕಂಡುಬರುತ್ತದೆ. ತೂಕ ನಷ್ಟ ಶಸ್ತ್ರಚಿಕಿತ್ಸೆ ನಂತರದ ದಿನಗಳಲ್ಲಿ ಕೆಲವರಿಗೆ ಮಾತ್ರ ತೀವ್ರ ತೊಡಕಾಗಿ ಪರಿಣಮಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

54ರ ಹರೆಯದ ಗಾಯಕಿ, ಗೀತೆರಚನೆಗಾರ್ತಿ ಮತ್ತು ಎಲ್ವಿಸ್ ಪ್ರೀಸ್ಲಿಯ ಪುತ್ರಿ ಲೀಸಾ ಮೇರಿ ಪ್ರೀಸ್ಲಿ ಮನೆಯಲ್ಲಿದ್ದ ವೇಳೆ ಸರಿಯಾಗಿ ಸ್ಪಂದಿಸಲಿಲ್ಲ. ಗಾಯಕಿ ಸ್ಪಂದಿಸದಿರುವುದನ್ನು ಕಂಡು 2023ರ ಜನವರಿ 12 ರಂದು ಲಾಸ್ ಏಂಜಲೀಸ್​ನ ಆಸ್ಪತ್ರೆಗೆ ಸಾಗಿಸಲಾಯಿತು. ಆದ್ರೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಈ ಹಿಂದೆ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಸಣ್ಣ ಕರುಳಿನಲ್ಲಿ ತೊಡಕುಗಳು ಉಂಟಾಗಿ ಅವರು ಸಾವನ್ನಪ್ಪಿದ್ದಾರೆಂದು ಶವಪರೀಕ್ಷೆ ವರದಿ ಹೇಳಿದೆ. ಶಸ್ತ್ರಚಿಕಿತ್ಸೆಯ ನಂತರ ಆದ ಗಾಯಗಳು ಗಾಯಕಿಗೆ ಸಮಸ್ಯೆ ಉಂಟು ಮಾಡಿದೆ.

Bariatric surgery: ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗಳು ತೂಕ ನಷ್ಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಟ್ಟೆ ಅಥವಾ ಕರುಳಿನ ಭಾಗದ ಮೇಲೆ ಮಾಡುವ ಆಪರೇಶನ್​ ಆಗಿದೆ. ತೂಕನಷ್ಟಕ್ಕೆ ದಾರಿ ಮಾಡಿಕೊಡುವ ಇತರೆ ವಿಧಾನಗಳು ಕಾರ್ಯ ನಿರ್ವಹಿಸದಿದ್ದಾಗ, ಸ್ಥೂಲಕಾಯತೆಯ ಸಂದರ್ಭಗಳಲ್ಲಿ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ವಿಧಾನದ ಮೊರೆ ಹೋಗಲಾಗುತ್ತದೆ. ಹಲವು ವಿಧದ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗಳು ಲಭ್ಯವಿದೆ. ಇದರಲ್ಲಿ ಹೊಟ್ಟೆಯ ಒಂದು ಭಾಗವನ್ನು ಸಣ್ಣಗೊಳಿಸುವುದು ಅಥವಾ ಹೊಟ್ಟೆಯ ಒಂದು ಭಾಗವನ್ನು ಚಿಕ್ಕದಾಗಿಸಲು ಇದರ ಮೊರೆ ಹೋಗಲಾಗುತ್ತದೆ.

ಇದನ್ನೂ ಓದಿ:Ravindra Mahajani Death: ಹಿರಿಯ ನಟ ರವೀಂದ್ರ ಮಹಾಜನಿ ವಿಧಿವಶ.. ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಗಾಯಕಿ ಲೀಸಾ ಮೇರಿ ಪ್ರೀಸ್ಲಿ ಅವರು ಯಾವ ವಿಧಾನದ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದ್ದರೆಂಬುದು ಸ್ಪಷ್ಟವಾಗಿಲ್ಲ. ಆದರೂ ಇದು ಅತ್ಯಂತ ಸಾಮಾನ್ಯ ಕಾರ್ಯವಿಧಾನವಾಗಿರುವ ಸ್ಲೀವ್​ ಗ್ಯಾಸ್ಟ್ರೆಕ್ಟಮಿ (sleeve gastrectomy - ಹೊಟ್ಟೆಗೆ ಸಂಬಂಧಿಸಿದ ಸರ್ಜರಿ) ಅನ್ನು ಮಾಡಿಸಿಲ್ಲ ಎಂದು ತಜ್ಞರು ಭಾವಿಸಿದ್ದಾರೆ. 2021 ರಲ್ಲಿ ಸುಮಾರು 263,000 ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ ಎಂದು ಮೆಟಾಬಾಲಿಕ್ ಮತ್ತು ಬ್ಯಾರಿಯಾಟ್ರಿಕ್ ಸರ್ಜರಿಯ ಅಮೇರಿಕನ್ ಸೊಸೈಟಿಯ ಅಧ್ಯಕ್ಷರಾದ ಡಾ. ಮರೀನಾ ಕುರಿಯನ್ ಹೇಳಿದ್ದಾರೆ.

ಇದನ್ನೂ ಓದಿ:ನಟ ಮಾಸ್ಟರ್ ಆನಂದ್ ಪುತ್ರಿ ಹೆಸರು ಬಳಸಿ ಮೋಸದ ಆರೋಪ: ಆರೋಪಿ ಮಹಿಳೆ ಬಂಧನ

ಈ ಸರ್ಜರಿ ಎಷ್ಟು ಅಪಾಯಕಾರಿ? ಸಾಮಾನ್ಯವಾಗಿ ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ "ಬಹಳ ಸುರಕ್ಷಿತ" ಎಂದು ಮರೀನಾ ಕುರಿಯನ್ ತಿಳಿಸಿದರು. ಎಸ್​ಎಂಬಿಎಸ್​ ಮಾಹಿತಿ ಪ್ರಕಾರ, ಈ ಸರ್ಜರಿಗೊಳಗಾದ ಶೇ. 4ರಷ್ಟು ಜನರು ಸಮಸ್ಯೆ ಎದುರಿಸಬಹುದು ಮತ್ತು ಸಾವಿನ ಅಪಾಯ ಶೇ. 0.1ರಷ್ಟು ಮಂದಿ ಎದುರಿಸಬಹುದು. ಇದು ಪಿತ್ತಕೋಶದ ಶಸ್ತ್ರಚಿಕಿತ್ಸೆಗಿಂತ ಸುರಕ್ಷಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details