ಕರ್ನಾಟಕ

karnataka

ಹೊಸಬರ 'ಡೈಮಂಡ್ ಕ್ರಾಸ್' ಸಿನಿಮಾಗೆ ಸಾಥ್ ನೀಡಿದ ಹೆಬ್ಬುಲಿ

By

Published : Apr 23, 2022, 9:41 PM IST

"ನನ್ನ ಲೈಫಲಿ" ಚಿತ್ರದ ನಂತರ ನಿರ್ದೇಶಕ ರಾಮ್ ದೀಪ್ ನಿರ್ದೇಶಿಸುತ್ತಿರುವ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

Sudeep with diamond cross film team
ಡೈಮಂಡ್​ ಕ್ರಾಸ್​ ಸಿನಿಮಾ ತಂಡದೊಂದಿಗೆ ಸುದೀಪ್​

ಬೆಂಗಳೂರು: ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನ ಟ್ಯಾಲೆಂಟ್​ನಿಂದಲೇ ಸ್ಟಾರ್ ಡಮ್ ಹೊಂದಿರುವ ನಟ‌ ಕಿಚ್ಚ ಸುದೀಪ್. ತಾನು ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ಸುದೀಪ್ ಹೊಸ ಪ್ರತಿಭೆಗಳ ಸಿನಿಮಾಗಳಿಗೆ ಸಪೋರ್ಟ್ ಮಾಡ್ತಾನೆ ಇರ್ತಾರೆ. ಇದೀಗ ರೋಜರ್ ನಾರಾಯಣ್, ರಜತ್ ಅಣ್ಣಪ್ಪ ಅಭಿನಯಿಸಿರೋ ಡೈಮಂಡ್ ಕ್ರಾಸ್ ಸಿನಿಮಾ ಸಾಥ್ ನೀಡಿದ್ದಾರೆ.

ಹೌದು, ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಡೈಮಂಡ್ ಕ್ರಾಸ್ ಚಿತ್ರದ ಟ್ರೇಲರ್ ಅನಾವರಣ ಮಾಡುವ ಮೂಲಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಗುಡ್ ಲಕ್ ಹೇಳಿದರು. ಟ್ರೇಲರ್​ನಲ್ಲಿ ಕಲಾವಿದರ ಅಭಿನಯ ಗೊತ್ತಾಗುತ್ತಿಲ್ಲ. ಅದಕ್ಕೆ ಸಿನಿಮಾ ನೋಡಬೇಕು. ಆದರೆ ತಂತ್ರಜ್ಞರ ಕೈಚಳಕ ಎದ್ದು ಕಾಣುತ್ತಿದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ. ನಾಗತಿಹಳ್ಳಿ ಸರ್ ನನಗೆ ವಿಷ್ಣುವರ್ಧನ್ ಅವರ ಜೊತೆ ನಟಿಸಲು ಅವಕಾಶ ಕೊಟ್ಟವರು. ಅವರಿಗೆ ನನ್ನ ಅನಂತ ಧನ್ಯವಾದ ಎಂದರು ಕಿಚ್ಚ ಸುದೀಪ್.

ನಾನು ಒಂದು ಫೋನ್ ಮಾಡಿ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಕೊಡಬೇಕು ಎಂದು ಕೇಳಿದೆ ಅಷ್ಟೇ. ಆಯ್ತು ಅಂತ ಬಂದಿದ್ದಾರೆ ಕಿಚ್ಚ ಸುದೀಪ್. ಅವರಿಗೆ ಮೊದಲು ಧನ್ಯವಾದ. ಸುದೀಪ್ ಚಿತ್ರರಂಗದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದಿರುವ ವ್ಯಕ್ತಿ. ಅಂತಹವರು ಈ ಟ್ರೇಲರ್ ಬಿಡುಗಡೆ ಮಾಡಿದ್ದು ಸಂತೋಷ. ಈ ಚಿತ್ರದ ನಿರ್ದೇಶಕ ರಾಮ್ ದೀಪ್ ನನ್ನ ಅಕ್ಕನ ಮಗ.‌ ಸಂಗೀತ ನಿರ್ದೇಶಕ ಲೇಖನ್ ನನ್ನ ತಂಗಿಯ ಮಗ. ಚಿತ್ರದಲ್ಲಿ ಅಭಿನಯಿಸಿರುವ ಹಾಗೂ ಕಾರ್ಯನಿರ್ವಹಿಸಿರುವ ಬಹುತೇಕರು ನಮ್ಮ ಟೆಂಟ್ ಸಿನಿಮಾ ಶಾಲೆಯವರು. ಎಲ್ಲರ ಪ್ರಯತ್ನದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದರು ನಾಗತಿಹಳ್ಳಿ ಚಂದ್ರಶೇಖರ್.

ನಿರ್ದೇಶಕ ರಾಮ್ ದೀಪ್ ಮಾತನಾಡಿ, "ನನ್ನ ಲೈಫಲಿ" ಚಿತ್ರದ ನಂತರ ಈ ನಿರ್ದೇಶಿಸಿದ್ದೇನೆ. ಸೈಬರ್ ಕ್ರೈಮ್ ಕಥಾಹಂದರದ ಸಿನಿಮಾ ಇದು. ಈಗಿನ ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಹಾಗೂ ಕೆಟ್ಟದ್ದಕ್ಕೆ ಹೇಗೆ ಬಳಸಿಕೊಳ್ಳಬಹುದು? ಎಂಬುದನ್ನು ಚಿತ್ರದಲ್ಲಿ ತೋರಿಸಲು ಹೊರಟ್ಟಿದ್ದೇನೆ. ಸದ್ಯದಲ್ಲೇ ತೆರೆಗೆ ಬರಲಿದೆ ಎಂದರು. ರೋಜರ್ ನಾರಾಯಣ್, ರಜತ್ ಅಣ್ಣಪ್ಪ, ಮನು ಕೆ.ಎಂ ಹಾಗೂ ರೂಪಿಕಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಲೇಖನ್ ಸಂಗೀತ ನಿರ್ದೇಶನವಿದ್ದು, ಹಿನ್ನೆಲೆ ಸಂಗೀತ ಅನಿಶ್ ಚೆರಿಯನ್ ಅವರದು. ರಾಮಚಂದ್ರ ಬಾಬು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸಂತೋಷ್ ರಾಧಾಕೃಷ್ಣನ್ ಛಾಯಾಗ್ರಹಣ, ಸಂಕಲನ ಮಾಡಿದ್ದಾರೆ. ಮಹಾಲಿಂಗಪ್ಪ, ಬಸವರಾಜ ಗೌಡ, ದೀಪು ಎನ್. ಕುಮಾರ್, ಪ್ರಸನ್ನ ಕುಮಾರ್ ಹಾಗೂ ರಾಮಚಂದ್ರ ಬಾಬು "ಡೈಮಂಡ್ ಕ್ರಾಸ್" ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ಭಾಷೆಯ ಗಡಿ ಮೀರಿ ಫೇಮಸ್​ ಆದ ದಕ್ಷಿಣ ಭಾರತದ ಟಾಪ್ ​ನಟರಿವರು!!

ABOUT THE AUTHOR

...view details