ಕರ್ನಾಟಕ

karnataka

'ಕೆಜಿಎಫ್' ಹಿಂದಿಕ್ಕಿ ಎರಡನೇ ಅತಿದೊಡ್ಡ ಕನ್ನಡ ಚಿತ್ರವಾಗಿ ಹೊರಹೊಮ್ಮಿದ 'ಕಾಂತಾರ'

By

Published : Oct 25, 2022, 2:19 PM IST

Updated : Oct 25, 2022, 6:59 PM IST

ಬಿಡುಗಡೆಯಾದ ಅಲ್ಪ ಅವಧಿಯಲ್ಲಿ ಕಾಂತಾರ ಚಿತ್ರವು ವಿಶ್ವಾದ್ಯಂತ 188 ಕೋಟಿ ಗಳಿಸುವ ಮೂಲಕ ಕೆಜಿಎಫ್ ಅನ್ನು ಹಿಂದಿಕ್ಕಿದೆ.

'Kantara' beats 'KGF' to become second biggest Kannada film
'Kantara' beats 'KGF' to become second biggest Kannada film

ಮುಂಬೈ (ಮಹಾರಾಷ್ಟ್ರ) : ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ 'ಕಾಂತಾರ' ಮಗದೊಂದು ದಾಖಲೆ ಮಾಡಿದೆ. ಬಿಡುಗಡೆಗೊಂಡು 25 ದಿನ ಕಳೆದರೂ ಹಣ ಗಳಿಕೆಯಲ್ಲಿ ಮುನ್ನುಗ್ಗುತ್ತಿದ್ದು, ಈ ವಿಚಾರದಲ್ಲಿ ಹೊಸ ಅಧ್ಯಾಯ ಬರೆದಿದೆ. ಕರ್ನಾಟಕ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿ ಹೊಸ ಅಲೆ ಎಬ್ಬಿಸಿರುವ ಕಾಂತಾರ ಚಿತ್ರವು, ಯಶ್ ಅಭಿನಯದ 'ಕೆಜಿಎಫ್' ಅನ್ನು ಹಿಂದಿಕ್ಕಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಕನ್ನಡ ಚಿತ್ರವಾಗಿ ಹೊರಹೊಮ್ಮಿದೆ.

ಅತ್ಯಂತ ಕಡಿಮೆ ಬಜೆಟ್​ನಲ್ಲಿ ನಿರ್ಮಾಣಗೊಂಡ ಕಾಂತಾರ ಚಿತ್ರವು ಈ ಪ್ರಮಾಣದಲ್ಲಿ ಕ್ರೇಜ್​ ಹೆಚ್ಚಿಸಿರುವುದು ಕನ್ನಡ ಸಿನಿಮಾ ರಂಗದಲ್ಲಿ ಮೊದಲು ಎನ್ನಲಾಗುತ್ತಿದೆ. ಈ ಚಿತ್ರದಿಂದ ರಿಷಬ್ ಶೆಟ್ಟಿ ಅವರ ವರ್ಚಸ್ಸನ್ನು ಕೂಡ ಹೆಚ್ಚಾಗಿದೆ.

ಈ ವರೆಗಿನ ಮಾಹಿತಿ ಪ್ರಕಾರ ಭಾರತದಲ್ಲಿ 170 ಕೋಟಿ ಗಳಿಸಿರುವ ಕಾಂತಾರ ವಿದೇಶದಲ್ಲಿ 18 ಕೋಟಿ ರೂ. ಕಲೆಕ್ಷನ್​ ಮಾಡಿಕೊಂಡಿದೆ. ವಿಶ್ವದಾದ್ಯಂತ ಒಟ್ಟು 188 ಕೋಟಿ ಗಳಿಸುವ ಮೂಲಕ 'ಕೆಜಿಎಫ್' ಅನ್ನು ಹಿಂದಿಕ್ಕಿ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಕನ್ನಡ ಚಿತ್ರವಾಗಿದೆ.

ದೀಪಾವಳಿ ಹಬ್ಬದ ಜೊತೆಗೆ ವೀಕೆಂಡ್​ ಕೂಡ ಆಗಮಿಸಿದ್ದು ಚಿತ್ರದ ಗಳಿಕೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ಪಿಂಕ್‌ವಿಲ್ಲಾ ಡಾಟ್‌ಕಾಮ್ ಪ್ರಕಾರ 4ನೇ ವಾರದ ಅಂತ್ಯದೊಳಗೆ ಚಿತ್ರ 200 ಕೋಟಿ ರೂಪಾಯಿಗಳ ಗಡಿ ದಾಟಲಿದೆ ಎನ್ನಲಾಗುತ್ತಿದೆ.

ಚಿತ್ರವು ಕರ್ನಾಟಕದಲ್ಲಿ ಇದುವರೆಗೆ ಸರಿಸುಮಾರು 111 ಕೋಟಿ ರೂಪಾಯಿಗಳನ್ನು ಗಳಿಸಿದೆ. ಬಿಡುಗಡೆಯಾದ ನಾಲ್ಕನೇ ವಾರಾಂತ್ಯದಲ್ಲಿ 14 ಕೋಟಿ ರೂಪಾಯಿಗಳನ್ನು ಗಳಿಸಿದ್ದು 'ಕೆಜಿಎಫ್ 2' ಕಲೆಕ್ಷನ್​ಗೆ ಹೋಲಿಸಿದರೆ ಇದು ದುಪ್ಪಟ್ಟು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ದಾಖಲೆಗಳೆಲ್ಲ ಧೂಳಿಪಟ.. ಕಾಂತಾರ - ಕರ್ನಾಟಕದಲ್ಲಿ ಅತೀ ಹೆಚ್ಚು ಜನ ವೀಕ್ಷಿಸಲ್ಪಟ್ಟ ಚಿತ್ರ

Last Updated : Oct 25, 2022, 6:59 PM IST

ABOUT THE AUTHOR

...view details