ಕರ್ನಾಟಕ

karnataka

ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್: ರಿಷಬ್​ ಶೆಟ್ಟಿಗೆ ಅತ್ಯುತ್ತಮ ನಟ-ನಿರ್ದೇಶಕ ಪ್ರಶಸ್ತಿ

By ETV Bharat Karnataka Team

Published : Dec 7, 2023, 4:02 PM IST

'ಕರ್ನಾಟಕ ನಂದಿ ಚಲನಚಿತ್ರ ಪ್ರಶಸ್ತಿ' ಪ್ರದಾನ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ನಡೆಯಿತು.

Karnataka Nandi Film Award
ಕರ್ನಾಟಕ ನಂದಿ ಫಿಲ್ಮ್ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ 'ಕರ್ನಾಟಕ ನಂದಿ ಚಲನಚಿತ್ರ ಪ್ರಶಸ್ತಿ' ಪ್ರಾರಂಭವಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ನಡೆಯಿತು. ಹಿರಿಯ ನಟರಾದ ಶ್ರೀನಾಥ್, ಭಾರತಿ ವಿಷ್ಣುವರ್ಧನ್ ಅವರ ಜೀವಮಾನದ ಸಾಧನೆಗೆ ಲೈಫ್ ಟೈಮ್ ಅಚೀವ್​​​ಮೆಂಟ್ ಅವಾರ್ಡ್ ನೀಡಲಾಯ್ತು. ಡಿವೈನ್​ ಸ್ಟಾರ್​ಗೆ ಅತ್ಯುತ್ತಮ ನಟ-ನಿರ್ದೇಶಕ ಪ್ರಶಸ್ತಿ ಪ್ರದಾನ ಮಾಡಲಾಯ್ತು.

ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್

ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್ ಸಂಸ್ಥಾಪಕರುಗಳಾದ ನಿರ್ಮಾಪಕ ಭಾ. ಮಾ ಹರೀಶ್, ನಿರ್ಮಾಪಕ ನಂದಳಿಕೆ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ಈ ಕುರಿತು ಮಾಹಿತಿ ನೀಡಿ, ಕನ್ನಡದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆಯನ್ನು ಹುಟ್ಟು ಹಾಕಲಾಗಿದೆ. ಆ ಮೂಲಕ ನಮ್ಮ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದೆ. ಇದನ್ನೆಲ್ಲಾ ಮನಗಂಡು, ಚರ್ಚಿಸಿ ಮಂಡಳಿ ನಂದಿ ಪ್ರಶಸ್ತಿ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ನಂದಿ ಫಿಲ್ಮ್ ಪ್ರಶಸ್ತಿ ಪ್ರದಾನ ಸಮಾರಂಭ

ಕಾರ್ಯಕ್ರಮದ ಅತಿಥಿಗಳಾಗಿ ಕ್ರೇಜಿಸ್ಟಾರ್​ ವಿ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿ ಹಲವರು ಭಾಗಿಯಾಗಿದ್ದರು. ಶ್ರೀನಾಥ್, ಪ್ರೇಮ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಸೇರಿದಂತೆ ಸಾಕಷ್ಟು ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದು ಮೊದಲ ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್ ಆಗಿದ್ದು, ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ನಟ ರವಿಚಂದ್ರನ್ ಮಾತನಾಡಿ, ನಂದಿ ಪ್ರಶಸ್ತಿ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಪ್ರಶಸ್ತಿ ಬಹಳ ಭಾರವಾಗಿದೆ. ಅದು ನನಗೆ ಖುಷಿ ಕೊಟ್ಟಿತು. ನನ್ನಂಥ ಶಿವ ಭಕ್ತನಿಂದ ನಂದಿ ಪ್ರಶಸ್ತಿ ಕೊಡಿಸುತ್ತಿದ್ದೀರ. ಎಲ್ಲರ ಮನೆಗಳಿಗೂ ನಂದಿ ಸೇರುತ್ತದೆ ಎಂಬುದು ನನಗೆ ಖುಷಿ ಕೊಟ್ಟಿದೆ ಎಂದು ತಿಳಿಸಿದರು.

ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯ ಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಆದರೆ, ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಂಬಂಧವಿಲ್ಲ. ಎರಡೂ ಕೂಡ ಬೇರೆ ಬೇರೆ. ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ನಂದಿ ಅವಾರ್ಡ್ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್‌ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ ನಂದಿ ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ.

ಇದನ್ನೂ ಓದಿ:ಮಾನಸಿಕ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ: ಪುಷ್ಪ ಸಿನಿಮಾ ನಟ ಅರೆಸ್ಟ್

ಭಾ.ಮಾ.ಹರೀಶ್, ನಿರ್ಮಾಪಕ ನಂದಳಿಕೆ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ಈ ಪ್ರಶಸ್ತಿಯ ಸಂಸ್ಥಾಪರಾಗಿದ್ದು, ಭಾ.ಮಾ ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಆಶೋಕ್ ಅವರು ಡೈರೆಕ್ಟರ್ಸ್.

ಈ ವರ್ಷ ಪ್ರಶಸ್ತಿ ಪಡೆದವರ ಪಟ್ಟಿ:

1. ಬೆಸ್ಟ್ ಬಯೋಪಿಕ್ ಅವಾರ್ಡ್ - ವಿಜಯಾನಂದ ಫಿಲ್ಮ್.

2. ಲೆಜೆಂಡರಿ ಆ್ಯಕ್ಟ್ರೆಸ್ ಅವಾರ್ಡ್ - ಲೀಲಾವತಿ.

3. ಜೀವಮಾನ ಸಾಧನೆ ಪ್ರಶಸ್ತಿ - ನಟ ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್.

4. ಅತ್ಯತ್ತಮ ಡಾಕ್ಯುಮೆಂಟ್ರಿ ಪ್ರಶಸ್ತಿ - ಗಂಧದಗುಡಿ.

5. ಬೆಸ್ಟ್ ಡೆಬ್ಯೂಟ್ ಆ್ಯಕ್ಟರ್ - ವಿಕ್ರಮ್ ರವಿಚಂದ್ರನ್.

6. ಬೆಸ್ಟ್ ಡೆಬ್ಯೂಟ್ ಆ್ಯಕ್ಟ್ರೆಸ್ - ರೀಷ್ಮಾ ನಾಣಯ್ಯ.

7. ಬೆಸ್ಟ್ ಕಾಮಿಡಿಯನ್ - ರಂಗಾಯಣ ರಘು.

8. ಬೆಸ್ಟ್ ಕಾಮಿಕ್ ರೋಲ್ - ಹೇಮಾದತ್.

9. ಬೆಸ್ಟ್ ಸಪೋರ್ಟಿಂಗ್ ರೋಲ್ - ವೀಣಾ ಸುಂದರ್.

10. ಬೆಸ್ಟ್ ಕ್ರಿಟಿಕ್ಸ್ ಆ್ಯಕ್ಟರ್ - ಸಂಚಾರಿ ವಿಜಯ್ (ಮರಣೋತ್ತರ).

11. ಅತ್ಯುತ್ತಮ ಸಂಭಾಷಣೆಕಾರ - ಮಾಸ್ತಿ.

12. ಅತ್ಯುತ್ತಮ ಚಿತ್ರ - 777 ಚಾರ್ಲಿ.

13. ಅತ್ಯುತ್ತಮ ನಿರ್ದೇಶಕ - ರಿಷಬ್ ಶೆಟ್ಟಿ.

14. ಅತ್ಯುತ್ತಮ ನಟ - ರಿಷಬ್ ಶೆಟ್ಟಿ.

15. ಅತ್ಯುತ್ತಮ ನಟಿ - ಸಪ್ತಮಿ ಗೌಡ.

ABOUT THE AUTHOR

...view details